Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊನೆಯ 3 ಎಸೆತದಲ್ಲಿ ಹೋಯ್ತು 16 ರನ್‌ – ತವರಲ್ಲಿ ಆರ್‌ಸಿಬಿಯನ್ನು ಕೆಡವಿದ ಡೆಲ್ಲಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಕೊನೆಯ 3 ಎಸೆತದಲ್ಲಿ ಹೋಯ್ತು 16 ರನ್‌ – ತವರಲ್ಲಿ ಆರ್‌ಸಿಬಿಯನ್ನು ಕೆಡವಿದ ಡೆಲ್ಲಿ

Cricket

ಕೊನೆಯ 3 ಎಸೆತದಲ್ಲಿ ಹೋಯ್ತು 16 ರನ್‌ – ತವರಲ್ಲಿ ಆರ್‌ಸಿಬಿಯನ್ನು ಕೆಡವಿದ ಡೆಲ್ಲಿ

Public TV
Last updated: April 18, 2026 7:59 pm
Public TV
Share
3 Min Read
Tristan Stubbs David Miller
SHARE

ಬೆಂಗಳೂರು: ಮನೆ ಹುಡುಗ ಕೆಎಲ್‌ ರಾಹುಲ್‌, ಟ್ರಿಸ್ಟನ್‌ ಸ್ಟಬ್ಸ್‌(Tristan Stubbs) ಅವರ ಅರ್ಧಶತಕ, ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಅವರ ಸ್ಫೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಆರ್‌ಸಿಬಿ (RCB) ವಿರುದ್ಧ 6 ವಿಕೆಟ್‌ಗಳ ರೋಚಕ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 1 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 179 ರನ್‌ ಹೊಡೆದು ಟೂರ್ನಿಯಲ್ಲಿ ಮೂರನೇ ಜಯ ಗಳಿಸಿತು.

ಕೊನೆಯ 4 ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 41 ರನ್‌ ಬೇಕಿತ್ತು. ಹ್ಯಾಜಲ್‌ವುಡ್‌ ಎಸೆದ 17ನೇ ಓವರ್‌ನಲ್ಲಿ 4 ರನ್‌ ಬಂದರೆ ಭುವನೇಶ್ವರ್‌ ಎಸೆದ 18ನೇ ಓವರ್‌ನಲ್ಲಿ 12 ರನ್‌ ಬಂತು. ರಸಿಕ್‌ ಧಾರ್‌ ಎಸೆದ 19ನೇ ಓವರ್‌ನಲ್ಲಿ 10 ರನ್‌ ಬಂದಿತ್ತು.

ಕೊನೆಯ 6 ಎಸೆತದಲ್ಲಿ 15 ರನ್‌ ಬೇಕಿತ್ತು. ರೊಮಾರಿಯೋ ಶೆಫರ್ಡ್ ಎಸೆದ ಮೊದಲ ಎರಡು ಎಸೆತದಲ್ಲಿ ಎರಡು ರನ್‌ ಬಂತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಸಿಕ್ಸ್‌ ಸಿಡಿಸಿದರು. ಐದನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಮಿಲ್ಲರ್‌ ತಂಡಕ್ಕೆ ಜಯವನ್ನು ತಂದುಕೊಟ್ಟರು.

𝗠𝗮𝗴𝗻𝗶𝗳𝗶𝗰𝗲𝗻𝘁 𝗠𝗶𝗹𝗹𝗲𝗿 🫡

David Miller stands up tall and hits them big to take @DelhiCapitals to a thrilling victory 💥👏

Scorecard ▶️ https://t.co/vfJ6SccA9T#TATAIPL | #KhelBindaas | #RCBvDC | @DavidMillerSA12 pic.twitter.com/I6FXLeOhXU

— IndianPremierLeague (@IPL) April 18, 2026

ಸ್ಟಬ್ಸ್‌ ಮತ್ತು ಮಿಲ್ಲರ್‌ 24 ಎಸೆತಗಳಲ್ಲಿ 45 ರನ್‌ ಜೊತೆಯಾಟವಾಡಿ ಪಂದ್ಯವನ್ನು ಡೆಲ್ಲಿಯತ್ತ ತಿರುಗಿಸಿದರು. ಸ್ಟಬ್ಸ್‌ ಔಟಾಗದೇ 60 ರನ್‌(47 ಎಸೆತ, 4 ಬೌಂಡರಿ, 1 ಸಿಕ್ಸ್‌), ಡೇವಿಡ್‌ ಮಿಲ್ಲರ್‌ ಔಟಾಗದೇ 22 ರನ್‌(10 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿದರು. ಇದನ್ನೂ ಓದಿ: 26 ರನ್‌ ಹೊಡೆದರೂ ಐಪಿಎಲ್‌ನಲ್ಲಿ ವಿಶೇಷ ಸಾಧನೆ ಮಾಡಿದ ಟಿಮ್ ಡೇವಿಡ್‌

ಡೆಲ್ಲಿ 2.5 ಓವರ್‌ಗಳಲ್ಲಿ 18 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಭುವನೇಶ್ವರ್‌ ಕುಮಾರ್‌ ಆರಂಭದಲ್ಲೇ ನಿಸ್ಸಾಂಕ, ಕರುಣ್‌ ನಾಯರ್‌, ಸಮೀರ್‌ ರಿಜ್ವಿ ವಿಕೆಟ್‌ ಪಡೆದರು. ಈ ಸಂಕಷ್ಟದ ಸಮಯದಲ್ಲಿ ಕೆಎಲ್‌ ರಾಹುಲ್‌ (KL Rahul) ಮತ್ತು ಸ್ಟಬ್ಸ್‌ 44 ಎಸೆತಗಳಲ್ಲಿ 69 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಕೆಎಲ್‌ ರಾಹುಲ್‌ 57 ರನ್‌ (34 ಎಸೆತ, 6 ಬೌಂಡರಿ, 2 ಸಿಕ್ಸ್‌) ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕೊಹ್ಲಿ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ನಾಯಕ ಅಕ್ಷರ್‌ ಪಟೇಲ್‌ 26 ರನ್‌(19 ಎಸೆತ, 3 ಬೌಂಡರಿ) ಗಳಿಸಿದ್ದಾಗ ಗಾಯಗೊಂಡು ಮೈದಾನದಿಂದ ಹೊರನಡೆದರು.

A fighting rescue mission filled with spectacular hits 👊

🎥 KL Rahul treated the fans to some majestic sixes during his crucial knock of 57(34)! 💙

Updates ▶️ https://t.co/vfJ6SccA9T#TATAIPL | #KhelBindaas | #RCBvDC | @DelhiCapitals | @klrahul pic.twitter.com/JA29LlOwDa

— IndianPremierLeague (@IPL) April 18, 2026


ಸಾಧಾರಣ ಮೊತ್ತ
ಆರ್‌ಸಿಬಿಯ ಆರಂಭ ಉತ್ತಮವಾಗಿತ್ತು. 31 ಎಸೆತಗಳಲ್ಲಿ ಸಾಲ್ಟ್‌ ಮತ್ತು ಕೊಹ್ಲಿ 52 ರನ್‌ ಜೊತೆಯಾಟವಾಡಿದರು. ಕೊಹ್ಲಿ 19 ರನ್‌ ಗಳಿಸಿ ಔಟಾದರೆ ನಂತರ ಬಂದ ದೇವದತ್‌ ಪಡಿಕಲ್‌ 18 ರನ್‌ ಗಳಿಸಿ ಕ್ಯಾಚ್‌ನೀಡಿ ಹೊರನಡೆದರು.

ಸಾಲ್ಟ್‌ ಎಂದಿನಂತೆ ಆಕ್ರಮಣಕಾರಿಯಾಗಿ ಆಟವಾಡಿ 63 ರನ್(38 ಎಸೆತ, 4 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರು. ಟಿಮ್‌ ಡೇವಿಡ್‌ 26 ರನ್‌(17 ಎಸೆತ, 3 ಬೌಂಡರಿ, 1 ಸಿಕ್ಸ್‌), ಜಿತೇಶ್‌ ಶರ್ಮಾ 14 ರನ್‌(20 ಎಸೆತ, 1ಬೌಂಡರಿ) ಕೃನಾಲ್‌ ಪಾಂಡ್ಯ 12 ರನ್‌(10 ಎಸೆತ, 1 ಬೌಂಡರಿ) ಹೊಡೆದು ಔಟಾದರು. ಡೆಲ್ಲಿ ಇತರ ರೂಪದಲ್ಲಿ 11 ರನ್‌( ಲೆಗ್‌ಬೈ 2, ನೋಬಾಲ್‌ 1, ವೈಡ್‌ 1) ನೀಡಿತ್ತು.

ಎನ್‌ಗಿಡಿ, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌, ಮುಕೇಶ್‌ ಕುಮಾರ್‌ 1 ವಿಕೆಟ್‌ ಪಡೆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳಿಂದ ಜಾಸ್ತಿ ರನ್‌ ಬಾರದ ಕಾರಣ ಟೂರ್ನಿಯಲ್ಲಿ ಆರ್‌ಸಿಬಿ ಎರಡನೇ ಸೋಲು ಕಂಡಿದೆ.

TAGGED:bengaluruDCKL RahulrcbTristan Stubbsಆರ್‍ಸಿಬಿಕೆಎಲ್ ರಾಹುಲ್ಡೆಲ್ಲಿ ಕ್ಯಾಪಿಟಲ್ಸ್ಬೆಂಗಳೂರು
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
3 hours ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
4 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
5 hours ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
5 hours ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
5 hours ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
6 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?