– ಮೆಸ್ಸಿ ಟೀಂ ಬೆಂಬಲಿಸಲು ನ್ಯೂಯಾರ್ಕ್‌ಗೆ ಹೊರಟ ಕಿಟಾನಾ
ವಾಷಿಂಗ್ಟನ್: ಫುಟ್‌ಬಾಲ್ ಪಂದ್ಯ ಅಂದ್ರೆ ಕೇವಲ ಆಟವಲ್ಲ, ಅದೊಂದು ಗ್ಲಾಮರ್ ಹಬ್ಬ ಕೂಡ ಹೌದು. ಅದ್ರಲ್ಲೂ ಫಿಫಾ ವಿಶ್ವಕಪ್ (FIFA World Cup 2026) ಟೂರ್ನಿ ಅಂದ್ರೆ ವಿವಿಧ ದೇಶಗಳಿಂದ ಸುಂದರಿಯರ ದಂಡೇ ಅಲ್ಲಿ ನೆರೆದಿರುತ್ತೆ.
ಅದೇ ರೀತಿ ನಿನ್ನೆ ಅಮೆರಿಕ ಮತ್ತು ಪರಾಗ್ವೆ ನಡುವಿನ ಪಂದ್ಯದ ವೇಳೆ ಮಾಜಿ ನೀಲಿ ತಾರೆಗಳಾದ ಮಿಯಾ ಖಲೀಫಾ (Mia Khalifa) ಹಾಗೂ ಲಾನಾ ರೋಡೇಸ್ (Lana Rhoades) ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ನೆಚ್ಚಿನ ತಂಡ ಹುರಿದುಂಬಿಸಲು ಬಂದಿದ್ದ ಈ ಇಬ್ಬರು ಸೆಲೆಬ್ರಿಟಿಗಳು ಫುಟ್‌ಬಾಲ್ ಗ್ಯಾಲರಿಯಲ್ಲಿ ಕುಳಿತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ಸದ್ದು ಮಾಡುತ್ತಿವೆ. ಅಭಿಮಾನಿಗಳ ಜಂಟಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಫುಟ್‌ಬಾಲ್ ಪಂದ್ಯವನ್ನು ಅಭಿಮಾನಿಗಳು ಹೇಗೆಲ್ಲಾ ಎಂಜಾಯ್ ಮಾಡ್ತಾರೆ ಎಂಬುದಕ್ಕೆ ಗ್ಯಾಲರಿಯ ಈ ಫೋಟೋಗಳೇ ಸಾಕ್ಷಿ. ಮುಖಕ್ಕೆ ಬಣ್ಣ ಬಳಿದುಕೊಂಡು, ನೆಚ್ಚಿನ ಆಟಗಾರರ ಜೆರ್ಸಿ ಧರಿಸಿ, ಕೈಯಲ್ಲಿ ಧ್ವಜ ಹಿಡಿದು ಇಡೀ ಸ್ಟೇಡಿಯಂ ಅನ್ನೇ ತಮ್ಮ ಘೋಷಣೆಗಳ ಮೂಲಕ ಮದುವೆಯ ಮನೆಯಂತೆ ಸಂಭ್ರಮದ ಗೂಡಾಗಿಸುವ ಕಲೆ ಫುಟ್‌ಬಾಲ್ ಫ್ಯಾನ್ಸ್‌ಗಳಿಗೆ ಮಾತ್ರ ಗೊತ್ತು.

ಮೆಕ್ಸಿಕೋ ದೇಶದ ಅಭಿಮಾನಿಗಳು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಮೆಕ್ಸಿಕೋದ ಸಾಂಪ್ರದಾಯಿಕ ದೊಡ್ಡ ಹ್ಯಾಟ್ (Sombrero Hats) ಧರಿಸಿ, ವಿಭಿನ್ನ ಉಡುಪುಗಳಲ್ಲಿ ಮೈದಾನಕ್ಕೆ ಬರುವ ಇವರು, ಪಂದ್ಯದ ಉದ್ದಕ್ಕೂ ಹಾಡು ಮತ್ತು ನೃತ್ಯದ ಮೂಲಕ ಗ್ಯಾಲರಿಯಲ್ಲಿ ಸದಾ ಹೈ-ಎನರ್ಜಿಯ ವಾತಾವರಣವನ್ನು ಸೃಷ್ಟಿ ಮಾಡಿದ್ದರು.
ಮೆಸ್ಸಿ ಟೀಂ ಬೆಂಬಲಿಸಲು ಹೊರಟ ಕಿಟಾನಾ
ಇನ್ನೂ ಅರ್ಜೆಂಟೀನಾದಲ್ಲಿ ಜನಿಸಿದ ಪೋರ್ನ್ ಸ್ಟಾರ್ ಕಿಟಾನಾ ಮೊಂಟಾನಾ ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ನೇತೃತ್ವದ ತಂಡವನ್ನ ಬೆಂಬಲಿಸಲು ನ್ಯೂಯಾರ್ಕ್‌ಗೆ ಹೊರಟಿದ್ದಾರೆ. ನಾವು ಮತ್ತೆ ಗೆಲ್ಲುತ್ತೇವೆ ಅನ್ನೋ ವಿಶ್ವಾಸ ನನಗಿದೆ. ನಮ್ಮ ತಂಡವನ್ನು ಬೆಂಬಲಿಸಲು ನಾನು ಅಲ್ಲಿರುತ್ತೇನೆ ಎಂದು ಹೇಳಿದ್ದಾರೆ.
