Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇನ್‌ಸ್ಪೆಕ್ಟರ್‌ಗೆ ಕಿರುಕುಳ ಆರೋಪ – ವರದಿ ನೀಡಲು ಸೂಚಿಸಿದ್ದೇನೆ: ಪರಮೇಶ್ವರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇನ್‌ಸ್ಪೆಕ್ಟರ್‌ಗೆ ಕಿರುಕುಳ ಆರೋಪ – ವರದಿ ನೀಡಲು ಸೂಚಿಸಿದ್ದೇನೆ: ಪರಮೇಶ್ವರ್‌

Bengaluru City

ಇನ್‌ಸ್ಪೆಕ್ಟರ್‌ಗೆ ಕಿರುಕುಳ ಆರೋಪ – ವರದಿ ನೀಡಲು ಸೂಚಿಸಿದ್ದೇನೆ: ಪರಮೇಶ್ವರ್‌

Public TV
Last updated: April 21, 2026 4:50 pm
Public TV
Share
2 Min Read
g parameshwara 2
SHARE

– ಬಿಟ್‌ಕಾಯಿನ್ ಕೇಸಲ್ಲಿ ಎಸ್‌ಐಟಿ ತನಿಖೆ ವಿಳಂಬ, ಮಧ್ಯಂತರ ಚಾರ್ಜ್‌ಶೀಟ್‌‌ಗೆ ನಿರ್ದೇಶನ

ಬೆಂಗಳೂರು: ಡಿಸಿಆರ್‌ಇ ಇನ್‌ಸ್ಪೆಕ್ಟರ್‌ಗೆ (DCRE Inspector) ಮೇಲಧಿಕಾರಿಗಳ ಕಿರುಕುಳ ಆರೋಪ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್ಧ ಡಿಜಿಪಿಗೆ ಎಸ್‌ಪಿ ಪತ್ರ ಬರೆದಿರುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್‌ (G Parameshwar) ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿ ಅಗಿರುವುದನ್ನ ಗಮನಿಸಿದ್ದೇನೆ.‌ ಡಿಸಿಆರ್‌ಇ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಎಂಬುವರು ಸಾಕಷ್ಟು ಆರೋಪಗಳನ್ನ ಮಾಡಿದ್ದಾರೆ. ಎಸ್‌ಪಿ ಕಾಶಿನಾಥ್ ಪತ್ರ ಬರೆದಿದ್ದಾರೆ. ಈ ಎರಡು ಪ್ರಕರಣಗಳ ಕುರಿತು ಡಿಜಿಪಿಯವರನ್ನ ವರದಿ ಕೇಳಿದ್ದೇನೆ. ವರದಿ ಬಳಿಕ ಸತ್ಯಾಸತ್ಯತೆಯನ್ನ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಶಾಸಕರಾದ ಎನ್.ಎ ಹ್ಯಾರೀಸ್ ಅವರ ಮಕ್ಕಳ ನಿವಾಸಗಳ ಮೇಲೆ ದಾಳಿ ನಡೆಸಿರುವ ಒಳ ವಿಚಾರಗಳು ನಮಗೆ ತಿಳಿದಿಲ್ಲ. ಯಾವ ವಿಚಾರಕ್ಕೆ ದಾಳಿ ನಡೆಸಿದ್ದಾರೆ? ಏನೆಲ್ಲ ಸಿಕ್ಕಿದೆ‌ ಎಂಬುದನ್ನು ಇಡಿ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು. ಇದರ ನಡುವೆ ನಾವು ಹೇಳಿಕೆಗಳನ್ನು ಕೊಟ್ಟರೆ ಅಪ್ರಸ್ತುತ ಆಗುತ್ತದೆ ಎಂದರು.

Mohammed Nalapad

ಬಿಟ್‌ಕಾಯಿನ್ ಕೇಸಲ್ಲಿ ಎಸ್‌ಐಟಿ ತನಿಖೆ ವಿಳಂಬ
ಬಿಟ್‌ಕಾಯಿನ್ ಹಗರಣದ ಕುರಿತಂತೆ ರಾಜ್ಯದಲ್ಲಿ ಎಸ್‌ಐಟಿ ರಚನೆ ಮಾಡಲಾಗಿತ್ತು. ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿದೆ. ಅನೇಕ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ಮಾಹಿತಿ ಸಿಗುವವರೆಗೂ ತನಿಖೆ ನಡೆಸುತ್ತಾರೆ. ಟೆಕ್ನಿಕಲ್ ಆಗಿರುವುದರಿಂದ ಮಾಹಿತಿಗಳನ್ನು ಕಲೆ ಹಾಕುವುದರಲ್ಲಿ ವಿಳಂಬ ಆಗಿದೆ ಎಂದು ಅನ್ನಿಸುತ್ತದೆ. ಶೀಘ್ರವಾಗಿ ಪೂರ್ಣಗೊಳಿಸಿ, ಮಧ್ಯಂತರ ಚಾರ್ಜ್‌ಶೀಟ್ ಸಲ್ಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯವರು ಪೊಲೀಸ್ ಇಲಾಖೆಯಿಂದ ಮಾಹಿತಿ ತೆಗೆದುಕೊಂಡಿದ್ರೆ ನಾನೇನು ಹೇಳಲು ಆಗಲ್ಲ. ಅವರಿಗೆ ಮಾಹಿತಿ ತೆಗೆದುಕೊಳ್ಳಲು ಅಧಿಕಾರ ಇದೆ.‌ ಇದೇ ವಿಚಾರದಲ್ಲಿ ಮಾಹಿತಿ ತೆಗೆದುಕೊಂಡಿರಬಹುದು. ಈ ವಿಚಾರ ಅಲ್ಲ, ಬೇರೆ ವಿಚಾರ ಇದ್ರೂ ಇಡಿಯವರೇ ಹೇಳಬೇಕಾಗುತ್ತದೆ ಎಂದರು.

Bitcoin

ಹ್ಯಾಕರ್ ಶ್ರೀಕಿ‌ ಜೊತೆಗೆ ಪ್ರಭಾವಿಗಳು ಸಂಪರ್ಕ ಹೊಂದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ತನಿಖೆಯಾದ್ರೆ ಎಲ್ಲವೂ ಹೊರಗೆ ಬರುತ್ತದೆ. ಯಾರೆಲ್ಲ ಸಂಪರ್ಕದಲ್ಲಿದ್ದರೂ, ಅವರ ಪಾತ್ರ ಏನು ಅನ್ನುವುದೆಲ್ಲ‌ ಗೊತ್ತಾಗುತ್ತದೆ. ನಾವು ಮಾತಾಡುವುದಕ್ಕು, ತನಿಖೆಯಲ್ಲಿ ಗೊತ್ತಾಗುವ ವಿಚಾರಗಳು ಬೇರೆ ಬೇರೆ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ರಾಜಕೀಯವಾಗಿ ಏನೇನೋ ಮಾತಾಡಿರುತ್ತೇವೆ, ಅದು ತನಿಖೆಯಲ್ಲಿ ಹೊರಬರಬೇಕಲ್ಲವೇ ಎಂದರು.

ಮುಸ್ಲಿಂ ನಾಯಕರು ಪಕ್ಷದ ವರಿಷ್ಟರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುತ್ತಾರೆ. ಈ ಬಗ್ಗೆ ರಾಹುಲ್ ಗಾಂಧಿ ಅವರು ಸೂಚನೆ ನೀಡುತ್ತಾರೆ. ನಾವು ಯಾವತ್ತು ಕೂಡ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಸ್ಲಿಂ ಸಮುದಾಯದವರಿಗೆ ಪ್ರಾಧನ್ಯತೆ ನೀಡಲಾಗಿದೆ.

ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಮೃತಪಟ್ಟ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿ ಇದೆ‌. ಇದನ್ನು ಬೇರೆ ರೀತಿ ಅರ್ಥೈಸಿಕೊಳ್ಳಲಾಗಿದೆ. ಮತದಾರರು ಜಾಸ್ತಿ ಇದ್ದೇವೆ ಎಂದು ಟಿಕೆಟ್ ಕೇಳಿದ್ದಾರೆ. ಅದು ಕೂಡ ತಪ್ಪಲ್ಲ. ಕಾರಣಾಂತರಗಳಿಂದ ಶಿವಶಂಕರಪ್ಪ ಅವರ ಮನೆಯವರಿಗೆ ಟಿಕೆಟ್ ಕೊಟ್ಟಿರುವುದನ್ನು ಬೇರೆ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ‌ ಅಧ್ಯಕ್ಷರು, ಮುಖ್ಯಮಂತ್ರಿಗಳು ಸೇರಿದಂತೆ ನಾವೆಲ್ಲ ಸರಿಪಡಿಸುತ್ತೇವೆ ಎಂದು ಹೇಳಿದರು.

TAGGED:bengaluruBitcoin CaseG ParameshwarMohammed Nalapadಜಿ.ಪರಮೇಶ್ವರ್ಬಿಟ್‌ ಕಾಯಿನ್‌ ಕೇಸ್‌ಬೆಂಗಳೂರುಮೊಹಮ್ಮದ್ ನಲಪಾಡ್
Share This Article
Facebook Whatsapp Whatsapp Telegram

Cinema news

Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National

You Might Also Like

Lok Sabha Election 2024 Rs. 4650 crores seized even before polling begins Higher than total seizures in 2019 polls rs 500
Latest

ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತು, ನಗದು ಜಪ್ತಿ: ಚುನಾವಣಾ ಆಯೋಗ

Public TV
By Public TV
1 minute ago
Voting
Latest

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

Public TV
By Public TV
10 minutes ago
HC Balakrishna Magadi
Bengaluru City

ಕಾಂಗ್ರೆಸ್ ಮುಸ್ಲಿಂ ನಾಯಕರು ತಪ್ಪು ಮಾಡಿದ್ದರೆ ತಲೆದಂಡ ಮಾಡಲಿ: ಬಾಲಕೃಷ್ಣ

Public TV
By Public TV
36 minutes ago
Desh Garima
Latest

ಮುಂಬೈ ತಲುಪಿದ ಕಚ್ಚಾ ತೈಲ ಹೊತ್ತ `ದೇಶ್ ಗರಿಮಾ’ ಹಡಗು

Public TV
By Public TV
44 minutes ago
Tamil Nadu Election 2026 Tomorrow DMK AIDMK Congress BJP TVK Vijay
Latest

ಡಿಎಂಕೆ, ಎಐಎಡಿಎಂಕೆ ಮಧ್ಯೆ ನೇರ ಫೈಟ್ – ಸಂಚಲನ ಮೂಡಿಸಲಿದ್ದಾರಾ ವಿಜಯ್?

Public TV
By Public TV
1 hour ago
is royal challengers bengaluru player can play for chennai super kings under ipl loan rule
Cricket

ಏನಿದು ಐಪಿಎಲ್ ಲೋನ್ ನಿಯಮ – ಆರ್‌ಸಿಬಿ ಆಟಗಾರ ಟೂರ್ನಿ ಮಧ್ಯೆಯೇ ಸಿಎಸ್‌ಕೆ ಪರ ಆಡೋಕೆ ಸಾಧ್ಯನಾ?

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?