ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ
ವಾರ: ಮಂಗಳವಾರ, ತಿಥಿ: ಪಂಚಮಿ
ನಕ್ಷತ್ರ: ಜೇಷ್ಠ
ರಾಹುಕಾಲ: 3.31 ರಿಂದ 5.03
ಗುಳಿಕಕಾಲ: 12.27 ರಿಂದ 1.59
ಯಮಗಂಡಕಾಲ: 9.23 ರಿಂದ 10.55
ಮೇಷ: ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮನಶಾಂತಿ, ಮಾತಿನ ಚಕಮಕಿ, ಅಕಾಲ ಭೋಜನ.
ವೃಷಭ: ಯತ್ನ ಕಾರ್ಯಗಳಲ್ಲಿ ಜಯ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಅವಿವಾಹಿತರಿಗೆ ವಿವಾಹ ಯೋಗ.
ಮಿಥುನ: ಈ ದಿನ ಮಾನಸಿಕ ಒತ್ತಡ, ಗುಪ್ತ ವಿದ್ಯೆಯಲ್ಲಿ ಆಸಕ್ತಿ, ಸ್ಥಳ ಬದಲಾವಣೆ, ವಿದೇಶ ಪ್ರಯಾಣ, ಉತ್ತಮ ಬುದ್ಧಿಶಕ್ತಿ.
ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆಪ್ತರ ಹಿತ ನುಡಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ.
ಸಿಂಹ: ಈ ದಿನ ಅಭಿವೃದ್ಧಿ ಕುಂಠಿತ, ಶತ್ರಭಾದೆ, ಚೋರ ಭಯ, ತೀರ್ಥಕ್ಷೇತ್ರ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಅಲ್ಪ ಪ್ರಗತಿ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯ ಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ.
ತುಲಾ: ಈ ದಿನ ಅನಿರೀಕ್ಷಿತ ಖರ್ಚು, ದೂರ ಪ್ರಯಾಣ, ಕುಟುಂಬದಲ್ಲಿ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸಾಲದಿಂದ ಮುಕ್ತಿ.
ವೃಶ್ಚಿಕ: ಈ ದಿನ ಶ್ರಮಕ್ಕೆ ತಕ್ಕ ಫಲ, ಶತ್ರಭಾದೆ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.
ಧನಸ್ಸು: ಆಪ್ತರೊಡನೆ ದೂರ ಪ್ರಯಾಣ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ.
ಮಕರ: ಮಕ್ಕಳಿಗಾಗಿ ಹಣವ್ಯಯ, ವಾದ ವಿವಾದಗಳಲ್ಲಿ ಎಚ್ಚರ, ಮನಶಾಂತಿ, ಸ್ತ್ರೀ ನಿಮಿತ್ತವಾದ ಅಪವಾದಗಳು ದೂರವಾಗುತ್ತವೆ.
ಕುಂಭ: ಈ ದಿನ ಅನಗತ್ಯ ಖರ್ಚು, ಉದ್ಯೋಗದಲ್ಲಿ ಭಡ್ತಿ, ಭೂ ಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನವಿಡಿ.
ಮೀನ: ಹೊಸ ಪ್ರಯತ್ನದಿಂದ ಕಾರ್ಯಾನುಕುಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ , ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವ ಸಾಧ್ಯತೆ.

