ನವದೆಹಲಿ: ತನ್ನ ದೇಶದ ವಿದೇಶಾಂಗ ಸಚಿವರನ್ನೇ ಇರಾನ್ನ (Iran) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ನೌಕಾ ಸೇನೆ ಮೂರ್ಖ ಎಂದು ಕರೆದಿದೆ.
ಲೆಬನಾನ್ನಲ್ಲಿ ಏರ್ಪಟ್ಟಿರುವ ಕದನ ವಿರಾಮದ ಹಿನ್ನೆಲೆಯಲ್ಲಿ, ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ವಿದೇಶಾಂಗ ಸಚಿವರನ್ನೇ ಸಯ್ಯದ್ ಅಬ್ಬಾಸ್ ಅರಾಘ್ಚಿ(Abbas Araghchi) ಎಕ್ಸ್ನಲ್ಲಿ ಪ್ರಕಟಿಸಿದ್ದರು.
ಇರಾನ್ ಸಚಿವರಿಂದ ಈ ಹೇಳಿಕೆ ಬಂದ ಹಿನ್ನೆಲೆಯಲ್ಲಿ ಇಂದು ಹಡಗಗಳು ಹಾರ್ಮುಜ್ ಜಲಸಂಧಿಯನ್ನು(Strait of Hormuz) ದಾಟಲು ಮುಂದಾಗಿವೆ. ಜಲಸಂಧಿ ದಾಟಲು ಯತ್ನಿಸಿದಾಗ ಐಆರ್ಜಿಸಿ ರೇಡಿಯೋ ಸಿಗ್ನಲ್ ಕಳುಹಿಸಿ ಹಡಗುಗಳನ್ನು ತಡೆದಿದೆ. ಇದನ್ನೂ ಓದಿ: ಭಾರತದ ಎರಡು ತೈಲ ಟ್ಯಾಂಕರ್ ಮೇಲೆ ಇರಾನ್ ಗುಂಡಿನ ದಾಳಿ
🇮🇷 BREAKING: The IRGC Navy just called Iran’s own Foreign Minister an “idiot” on open international maritime radio.
“We will open it by the order of our leader, not by the tweets of some idiot.”
Iran’s FM announced the Strait open. The IRGC announced it closed.
The Iranian… https://t.co/YDnmJRG534 pic.twitter.com/Avg1mgNiJz
— Mario Nawfal (@MarioNawfal) April 18, 2026
ಈ ವೇಳೆ ಹಡಗಿನ ಕ್ಯಾಪ್ಟನ್ ವಿದೇಶಾಂಗ ಸಚಿವರು ಹಾರ್ಮುಜ್ನಲ್ಲಿ ಸಂಚರಿಸಲು ಅನುಮತಿ ನೀಡಿದ್ದಾರೆ ಎಂದಾಗ ಐಆರ್ಜಿಸಿ ನಾವು ಹಡಗುಗಳನ್ನು ನಮ್ಮ ನಾಯಕನ ಆದೇಶದ ಮೇರೆಗೆ ತೆರೆಯುತ್ತೇವೆ, ಯಾರೋ ಮೂರ್ಖರ ಟ್ವೀಟ್ಗಳಿಗೆ ಅಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಹಡಗುಗಳ ಸಂಚಾರಕ್ಕೆ ಜಲಸಂಧಿಯನ್ನು ಮುಚ್ಚಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್ – ಧನ್ಯವಾದ ಹೇಳಿದ ಟ್ರಂಪ್

