ಮುಂಗಾರು ಕೊರತೆ ಇರುವ ಈ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಆದ್ದರಿಂದ ಮುಂದಿನ ಕೆಲವು ದಿನಗಳ ವರೆಗೆ ರಾಜ್ಯಾದ್ಯಂತ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಹಾಸನ, ಶಿವಮೊಗ್ಗ, ತುಮಕೂರು, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ ಗದಗ, ಹಾವೇರಿ ಜಿಲ್ಲೆಗಳಲ್ಲಿ ಜೂ.20 ಮತ್ತು 21ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರಾವಳಿ ಭಾಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 30-26
ಶಿವಮೊಗ್ಗ: 31-23
ಬೆಳಗಾವಿ: 31-22
ಮೈಸೂರು: 29-22
ಮಂಡ್ಯ: 29-22
ಮಡಿಕೇರಿ: 25-21
ರಾಮನಗರ: 30-22
ಹಾಸನ: 27-21
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 31-21
ಕೋಲಾರ: 30-22
ತುಮಕೂರು: 31-22
ಉಡುಪಿ: 31-26
ಕಾರವಾರ: 38-28
ಚಿಕ್ಕಮಗಳೂರು: 26-19
ದಾವಣಗೆರೆ: 33-24
ಹುಬ್ಬಳ್ಳಿ: 33-23
ಚಿತ್ರದುರ್ಗ: 32-23
ಹಾವೇರಿ: 33-24
ಬಳ್ಳಾರಿ: 36-26
ಗದಗ: 34-23
ಕೊಪ್ಪಳ: 35-25
ರಾಯಚೂರು: 37-27
ಯಾದಗಿರಿ: 37-27
ವಿಜಯಪುರ: 37-25
ಕಲಬುರಗಿ: 37-27
ಬಾಗಲಕೋಟೆ: 36-24
