ಐಪಿಎಲ್‌ನಲ್ಲಿ (IPL) ಈವರೆಗೂ ಬಳಕೆಯಾಗದ ‘ಪ್ಲೇಯರ್ ಲೋನ್’ (IPL Players Loan) ನಿಯಮದ ಬಗ್ಗೆ ಆರ್. ಅಶ್ವಿನ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಗಾಯದಿಂದ ಹೊರಬಿದ್ದಿರುವ ಸಿಎಸ್‌ಕೆ (CSK) ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಬದಲಿಗೆ, ಆರ್‌ಸಿಬಿ (RCB) ತಂಡದಲ್ಲಿರುವ ಪ್ರತಿಭಾವಂತ ಬ್ಯಾಟರ್ ವಿಹಾನ್ ಮಲ್ಹೋತ್ರಾ ಅವರನ್ನು ಲೋನ್ ಮೂಲಕ ಪಡೆಯಲು ಅವರು ಸಲಹೆ ನೀಡಿದ್ದಾರೆ.
ನಿಯಮದ ಪ್ರಕಾರ, ಎರಡು ಪಂದ್ಯಕ್ಕಿಂತ ಕಡಿಮೆ ಆಡಿರುವ ಆಟಗಾರನನ್ನು ತಂಡಗಳು ಪರಸ್ಪರ ಹಂಚಿಕೊಳ್ಳಬಹುದಾಗಿದೆ. ಪ್ರಸ್ತುತ ಅಂಕಪಟ್ಟಿಯ ಲೆಕ್ಕಾಚಾರದ ಮೇಲೆ ಆರ್‌ಸಿಬಿ ಈ ಲಾಭದ ಅವಕಾಶ ಬಳಸಿಕೊಳ್ಳಲಿದೆಯೇ ಮತ್ತು ಸಿಎಸ್‌ಕೆ ಈ ಅಪರೂಪದ ಹಾದಿ ಹಿಡಿಯಬಹುದೇ ಎಂಬ ಕುತೂಹಲ ಮೂಡಿಸಿದೆ. ಇದನ್ನೂ ಓದಿ: 2027 ರ ಏಕದಿನ ವಿಶ್ವಕಪ್ ವರೆಗೆ ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಮುಖ್ಯಸ್ಥ?
ಐಪಿಎಲ್‌ನಲ್ಲಿ ಹತ್ತಾರು ನಿಮಯಗಳಿವೆ. ಕೆಲವೊಂದನ್ನು ಅಪರೂಪಕ್ಕೆ ಬಳಸಲಾಗುತ್ತದೆ. ಕೆಲವೊಂದು ಈವರೆಗೂ ಬಳಸಲ್ಪಟ್ಟಿಲ್ಲ. ಅಂಥವುಗಳಲ್ಲಿ ಪ್ಲೇಯರ್ ಲೋನ್ ರೂಲ್ ಸಹ ಒಂದಾಗಿದೆ. ಗಾಯದ ಸಮಸ್ಯೆಯನ್ನು ಎದುರಿಸುತ್ತುರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗಾಯಾಳು ಆಯುಷ್ ಮ್ಹಾತ್ರೆಗೆ ಬದಲಾಗಿ ಆರ್ ಸಿಬಿಯ ವಿಹಾನ್ ಮಲ್ಹೋತ್ರಾ ಅವರನ್ನು ಲೋನ್ ನಿಯಮದಡಿ ತಂಡಕ್ಕೆ ಸೇರಿಸಿಕೊಂಡು ಆಡಿಸಬೇಕು ಎಂದು ಆರ್. ಅಶ್ವಿನ್ ಸಲಹೆ ನೀಡಿದ್ದಾರೆ.
With so many injuries on the horizons!
The loan window closes after the 7th game mark & it will be a great idea to loan this sensational talent from RCB.
He hasn’t played a single game so far, hence it is a viable option.
If not Vihaan, Abhigyan Kundu is also a left handed… pic.twitter.com/CimZCIjTyV
— Ashwin 🇮🇳 (@ashwinravi99) April 21, 2026
2018ರಲ್ಲಿ ಮೊದಲ ಬಾರಿಗೆ ಈ ನಿಯಮವನ್ನು ಐಪಿಎಲ್‌ನಲ್ಲಿ ಅಳವಡಿಸಲಾಯಿತು. ಗಾಯದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಇದನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಡಿಯಲ್ಲಿ ಒಂದು ಫ್ರಾಂಚೈಸಿಯು ಮತ್ತೊಂದು ತಂಡದಿಂದ ಆಟಗಾರನನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಅಥವಾ ಸಾಲವಾಗಿ ಪಡೆಯಬಹುದು.
ಲೋನ್ ನಿಯಮ
ನಮಗೆ ಬೇಕಾದ ಯಾವುದೇ ಆಟಗಾರನನ್ನು ಲೋನ್ ನಿಯಮದಡಿ ಪಡೆಯಲು ಸಾಧ್ಯವಿಲ್ಲ. ಕೇವಲ ಪ್ರಸಕ್ತ ಸೀಸನ್‌ನಲ್ಲಿ ಗರಿಷ್ಠ 2 ಪಂದ್ಯಗಳಿಗಿಂತ ಹೆಚ್ಚು ಆಡದ ಆಟಗಾರರು ಮಾತ್ರ ಈ ಲೋನ್ ಪ್ರಕ್ರಿಯೆಗೆ ಅರ್ಹರಾಗಿರುತ್ತಾರೆ.
ಈ ಲೋನ್ ವಿಂಡೋ ಸಾಮಾನ್ಯವಾಗಿ ಟೂರ್ನಿಯ 20ನೇ ಪಂದ್ಯದಿಂದ ಆರಂಭವಾಗಿ 37ನೇ ಪಂದ್ಯದವರೆಗೆ ಅಥವಾ ತಂಡಗಳ 7ನೇ ಪಂದ್ಯದ ನಂತರ ಮುಕ್ತಾಯಗೊಳ್ಳುತ್ತದೆ.
ಲೋನ್ ಪಡೆದ ಆಟಗಾರನು ಆ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಬಾಡಿಗೆ ಪಡೆದ ತಂಡದ ಪರ ಆಡಬಹುದು. ಆದರೆ ಅತೀ ಮುಖ್ಯವಾದ ವಿಷಯವೆಂದರೆ ಆ ಆಟಗಾರನು ತನ್ನ ಮೂಲ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ. ಇದನ್ನೂ ಓದಿ: ಕೆಕೆಆರ್‌ಗೆ ಶ್ರೀಲಂಕಾ ವೇಗಿ ಎಂಟ್ರಿ – ಸತತ 6 ಸೋಲುಗಳಿಂದ ಕಂಗೆಟ್ಟಿರೋ ತಂಡಕ್ಕೆ ಸಿಗುತ್ತಾ ಬೂಸ್ಟ್?



