Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು

Bengaluru City

ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು

Public TV
Last updated: April 22, 2026 8:37 am
Public TV
Share
3 Min Read
Bharath Bhushan Pahalagam Attack
SHARE

ಬೆಂಗಳೂರು: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Attack) ಇಂದಿಗೆ ಒಂದು ವರ್ಷ. ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದ ಭರತ್ ಭೂಷಣ್ (Bharath Bhushan) ಕುಟುಂಬದಲ್ಲಿ ನೀರವ ಮೌನವಿದೆ. ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ (Baisaran Valley) ನಡೆದ ಭೀಕರ ಭಯೋತ್ಪಾದಕ ದಾಳಿಗೆ ಒಂದು ವರ್ಷದ ಕರಾಳ ನೆನಪು. 25 ಪ್ರವಾಸಿಗರು, ಓರ್ವ ಸ್ಥಳೀಯ ಸೇರಿ 26 ಜನ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಈ ದಾಳಿಗೆ ಭಾರತ ‘ಆಪರೇಷನ್ ಸಿಂಧೂರ’ ಮೂಲಕ ಪ್ರತಿಕಾರ ತೀರಿಸಿಕೊಂಡಿತು. ಆದರೆ ಈ ಕರಾಳ ನೆನಪು, ತಮ್ಮವರನ್ನ ಕಳೆದುಕೊಂಡವರಿಗೆ ಪ್ರತಿಕ್ಷಣವೂ ಕಾಡುತ್ತಿದೆ. ಭರತ್ ಭೂಷನ್‌ರನ್ನ ಕಳೆದುಕೊಂಡು, ಪತ್ನಿ, ಪೋಷಕರು ಬೆಂಗಳೂರಿನಲ್ಲಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: 20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!

ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾಗಿದ್ದ ಭರತ್ ಭೂಷಣ್, ಪತ್ನಿ ಡಾ. ಸುಜಾತ ಹಾಗೂ ಮಗು ಜೊತೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಉಗ್ರರು ಭರತ್ ಭೂಷಣ್ ತಲೆಗೆ ಗುಂಡು ಹಾರಿಸಿ ಜೀವ ತೆಗೆದಿದ್ದರು. ಭರತ್ ಭೂಷಣ್ ಮನೆಯಲ್ಲಿ ಇದೀಗ ನೀರವ ಮೌನವಿದ್ದು, ಮಗನನ್ನು ನೆನೆದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನ ಕಂಡಿದ್ದ ಮಗ, ಕಣ್ಮುಂದೆಯೇ ಇಲ್ವಾಲ್ಲ ಎಂದು ದುಃಖಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ನರಮೇಧಕ್ಕೆ 1 ವರ್ಷ – ದಾಳಿಯಲ್ಲಿ ಪ್ರಾಣ ತೆತ್ತ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

Jammu Kashmir Pahalgam Terrorist Attack Techie Bharath Bhushan Bengaluru

ಭೂಷಣ್ ನೆನಪಿನಲ್ಲಿಯೇ ಕುಟುಂಬ ಜೀವನ ನಡೆಸುತ್ತಿದೆ. ಕೆಲಸದ ಮಧ್ಯೆ ತನ್ನ ಪತಿಯ ನೆನಪುಗಳನ್ನ ಮರೆಯಲು ಡಾ. ಸುಜಾತ ಪ್ರಯತ್ನಿಸುತ್ತಿದ್ದಾರೆ. ಆದರೂ ಆ ಕರಾಳ ನೆನಪು ಕಣ್ಮುಂದೆಯೇ ಬಂದು ನಿಲ್ಲುತ್ತಿವೆ. ‘ಆಪರೇಷನ್ ಸಿಂಧೂರ’ ಕಾರ್ಯಚರಣೆಯ ಮೂಲಕ ಭಾರತ ಪ್ರತಿಕಾರ ತೀರಿಸಿಕೊಂಡಿದ್ದರೂ, ತಮ್ಮವರನ್ನ ಕಳೆದುಕೊಂಡ ನೋವು ಆ ಮನೆಗಳಲ್ಲಿ ಮರೆಯೋದಕ್ಕೂ ಆಗುತ್ತಿಲ್ಲ. ಇದನ್ನೂ ಓದಿ: ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ; ಮಾಸದ ಗಾಯ, ನಿಲ್ಲದ ಕಣ್ಣೀರು – ʻಸಿಂಧೂರ’ ಸಾಂತ್ವನ

ಒಂದು ವರ್ಷ ಕಳೆದಿದ್ದೇ ಗೊತ್ತಾಗಿಲ್ಲ. ಅಷ್ಟು ಬೇಗ ದಿನಗಳು ಮುಂದೆ ಹೋಗಿದೆ. ದಿನ, ಪ್ರತಿಕ್ಷಣ ನೆನಪು ಬರುತ್ತೆ. ಕೆಲಸದಲ್ಲಿ ಬ್ಯುಸಿಯಾಗುತ್ತಾ ಜೀವನ ನಡೆಸ್ಕೊಂಡು ಹೋಗುತ್ತಿದ್ದೇನೆ. ಬಾರ್ಡರ್ ಒಳಗಡೆಯಿಂದ ಬಂದು ಕೃತ್ಯ ಮಾಡುವವರು ಮಾಡುತ್ತಲೇ ಇದ್ದಾರೆ. ಇದು ಯಾವಾಗ ಕಂಪ್ಲೀಟ್ ಆಗಿ ನಿಲ್ಲುತ್ತೋ ಆಗ ಸೇಫ್ ಆಗಿದಿವಿ ಅಂತ ಹೇಳಬಹುದು. ಸೇಫ್ ಆಗಿದಿವಿ ಅಂತನೇ ನಾವು ಕಾಶ್ಮೀರಕ್ಕೆ ಹೋಗಿದ್ದು. ಸೇಫ್ಟಿ ಅನ್ನೋದಕ್ಕೆ ನಂಬಿಕೆ ಹೊರಟೋಗಿದೆ. ಜೀವನದಲ್ಲಿ ಆಸೆಗಳು ಇದ್ದವು. ನಮ್ಮ ಮಧ್ಯದಲ್ಲಿಯೇ ನಡೆದುಕೊಂಡು ಬಂದರು. ಪ್ರವಾಸಿಗರು, ಅಲ್ಲಿ ಕೆಲಸ ಮಾಡುವವರು ತರ ಅದೇ ಡ್ರೆಸ್‌ನಲ್ಲಿ ಬಂದರು. ಗನ್ ತೆಗೆದು ಶೂಟ್ ಮಾಡಿದ್ರು. ಅವನು ಯಾವನು ಅಂತ ಗೊತ್ತಾಯ್ತು. ಅವನ ತಲೆಗೆ ಗುಂಡು ಹಾಕಲಿಲ್ಲ. ನಮ್ಮ ಭಾವನ ತಲೆ ಹೊಡೆದವರ ತಲೆ ಹೊಡೆಯಲಿಲ್ಲ ಅನ್ನೋ ಬೇಸರವಿದೆ. ಯಾವನು ನಮ್ಮ ಭಾವನ ಹತ್ರ ಬಂದು ಸುಟ್ನೋ ಅವನು ಸತ್ತ. ಆ ಫೋಟೋವನ್ನ ನೋಡಿದೆ. ಅವನೇ ಅಂತ ನನಗೆ ಗೊತ್ತಾಯ್ತು. ಪಹಲ್ಗಾಮ್‌ಗೆ ಬೆಳಗ್ಗೆ ತಲುಪಿದ್ವಿ. ಸ್ವಲ್ಪ ವೇಟ್ ಮಾಡೋಣ. ಕೆಳಗೆ ನದಿ ಇತ್ತು. ಆಡ್ಕೊಂಡು ಹೋಗೋಣ, ಊಟಕ್ಕೆ ಟೈಂ ಆಯ್ತು ಹೋಗೋಣ ಅಂದುಕೊಂಡಿದ್ದೆ. ಒಂದು ನಿಮಿಷ ಆಗಿದ್ರೂ ಬಾರ್ಡರ್, ಫೆನ್ಸ ಹತ್ರ ಹೋಗುತ್ತಿದ್ದೆವು. ಪ್ರತಿಕ್ಷಣನೂ ಮನಸಲ್ಲಿ ಇದು ಓಡುತ್ತೆ. ಮಗು, ಬ್ಯಾಗ್‌ನ ಇಟ್ಟುಕೊಂಡು ನಾನು ಓಡಿಕೊಂಡು ಬರುತ್ತಿದ್ದೆ. ಆ ನೆನಪು ಇನ್ನೂ ಇದೆ. ಮದುವೆ ಆಗಿ ಆರು ವರ್ಷ ಇದ್ದೆ. ಮಗ, ಅಣ್ಣ ಅವರ ಮನಸ್ಸಲ್ಲಿ ಬೇಜಾರು ಇದೆ. ಈ ಥರ ಸಾವು ಯಾರಿಗೂ ಬರಬಾರದು. ಅವರು ಯಾರಿಗೂ ತೊಂದರೆ ಕೊಟ್ಟವರಲ್ಲ. ಪ್ರವಾಸಕ್ಕೆ ತೆರಳುವವರಿಗೆ ಸರ್ಕಾರ ರಕ್ಷಣೆ ಕೊಡಬೇಕು ಎಂದು ಭರತ್ ಭೂಷಣ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ನರಮೇಧ ನಡೆದ ಬೈಸರನ್‌ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?

TAGGED:Baisaran ValleybengaluruBharath Bhushanjammu kashmirPahalagam Attackterroristsಪಹಲ್ಗಾಮ್‌ಪಹಲ್ಗಾಮ್ ಅಟ್ಯಾಕ್ಬೆಂಗಳೂರುಬೈಸರನ್ ಕಣಿವೆಭಯೋತ್ಪಾದಕರುಭರತ್ ಭೂಷಣ್
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Baisaran Valley 2
Latest

ಪಹಲ್ಗಾಮ್‌ ನರಮೇಧ ನಡೆದ ಬೈಸರನ್‌ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?

Public TV
By Public TV
16 minutes ago
pahalgam Terror 4
Latest

20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!

Public TV
By Public TV
26 minutes ago
Nelamangala Lorry Accident
Bengaluru City

ಪಂಚರ್ ಆಗಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ – ಚಾಲಕನ ಎರಡೂ ಕಾಲುಗಳು ಕಟ್

Public TV
By Public TV
45 minutes ago
pahalgam attack from karnataka
Latest

ಪಹಲ್ಗಾಮ್ ನರಮೇಧಕ್ಕೆ 1 ವರ್ಷ – ದಾಳಿಯಲ್ಲಿ ಪ್ರಾಣ ತೆತ್ತ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

Public TV
By Public TV
47 minutes ago
pahalgam attack
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ; ಮಾಸದ ಗಾಯ, ನಿಲ್ಲದ ಕಣ್ಣೀರು – ʻಸಿಂಧೂರ’ ಸಾಂತ್ವನ

Public TV
By Public TV
1 hour ago
Raichur Rain
Districts

ರಾಯಚೂರಿನಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವು – ತೆಂಗಿನ ಮರ ಸುಟ್ಟು ಭಸ್ಮ

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?