ಬೆಂಗಳೂರು: ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಏ.25 – 26 ರಂದು ಆಯೋಜನೆಗೊಂಡಿರುವ ಪಬ್ಲಿಕ್ ಟಿವಿ ‘ವಿದ್ಯಾಪೀಠʼಶೈಕ್ಷಣಿಕ (Public TV Vidhyapeeta) ಮೇಳದಲ್ಲಿ ದ್ವಿತೀಯ ಪಿಯುಸಿಯಲ್ಲಿ (PUC Students) 90% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ. ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದಲ್ಲಿ ಉಡುಗೊರೆ ಸಿಗಲಿದೆ.
ಇಂದಿನ ಕಲಿಕೆ ನಾಳೆಯ ದಾರಿ ದೀಪ ಘೋಷವಾಕ್ಯದೊಂದಿಗೆ ʻಪಬ್ಲಿಕ್ ಟಿವಿʼ ವಿದ್ಯಾಪೀಠ ಎನ್ನುವ ಅತಿ ದೊಡ್ಡ ಶೈಕ್ಷಣಿಕ ಮೇಳ ಆಯೋಜಿಸಿದೆ. ಪ್ಯಾಲೇಸ್ ಗ್ರೌಂಡ್‌ನ ಗಾಯತ್ರಿ ವಿಹಾರದಲ್ಲಿ ಬೆ 9 ರಿಂದ ,6 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, ಉಚಿತ ಪ್ರವೇಶ ಇರಲಿದೆ. ಪದವಿ ನಂತರದ ಕೋರ್ಸ್, ಸ್ನಾತಕೋತ್ತರ ಪದವಿ, ಔದ್ಯೋಗಿಕ ವೃತ್ತಿಪರ ಕೋರ್ಸ್‌ಗಳ ಮಾಹಿತಿಯ ಹೂರಣ ಇಲ್ಲಿ ದೊರೆಯುತ್ತದೆ. 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಕರ್ನಾಟಕ ಪರೀಕ್ಷಾ ಮಂಡಳಿಯ ಅಧಿಕಾರಿಗಳ ಟೀಮ್ ಜೊತೆಗೆ ಸಂವಾದ ಕೂಡ ಇರಲಿದೆ. ಸಿಇಟಿ ಕಾಮೆಡ್ ಕೆ ಮಾಹಿತಿಯೂ ಸಿಗಲಿದೆ. ಇದನ್ನೂ ಓದಿ: ನಾಳೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ, ಪದವಿ ಫಲಿತಾಂಶ ಬಂದ ಮೇಲೆ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸಬೇಕು? ಉತ್ತಮ ಕಾಲೇಜು ಆಯ್ಕೆ ಹೇಗೆ? ಯಾವ ಕೋರ್ಸ್‍ಗೆ ಸೇರಿಸಿದರೆ ಸೂಕ್ತ? ಪ್ರವೇಶ ಶುಲ್ಕ, ಕೋರ್ಸ್‍ಗಳ ಆಯ್ಕೆ, ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೇಗೆ ಎಂಬ ಗೊಂದಲ ಪೋಷಕರಲ್ಲಿ ಇದ್ದೇ ಇರುತ್ತೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಒಂದೇ ಸೂರಿನಡಿ ಸೂಕ್ತ ವೇದಿಕೆ ಕಲ್ಪಿಸಿ ಗೊಂದಲ ನಿವಾರಿಸಲು ಪಬ್ಲಿಕ್ ಟಿವಿಯ 9ನೇ ಆವೃತ್ತಿಯ ವಿದ್ಯಾಪೀಠ ಶೈಕ್ಷಣಿಕ ಮೇಳ ಆಯೋಜಿಸಿದೆ.
ಈ ಬಗ್ಗೆ ಮಾತಾಡಿರುವ ʻಪಬ್ಲಿಕ್ ಟಿವಿʼಯ ಸಿಒಒ ಸಿ.ಕೆ. ಹರೀಶ್ ಕುಮಾರ್, ಈಗಿನ ಸ್ಪರ್ಧಾ ಜಗತ್ತಿನಲ್ಲಿ ಶೈಕ್ಷಣಿಕ ವಿಷಯಗಳ ವಿಸ್ತಾರ ಹೆಚ್ಚುತ್ತಲೇ ಇದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ಆಶಯವಾಗಿರುತ್ತದೆ. ಆದರೆ ನಿರ್ಧಾರಗಳು ಸ್ಪಷ್ಟವಾಗುತ್ತಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಮುಂದಿನ ಆಯ್ಕೆಯ ಸವಾಲುಗಳು ಹೆಚ್ಚಾಗಿವೆ. ಈ ಗೊಂದಲ ನಿವಾರಿಸಿ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿಮ್ಮ ಪಬ್ಲಿಕ್ ಟಿವಿ ವಿದ್ಯಾಪೀಠ ಶೈಕ್ಷಣಿಕ ಮೇಳವನ್ನು ಆಯೋಜಿಸಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ.. ಲ್ಯಾಪ್‌ಟಾಪ್ ಗೆಲ್ಲಿ


