ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ವಲಸಿಗರ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಜನ್ಮಸಿದ್ಧ ಪೌರತ್ವದ (Birthright Citizenship) ನಿಯಮವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅವರು ವಲಸಿಗರನ್ನು ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಟ್ರಂಪ್ ಅವರು ತಮ್ಮ ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಈ ಪತ್ರದಲ್ಲಿ ಭಾರತ (India) ಮತ್ತು ಚೀನಾವನ್ನು (China) ಕೇವಲ ನರಕದ ಕೂಪಗಳು (Hellholes) ಎಂದು ಕರೆಯುವುದರ ಜೊತೆಗೆ ಇವುಗಳು “ನಾಗರಿಕತೆಯ ತೊಟ್ಟಿಲುಗಳಲ್ಲ” ಎಂದು ವಿವಾದಾತ್ಮಕವಾಗಿ ಹೀಯಾಳಿಸಲಾಗಿದೆ.
ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರನ್ನು “Gangsters with Laptops” ಎಂದು ಕರೆಯುವ ಮೂಲಕ, ಅವರು ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟ್ರಂಪ್ ದೂರಿದ್ದಾರೆ. ಇದನ್ನೂ ಓದಿ: ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!
ಭಾರತ ಮತ್ತು ಚೀನಾದಂತಹ ದೇಶಗಳಿಂದ ಜನರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಇಲ್ಲಿ ಮಗುವಿಗೆ ಜನ್ಮ ನೀಡಿ, ಮಗುವಿಗೆ ಜನ್ಮಸಿದ್ಧವಾಗಿ ಸಿಗುವ ಅಮೆರಿಕದ ಪೌರತ್ವವನ್ನು ಪಡೆಯುತ್ತಿದ್ದಾರೆ. ಇದು ಅಮೆರಿಕದ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಗರ್ಭಿಣಿಯರು 9ನೇ ತಿಂಗಳಲ್ಲಿ ಅಮೆರಿಕಕ್ಕೆ ಬಂದು ಮಗು ಹೆರುವ ಮೂಲಕ ಪೌರತ್ವ ಪಡೆಯುವ ʼಹೆರಿಗೆ ಪ್ರವಾಸʼವನ್ನು (Birth Tourism) ಕೊನೆಗಾಣಿಸುವುದಾಗಿ ಹೇಳಿದ್ದಾರೆ.
ಜನ್ಮಸಿದ್ಧ ಪೌರತ್ವವನ್ನು ನೀಡಲು ಅನುಮತಿಸುವ ವಿಶ್ವದ ಏಕೈಕ ಮೂರ್ಖ ದೇಶ ಅಮೆರಿಕ ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. “Birthright Citizenship… is about the BABIES OF SLAVES!” ಎಂಬ ಹೇಳಿಕೆಯ ಮೂಲಕ ಈ ನಿಯಮವು ಪ್ರವಾಸಿಗರಿಗೆ ಅನ್ವಯಿಸಬಾರದು ಎಂಬ ವಾದವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ.
ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಅಲ್ಲಿ ಜನಿಸುವ ಯಾವುದೇ ಮಗುವಿಗೆ ತಾನಾಗಿಯೇ ಪೌರತ್ವ ಸಿಗುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಗರ್ಭಿಣಿಯರು ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು, ಮಗು ಹೆರುವ ಮೂಲಕ ಆ ಮಗುವಿಗೆ ಇನ್‌ಸ್ಟಂಟ್ ಪೌರತ್ವ ಪಡೆಯುತ್ತಿದ್ದಾರೆ. ಒಮ್ಮೆ ಮಗುವಿಗೆ ಪೌರತ್ವ ಸಿಕ್ಕರೆ, ನಂತರ ಆ ಮಗುವಿನ ಮೂಲಕ ಇಡೀ ಕುಟುಂಬವನ್ನೇ ಅಮೆರಿಕಕ್ಕೆ ಕರೆಸಿಕೊಳ್ಳುತ್ತಾರೆ. ಇದನ್ನು ಅವರು “ಆಂಕರ್ ಬೇಬಿ” ಸಮಸ್ಯೆ ಎಂದು ಕರೆದಿದ್ದಾರೆ. ಇದನ್ನೂ ಓದಿ: ಡಿಜಿಟಲ್ ಹೆದ್ದಾರಿಯನ್ನೇ ಕತ್ತರಿಸುತ್ತೇವೆ – ವಿಶ್ವಕ್ಕೆ ಇರಾನ್ ಬೆದರಿಕೆ | ಭಾರತಕ್ಕೆ ಏನು?



