Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bellary | ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ

Bellary

ಟಿಬಿ ಡ್ಯಾಂ ಮುಂದಿನ 50 ವರ್ಷ ಸುಭದ್ರ, ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ- ಮೇ 15ಕ್ಕೆ ಲೋಕಾರ್ಪಣೆ: ಡಿಕೆಶಿ

Public TV
Last updated: May 3, 2026 4:13 pm
Public TV
Share
2 Min Read
DK Shivakumar TB Dam
SHARE

ವಿಜಯನಗರ: ತುಂಗಭದ್ರಾ ಜಲಾಶಯದ(Tungabhadra Dam) ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, 73 ವರ್ಷಗಳ ಹಳೆಯ ಕ್ರಸ್ಟ್ ಗೇಟ್‌ಗಳ(Crest Gate) ಜಾಗದಲ್ಲಿ ಹೊಸ ಗೇಟ್‌ಗಳನ್ನು ಅಳವಡಿಸುವ ಸಾಹಸಮಯ ಕಾರ್ಯ ಯಶಸ್ವಿಯಾಗಿ ಮುಕ್ತಾಯದ ಹಂತಕ್ಕೆ ತಲುಪಿದೆ.

ಇಂದು ಜಲಾಶಯಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೊಸ ಗೇಟ್‌ಗಳ ಅಳವಡಿಕೆ ಕಾರ್ಯವನ್ನು ವೀಕ್ಷಿಸಿ, ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2024ರ ಆಗಸ್ಟ್ 10 ರಂದು ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಲಿಂಕ್ ಕಟ್ ಆಗಿ ಕೊಚ್ಚಿ ಹೋಗಿತ್ತು. ಈ ತುರ್ತು ಪರಿಸ್ಥಿತಿಯನ್ನು ಜಲಾಶಯದ ತಜ್ಞ ಕನ್ಹಯ್ಯ ನಾಯ್ಡು ಅವರ ನೇತೃತ್ವದಲ್ಲಿ ಹರಿಯುವ ನೀರಿನಲ್ಲೇ ಸ್ಟಾಪ್ ಲಾಗ್ ಗೇಟ್ (Stop Log Gate) ಅಳವಡಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಲಾಗಿತ್ತು. ಬಳಿಕ ತಜ್ಞರ ಸಮಿತಿಯ ಸೂಚನೆಯಂತೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ 33 ಹಳೆಯ ಗೇಟ್‌ಗಳನ್ನು ತೆಗೆದು ಹೊಸ ಗೇಟ್ ಅಳವಡಿಸಲು ನಿರ್ಧರಿಸಲಾಗಿತ್ತು.  ಇದನ್ನೂ ಓದಿ: ಜೀವರಾಜ್‌ ಜೊತೆ ಕೆಲಸ ಮಾಡ್ತಿದ್ದ ಅಧಿಕಾರಿಗಳನ್ನ ಬಳಸಿಕೊಂಡು ಅಕ್ರಮ: ಡಿಕೆಶಿ ಕೆಂಡಾಮಂಡಲ

ಇಂದು ಬೆಳಗ್ಗೆ 9:30ಕ್ಕೆ ಜಲಾಶಯಕ್ಕೆ ಆಗಮಿಸಿದ ಡಿಸಿಎಂ ಅವರಿಗೆ ಸಚಿವರಾದ ಬೋಸರಾಜು, ಶಿವರಾಜ್ ತಂಗಡಗಿ ಹಾಗೂ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸಾಥ್ ನೀಡಿದರು. ಟಿಬಿ ಡ್ಯಾಂ ಮಂಡಳಿ ಅಧಿಕಾರಿಗಳು ಹೊಸ ಕ್ರಸ್ಟ್ ಗೇಟ್‌ಗಳನ್ನು ಏರಿಸುವ ಮೂಲಕ ಪ್ರಾಯೋಗಿಕ ಪರೀಕ್ಷೆ (Trial) ನಡೆಸಿದರು.

ತುಂಗಭದ್ರಾ ನದಿ ತಟದ ಅನ್ನದಾತರ ಬದುಕು ಭದ್ರ

ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆನು.

ಮುಂಗಾರು ಆರಂಭಕ್ಕೂ ಮುನ್ನವೇ 33 ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವುದಾಗಿ ತುಂಗಭದ್ರಾ ತಟದ ರೈತರಿಗೆ… pic.twitter.com/4ip27YahPv

— DK Shivakumar (@DKShivakumar) May 3, 2026

ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಒಟ್ಟು 54 ಕೋಟಿ ರೂಪಾಯಿ ವೆಚ್ಚದಲ್ಲಿ 33 ಹೊಸ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದು ಅತ್ಯಂತ ಸವಾಲಿನ ಮತ್ತು ಮಾದರಿ ಕೆಲಸವಾಗಿದೆ.ಹೊಸ ಗೇಟ್ ಅಳವಡಿಕೆ ಕಾಮಗಾರಿ ಮೇ 7ಕ್ಕೆ ಸಂಪೂರ್ಣಗೊಳ್ಳಲಿದ್ದು, ಮೇ 15ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ಗೇಟ್ ಅಳವಡಿಕೆ ಮುಗಿದಿದ್ದು, ಹೊಸ ಚೈನ್ ಅಳವಡಿಕೆ ಕಾರ್ಯ ಬಾಕಿ ಇದೆ. ತಮಿಳುನಾಡಿನ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಗಿದ್ದು, ಮೇ ಅಂತ್ಯಕ್ಕೆ ಚೈನ್ ಅಳವಡಿಕೆ ಕೂಡ ಪೂರ್ಣಗೊಳ್ಳಲಿದೆ. ಜಲಾಶಯದ ಕಾಲುವೆಗಳ ದುಸ್ತಿಗೆ 315 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

 

ಈ ಹೊಸ ಗೇಟ್‌ಗಳ ಅಳವಡಿಕೆಯಿಂದ ಮುಂದಿನ 50 ವರ್ಷಗಳ ಕಾಲ ಜಲಾಶಯಕ್ಕೆ ಯಾವುದೇ ಅಪಾಯ ಇರುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಕೊಪ್ಪಳದ ನವಲಿ ಸಮನಾಂತರ ಜಲಾಶಯಕ್ಕೆ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಇನ್ನೂ ಒಪ್ಪಿಗೆ ನೀಡಿಲ್ಲ. ಪರ್ಯಾಯವಾಗಿ ಪಂಪ್ ಮೂಲಕ ನೀರು ಬಳಸುವ ಬಗ್ಗೆಯೂ ಚಿಂತನೆ ಇದೆ. ಇನ್ನು ಜಲಾಶಯದ ಹೂಳು ತೆಗೆಯಲು ಗ್ಲೋಬಲ್ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ನಮ್ಮನ್ನು ಹೆಚ್ಚು ಜಾಗೃತವಾಗಿರಿಸುತ್ತವೆ. ಆದರೆ ನಾವು ಜನರ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.

TAGGED:congressDK ShivakumarStop Log GateTungabhadra Damಕಾಂಗ್ರೆಸ್ಡಿಕೆ ಶಿವಕುಮಾರ್ತುಂಗಾಭದ್ರಾ ಜಲಾಶಯ
Share This Article
Facebook Whatsapp Whatsapp Telegram

Cinema news

Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi

You Might Also Like

Air Arabia flight
Latest

ಫ್ಲೈಟ್‌ನಲ್ಲಿ 2 ಬಾರಿ ವಾಂತಿ – ಚೆನ್ನೈನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಹೊರಕ್ಕೆ ಜಿಗಿದ ಪ್ರಯಾಣಿಕ

Public TV
By Public TV
3 minutes ago
Preity Zinta Invites PBKS Fan Injured
Cricket

ಸಿಕ್ಸರ್‌ನಿಂದ ಗಾಯಗೊಂಡಿದ್ದ ಅಭಿಮಾನಿಗೆ ವಿವಿಐಪಿ ಟಿಕೆಟ್ ನೀಡಿದ ಪ್ರೀತಿ ಜಿಂಟಾ

Public TV
By Public TV
9 minutes ago
Swamiji
Bengaluru City

ಪೂಜೆ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಕಾಮಿ ಸ್ವಾಮಿಯ ಮುಖವಾಡ ಕಳಚಿದ ಮಹಿಳೆ

Public TV
By Public TV
32 minutes ago
Rain 2
Bagalkot

ಇಂದಿನಿಂದ ಮೇ 9 ರವರೆಗೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

Public TV
By Public TV
35 minutes ago
tigers
Chamarajanagar

ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ತಾಯಿ, ಮೂರು ಹುಲಿ ಮರಿಗಳ ದರ್ಶನ

Public TV
By Public TV
38 minutes ago
crocodile
Crime

ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ – ಗಂಭೀರ ಗಾಯ

Public TV
By Public TV
53 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?