ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ (Mangaluru Cooker Blast) ಅಪರಾಧಿ ಉಗ್ರ ಶಾರಿಖ್ಗೆ ವಿಧಿಸಲಾದ 10 ವರ್ಷ ಕಠಿಣ ಶಿಕ್ಷೆಯ ಪ್ರಮಾಣವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಎನ್ಐಎ (NIA) ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
10 ವರ್ಷ ಶಿಕ್ಷೆ ತುಂಬಾ ಕಡಿಮೆ ಆಯ್ತು ಎಂದು ಎನ್ಐಎ ನಿರ್ಧರಿಸಿದೆ. ಶಾರಿಕ್ಗೆ ಈಗ 27 ವರ್ಷ, ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಇನ್ನೂ 7 ವರ್ಷ ಮಾತ್ರ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಇದನ್ನೂ ಓದಿ: ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ – ಉಗ್ರ ಶಾರಿಕ್ಗೆ 10 ವರ್ಷ ಜೈಲು ಶಿಕ್ಷೆ
7 ವರ್ಷದಲ್ಲಿ ಆತನಿಗೆ 34 ವರ್ಷ ಆಗಲಿದೆ. ಮಧ್ಯಮ ವಯಸ್ಕನಾಗಿ ಹೊರಗೆ ಬಂದ್ರೆ ಮತ್ತೆ ಭಯೋತ್ಪಾದಕ ಕೃತ್ಯದಲ್ಲಿ ಆತ ಭಾಗಿ ಆಗುವ ಸಾಧ್ಯತೆ ಇದೆ. ಮನ ಪರಿವರ್ತನೆ ಸಾಧ್ಯತೆ ತೀರಾ ಕಡಿಮೆ ಎಂದು ಎನ್ಐಎ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕನಿಷ್ಟ 20 ರಿಂದ 30 ವರ್ಷ ಜೈಲಿನಲ್ಲಿ ಆತನನ್ನು ಇರಿಸಲು ಎನ್ಐಎ ತೀರ್ಮಾನಿಸಿದೆ.
ಏ.27 ರಂದು ಉಗ್ರ ಶಾರಿಖ್ಗೆ ಸೆಕ್ಷನ್ 121 ಎ, ಸೆಕ್ಷನ್ 122, ಸೆಕ್ಷನ್ 326 ಹಾಗೂ ಯುಎಪಿಎ ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಕೋರ್ಟ್ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನೂ ಓದಿ: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ – ಪ್ರಕರಣದ 3ನೇ ಅಪರಾಧಿಗೆ 6 ವರ್ಷ ಜೈಲು

