Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚೀನಾ-ತೈವಾನ್‌ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಚೀನಾ-ತೈವಾನ್‌ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?

Latest

ಚೀನಾ-ತೈವಾನ್‌ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?

Public TV
Last updated: April 10, 2026 3:50 pm
Public TV
Share
4 Min Read
China Xi Jinping Taiwan Opposition leader cheng Li wun
SHARE

ಬೀಜಿಂಗ್‌: ಇಡೀ ವಿಶ್ವ ಅಮೆರಿಕ-ಇರಾನ್‌ (USA-Iran) ನಡುವಿನ ಶಾಂತಿ ಮಾತುಕತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರೆ ಇನ್ನೊಂದು ಕಡೆ ಕ್ಸಿ ಜಿನ್‌ಪಿಂಗ್ (Xi Jinping) ಮತ್ತು ತೈವಾನ್‌ನ ವಿರೋಧ ಪಕ್ಷದ ನಾಯಕಿ ಚೆಂಗ್ ಲಿ-ವುನ್ (Cheng Li-wun) ನಡುವೆ ನಡೆದ ಐತಿಹಾಸಿಕ ಮಾತುಕತೆ ನಡೆಸಿದ್ದಾರೆ.

ತೈವಾನ್‌ನ(Taiwan) ವಿರೋಧ ಪಕ್ಷವಾದ ಕುವೊಮಿಂಟಾಂಗ್ (KMT) ನಾಯಕಿ ಚೆಂಗ್ ಲಿ-ವುನ್ ಚೀನಾಗೆ ‘ಶಾಂತಿ ಮಿಷನ್’ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಇಬ್ಬರು ನಾಯಕರು ಭೇಟಿಯಾದರು.

ಮಾತುಕತೆಯ ವೇಳೆ ಕ್ಸಿ ಜಿನ್‌ಪಿಂಗ್‌, ಜಲಸಂಧಿಯ ಎರಡೂ ಬದಿಯಲ್ಲಿರುವವರು ಒಂದೇ ಕುಟುಂಬಕ್ಕೆ ಸೇರಿದ ಚೀನಿಯರು. ಚೀನಾ ಮತ್ತು ತೈವಾನ್ ಜನರು ಒಂದು ದಿನ ಒಂದಾಗುತ್ತಾರೆ ಎಂಬ ಬಗ್ಗೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು. ಇದನ್ನೂ ಓದಿ: ತೈವಾನ್‌ನಲ್ಲಿ ಅಮೆರಿಕ ಸ್ಪೀಕರ್ – ಚೀನಾ ಕೆಂಡಾಮಂಡಲ

ತೈವಾನ್ ಜಲಸಂಧಿಯು ಜಾಗತಿಕ ಸಂಘರ್ಷದ ಕೇಂದ್ರವಾಗಬಾರದು ಮತ್ತು ಉಭಯ ದೇಶಗಳ ನಡುವೆ ಯುದ್ಧವನ್ನು ತಪ್ಪಿಸುವುದು ಅತ್ಯಗತ್ಯ. ಈ ಭೇಟಿಯು ಎರಡೂ ದೇಶಗಳ ನಡುವೆ ʻಶಾಂತಿಯ ಬೀಜʼ ಬಿತ್ತುವ ಪ್ರಯತ್ನವಾಗಿದೆ ಎಂದು ಚೆಂಗ್ ಲಿ-ವುನ್ ಬಣ್ಣಿಸಿದ್ದಾರೆ.

ತೈವಾನ್‌ನಲ್ಲಿ ಅಧಿಕಾರದಲ್ಲಿರುವ ಸರ್ಕಾರ ಅಮೆರಿಕದತ್ತ ವಾಲುತ್ತಿರುವ ಸಮಯದಲ್ಲೇ ಜಿನ್‌ಪಿಂಗ್, ತೈವಾನ್‌ನ ಭವಿಷ್ಯದ ನಿರ್ಧಾರವು ಸಂಪೂರ್ಣವಾಗಿ ಚೀನಿಯರ ಕೈಯಲ್ಲೇ ಇರಬೇಕು ಮತ್ತು ಇದರಲ್ಲಿ ಬೇರೆ ಯಾವುದೇ ಹೊರಗಿನ ದೇಶಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.

 

🚨🇨🇳 MASSIVE BREAKING NEWS, WESTERN MAINSTREAM MEDIA KEEPS HUSH HUSH:

President Xi Jingping meets with Cheng Li-wun Chairwoman of Taiwan’s next ruling party (KMT), in Beijing.

It’s happening, reunification between Taiwan province and China mainland, The U.S. and Japan are… pic.twitter.com/KszHZMRDMR

— Gerhardt vd Merwe (@realgerhardtvdm) April 10, 2026

ಅಮೆರಿಕದ ಶಸ್ತ್ರಾಸ್ತ್ರ ಖರೀದಿಗೆಂದು ತಮ್ಮ ಸರ್ಕಾರ ಬಜೆಟ್‌ನಲ್ಲಿ 40 ಬಿಲಿಯನ್ ಡಾಲರ್‌ ಹಣವನ್ನು ಮೀಸಲಿಟ್ಟಿದ್ದನ್ನು ಚೆಂಗ್ ಲಿ-ವುನ್ ಟೀಕಿಸಿದ್ದಾರೆ. ತೈವಾನ್ ಒಂದು ಎಟಿಎಂ ಅಲ್ಲ ಎಂದು ಹೇಳುವ ಮೂಲಕ ಅವರು ಮಿಲಿಟರಿ ವೆಚ್ಚಕ್ಕಿಂತ ಶಾಂತಿ ಮಾತುಕತೆಗೆ ಒತ್ತು ನೀಡಬೇಕೆಂದು ಪ್ರತಿಪಾದಿಸಿದ್ದಾರೆ

ಕೃಷಿ ಮತ್ತು ಮೀನುಗಾರಿಕೆ ಉತ್ಪನ್ನಗಳಿಗೆ ಚೀನಾದ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ನೀಡುವ ಬಗ್ಗೆ ಮತ್ತು ತೈವಾನ್ ಉದ್ಯಮಿಗಳ ಹಿತರಕ್ಷಣೆಯ ಬಗ್ಗೆ ಚರ್ಚಿಸಲಾಗಿದೆ. ಜನರ ನಡುವಿನ ಸಂಬಂಧವನ್ನು ವೃದ್ಧಿಸಲು ಪ್ರವಾಸೋದ್ಯಮ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಪುನಾರಂಭಿಸುವ ಬಗ್ಗೆ ಇಬ್ಬರೂ ನಾಯಕರು ಒಲವು ತೋರಿದ್ದಾರೆ.

ಭವಿಷ್ಯದಲ್ಲಿ ಒಂದು ದಿನ ತೈವಾನ್‌ಗೆ ಬರುವಂತೆ ಮತ್ತು ಅಲ್ಲಿ ತಾವೇ ಆತಿಥ್ಯ ನೀಡುವುದಾಗಿ ಚೆಂಗ್ ಲಿ-ವುನ್ ಅವರು ಕ್ಸಿ ಜಿನ್‌ಪಿಂಗ್ ಅವರಿಗೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ಸಜ್ಜಾದ ತೈವಾನ್‌ – ಏನಿದು ಚೀನಾದ 2049ರ ಗುರಿ?

ಈ ಮಾತುಕತೆಯನ್ನು ತೈವಾನ್‌ನ ಆಡಳಿತಾರೂಢ ಡಿಪಿಪಿ (DPP) ಪಕ್ಷ ಟೀಕಿಸಿದೆ. ಇದು ಚೀನಾದ ಪ್ರಭಾವಕ್ಕೆ ಒಳಗಾದ ಭೇಟಿ ಎಂದು ಕರೆದಿದೆ.

Xi Jinping, general secretary of the Communist Party of China (CPC) Central Committee, on Friday morning met with Cheng Li-wun, chairwoman of the Chinese Kuomintang (KMT) party, in Beijing.

Invited by the CPC Central Committee and Xi, Cheng is the first KMT chairperson to have… pic.twitter.com/v1CM53vXil

— China Perspective (@China_Fact) April 10, 2026

ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?
2016ರ ನಂತರ ತೈವಾನ್‌ನ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಚೀನಾಕ್ಕೆ ಭೇಟಿ ನೀಡಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು ಇದೇ ಮೊದಲು. ತೈವಾನ್ ಸುತ್ತಮುತ್ತ ಚೀನಿ ಯುದ್ಧ ನೌಕೆಗಳ ಸಂಚಾರ ಹೆಚ್ಚಾಗಿರುವ ಸಂಘರ್ಷಮಯ ಸಮಯದಲ್ಲಿ ಈ ʻಶಾಂತಿ ಮಿಷನ್ʼ ಭೇಟಿ ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಗೂ ಮುನ್ನ ಈ ಮಾತುಕತೆ ನಡೆದಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

2015 ರ ನವೆಂಬರ್ 7 ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಂದಿನ ತೈವಾನ್ ಅಧ್ಯಕ್ಷ ಮಾ ಯಿಂಗ್-ಜಿಯೋ (Ma Ying-jeou) ಸಿಂಗಾಪುರದಲ್ಲಿ ಭೇಟಿಯಾಗಿದ್ದರು. 1949 ರ ಅಂತರ್ಯುದ್ಧದ ನಂತರ ಉಭಯ ದೇಶಗಳ ರಾಷ್ಟ್ರ ಮುಖ್ಯಸ್ಥರು ಭೇಟಿಯಾದ ಮೊದಲ ಸಂದರ್ಭ ಇದಾಗಿತ್ತು. 81 ಸೆಕೆಂಡುಗಳ ಕಾಲ ಅವರು ಹಸ್ತಲಾಘವ ಮಾಡಿದ್ದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.  ಇದನ್ನೂ ಓದಿ: ಟ್ರಂಪ್‌ ಮಾತಿಗಿಲ್ಲ ಕಿಮ್ಮತ್ತು – ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್‌ ದಾಳಿ

Xi Jinping and Taiwanese President Ma Ying jeou in Singapore

ಚೀನಾದಿಂದ ಓಡಿದ್ದ ಕೆಎಂಟಿ:
ಚೆಂಗ್ ಲಿ-ವುನ್ ಪ್ರತಿನಿಧಿಸುತ್ತಿರುವ ಕೆಎಂಟಿ ಪಕ್ಷ ಈ ಮೊದಲು ಚೀನಾದಲ್ಲಿ ಅಧಿಕಾರದಲ್ಲಿತ್ತು. 1945ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಚಿಯಾಂಗ್ ಕೈ-ಶೇಕ್ ನೇತೃತ್ವದ ಕೆಎಂಟಿ ಮತ್ತು ಮಾವೋ ಝೆಡಾಂಗ್ ನೇತೃತ್ವದ ಕಮ್ಯುನಿಸ್ಟ್ ಪಕ್ಷದ (CCP) ನಡುವೆ ಅಧಿಕಾರಕ್ಕಾಗಿ ತೀವ್ರ ಯುದ್ಧ ನಡೆದಿತ್ತು. 1949ರ ವೇಳೆಗೆ ಕಮ್ಯುನಿಸ್ಟ್ ಪಡೆಗಳು ಚೀನಾದ ಬಹುತೇಕ ಪ್ರಮುಖ ನಗರಗಳನ್ನು ವಶಪಡಿಸಿಕೊಂಡಿದ್ದವು.

ಅಂತರ್ಯುದ್ಧದಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಚಿಯಾಂಗ್ ಕೈ-ಶೇಕ್ ಸುರಕ್ಷಿತ ನೆಲೆಗಾಗಿ ತೈವಾನ್ ದ್ವೀಪವನ್ನು ಆರಿಸಿಕೊಂಡರು. ತೈವಾನ್ ಮತ್ತು ಚೀನಾದ ನಡುವೆ ಇರುವ ಸಮುದ್ರವು ಕಮ್ಯುನಿಸ್ಟ್ ಪಡೆಗಳು ಸುಲಭವಾಗಿ ದಾಳಿ ಮಾಡುವುದನ್ನು ತಡೆಯಲು ಸಹಕಾರಿಯಾಗಿತ್ತು. 1949ರ ಡಿಸೆಂಬರ್‌ನಲ್ಲಿ ಕೆಎಂಟಿ ಸರ್ಕಾರವು ಅಧಿಕೃತವಾಗಿ ತೈವಾನ್‌ನ ತೈಪೆಯನ್ನು ತನ್ನ ತಾತ್ಕಾಲಿಕ ರಾಜಧಾನಿಯನ್ನಾಗಿ ಘೋಷಿಸಿತು.

ಚೀನಾ ತೈವಾನ್ ಅನ್ನು ತನ್ನದೇ ಒಂದು ಪ್ರಾಂತ್ಯವೆಂದು ಪರಿಗಣಿಸುತ್ತದೆ. ತೈವಾನ್ ತನ್ನನ್ನು ತಾನು ರಿಪಬ್ಲಿಕ್ ಆಫ್ ಚೀನಾ (ROC) ಎಂದು ಕರೆದುಕೊಳ್ಳುತ್ತದೆ. ಆದರೆ ಚೀನಾ ಇದನ್ನು ಒಪ್ಪುವುದಿಲ್ಲ.

TAGGED:chinaTaiwanXi Jinpinಕ್ಸಿ ಜಿನ್‍ಪಿಂಗ್ಚೀನಾತೈವಾನ್
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Rohit Sharma
Cricket

ಮುಂಬೈ ಇಂಡಿಯನ್ಸ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ – ಇತಿಹಾಸ ನಿರ್ಮಿಸಿದ ಹಿಟ್‌ಮ್ಯಾನ್‌

Public TV
By Public TV
2 minutes ago
Israeli Attack On Lebanon
Latest

ಟ್ರಂಪ್‌ ಮಾತಿಗಿಲ್ಲ ಕಿಮ್ಮತ್ತು – ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್‌ ದಾಳಿ

Public TV
By Public TV
19 minutes ago
Love
Latest

ಪ್ರೀತಿ ಕೈಬೀಸಿ ಕರೆಯುವಾಗ ಎಲ್ಲವನ್ನೂ ಬಿಟ್ಬಿಡ್ಬೇಕಂತೆ..!

Public TV
By Public TV
31 minutes ago
Nikhil Kumaraswamy
Bengaluru City

ನಾಳೆ ʻಜೆಡಿಎಸ್ ಬೆಳ್ಳಿ ಹಬ್ಬʼ ಸಮಾವೇಶ – 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

Public TV
By Public TV
45 minutes ago
West Bengala Election bjp manifesto Rs 3000 aid for women unemployed youth Uniform Civil Code in 6 months crackdown on infiltration Amit Shah Sankalp Patra 7th Pay Commission
Latest

ಮಹಿಳೆಯರಿಗೆ, ನಿರೋದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ – ಬಂಗಾಳ ಗೆಲ್ಲಲು ಬಿಜೆಪಿಯಿಂದ 15 ಭರವಸೆ

Public TV
By Public TV
2 hours ago
Srinanda
Chikkamagaluru

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?