ಕೋಲ್ಕತ್ತಾ: ಬಂಧನಕ್ಕೆ ಒಳಗಾಗಿರುವ ಪಶ್ಚಿಮ ಬಂಗಾಳದ ಟಿಎಂಸಿ (TMC) ಪಕ್ಷದ ನಾಯಕ ಜಹಾಂಗೀರ್ ಖಾನ್‌ನನ್ನು (Jahangir Khan) ಪೊಲೀಸರು ಹಾಫ್ ಪ್ಯಾಂಟ್ (ಚಡ್ಡಿ) ಧರಿಸಿದ ಸ್ಥಿತಿಯಲ್ಲೇ ಫಾಲ್ಟಾ (Falta) ಪ್ರದೇಶದಲ್ಲಿ ಮೆರವಣಿಗೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಮತ್ತು ಡಾರ್ಜಿಲಿಂಗ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೂನ್ 8 ರಂದು ಭಾರತ-ನೇಪಾಳ ಗಡಿಯ ಬಳಿಯ ಪಾನಿಟಂಕಿ ಬಜಾರ್‌ನಲ್ಲಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಜಹಾಂಗೀರ್ ಖಾನ್‌ನನ್ನು ಬಂಧಿಸಿತ್ತು.
ತನಿಖೆಯ ಭಾಗವಾಗಿ ಪೊಲೀಸರು ಇಂದು ಆತನನ್ನು ಫಾಲ್ಟಾ ಪ್ರದೇಶಕ್ಕೆ ಕರೆತಂದಾಗ ಹಾಫ್ ಪ್ಯಾಂಟ್ ಧರಿಸಿದ್ದ. ಈ ಸ್ಥಿತಿಯಲ್ಲೇ ಪೊಲೀಸರು ಅತನನ್ನು ನಡೆಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಜಹಾಂಗೀರ್ ಖಾನ್ ಫಾಲ್ಟಾ ಪ್ರಾಂತ್ಯದಲ್ಲಿ ತಾನೊಬ್ಬ ಡಾನ್ ಎಂಬಂತೆ ವರ್ತಿಸುತ್ತಿದ್ದ. ಸಿನಿಮಾ ಪಾತ್ರದಂತೆ ತನ್ನನ್ನು ಫಾಲ್ಟಾ ಪುಷ್ಪಾ (ನಾನು ಯಾರಿಗೂ ಬಗ್ಗುವುದಿಲ್ಲ) ಎಂದು ಕರೆದುಕೊಳ್ಳುತ್ತಿದ್ದ. ಆತನ ಭಯದಿಂದ ಬದುಕುತ್ತಿದ್ದ ಸ್ಥಳೀಯ ಜನರಲ್ಲಿ ಧೈರ್ಯ ತುಂಬಲು ಮತ್ತು ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತೋರಿಸಲು ಪೊಲೀಸರು ಅವರನ್ನು ಹಾಫ್ ಪ್ಯಾಂಟ್ (ಚಡ್ಡಿ) ಧರಿಸಿದ ಸ್ಥಿತಿಯಲ್ಲೇ ಬೀದಿಯಲ್ಲಿ ನಡೆಸಿದ್ದಾರೆ. ಇದನ್ನೂ ಓದಿ: ಮತದಾರರಿಗೆ ಬೆದರಿಕೆ ಕೇಸ್ ದಾಖಲಾದ ಬೆನ್ನಲ್ಲೇ ಚುನಾವಣೆಯಿಂದ ಹಿಂದೆ ಸರಿದ ಫಾಲ್ಟಾ ಟಿಎಂಸಿ ಅಭ್ಯರ್ಥಿ
Falta, West Bengal: Police escorted controversial local figure Jahangir Khan on foot through the Sahararhat area as part of an ongoing investigation. Dressed in shorts, Jahangir Khan was taken around the locality while investigators carried out inquiry-related procedures.… pic.twitter.com/031Ki9ZZNN
— IANS (@ians_india) June 11, 2026
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಸ್ಥಳೀಯ ಡೈಮಂಡ್ ಹಾರ್ಬರ್ ಕೋರ್ಟ್‌ನ ವಕೀಲರ ಸಂಘವು ಇತನ ಪರವಾಗಿ ವಾದಿಸಲು ನಿರಾಕರಿಸಿತ್ತು. ಹೀಗಾಗಿ ನ್ಯಾಯಾಧೀಶರು ಸರ್ಕಾರಿ ಕಾನೂನು ಸಹಾಯಕರನ್ನು ನೇಮಿಸಿ, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಫಾಲ್ಟಾ ಪೊಲೀಸ್ ಠಾಣೆಯಲ್ಲಿ ಜಹಾಂಗೀರ್ ಖಾನ್ ವಿರುದ್ಧ ಸುಲಿಗೆ, ಮತದಾರರಿಗೆ ಬೆದರಿಕೆ, ಭೂ ಅಕ್ರಮ ಸೇರಿದಂತೆ ಒಟ್ಟು 7 ಗಂಭೀರ ಎಫ್‌ಐಆರ್‌ಗಳು ದಾಖಲಾಗಿವೆ.
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಫಾಲ್ಟಾ ಕ್ಷೇತ್ರಕ್ಕೆ ಮತಯಂತ್ರಗಳ ಅಕ್ರಮದ ಕಾರಣದಿಂದ ಮೇ 21 ರಂದು ಮರುಮತದಾನ ಘೋಷಿಸಲಾಗಿತ್ತು. ಆದರೆ ಜಹಾಂಗೀರ್ ಖಾನ್ ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದ.
ಜಹಾಂಗೀರ್ ಖಾನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಫಾಲ್ಟಾ ಪ್ರಾಂತ್ಯದ ಆತನಿಂದ ಅನ್ಯಾಯಕ್ಕೆ ಒಳಗಾಗಿದ್ದ ಜನರು ಆತನ ಟಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಹಾಗೂ ದಾಖಲೆಗಳನ್ನು ಧ್ವಂಸಗೊಳಿಸಿದ್ದರು.
