-ಪತನಗೊಂಡ ಜೆಟ್‌ನಲ್ಲಿ ಪ್ರಯಾಣಿಸಬೇಕಿದ್ದ ಮಾಜಿ ಮೇಜರ್ ಲೀಗ್ ಬೇಸ್‌ಬಾಲ್ ತಾರೆ
ಸ್ಯಾಂಟೋ ಡೊಮಿಂಗೊ: ಭಾನುವಾರ (ಜೂ.7) ಸಂಜೆ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ (Dominican Republic) ಟೇಕ್ ಆಫ್ ಕೆಲವೇ ಕ್ಷಣಗಳಲ್ಲಿ ಖಾಸಗಿ ಜೆಟ್‌ವೊಂದು ಪತನಗೊಂಡಿದೆ. ಪರಿಣಾಮ ಇಬ್ಬರು ಪೈಲಟ್ ಸಾವನ್ನಪ್ಪಿದ್ದು, ವಿಮಾನ ಹೊತ್ತಿಯುರಿದಿರುವ ಬೆಚ್ಚಿಬೀಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಪೈಲಟ್‌ಗಳಾದ ಎರಿಕ್ ಜೇವಿಯರ್ ಡಿಯಾಗೋ ಮತ್ತು ರೂಡಿ ಗಜಲ್ ಸಾವನ್ನಪ್ಪಿದ್ದಾರೆ. ಪೈಲಟ್ ಹೊರತಾಗಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಇರಾನ್‌ನ 20 ಸ್ಥಳಗಳನ್ನು ಗುರಿಯಾಗಿಸಿ ಇಸ್ರೇಲ್ ಬಾಂಬ್ ದಾಳಿ
A tragic accident occurred in the Dominican Republic last evening. A Gulfstream G200, tail number N318JF, departed La Romana International Airport for Austin, Texas, but declared an emergency after takeoff. The crew attempted to return to LRM, but the jet touched down hard on… pic.twitter.com/4dIKpNwQc3
— Turbine Traveller (@Turbinetraveler) June 8, 2026
ಅಮೆರಿಕದಲ್ಲಿ ನೋಂದಣಿಯಾಗಿರುವ `ಐಬೊನಿಟೊ ಏವಿಯೇಷನ್’ ಸಂಸ್ಥೆಗೆ ಸೇರಿದ ಖಾಸಗಿ ಜೆಟ್ Gulfstream G200 ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (La Romana International Airport) ಟೆಕ್ಸಾಸ್‌ನ ಆಸ್ಟಿನ್‌ಗೆ ಹೊರಟಿತ್ತು. ಈ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್ ವಿಮಾನವನ್ನು ಹಿಂದಿರುಗಿಸಿದ್ದು, ಟೇಕ್ ಆಫ್ ಆದ ವಿಮಾನ ನಿಲ್ದಾಣದಲ್ಲೇ ತುರ್ತು ಲ್ಯಾಂಡ್ ಆಗಲು ನಿರ್ಧರಿಸಿದ್ದಾರೆ. ಅದರಂತೆ ರನ್‌ವೇ 29ರಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ಪಕ್ಕದ ಹುಲ್ಲುಗಾವಲು ಪ್ರದೇಶಕ್ಕೆ ನುಗ್ಗಿ, ಕ್ಷಣಾರ್ಧದಲ್ಲಿ ಹೊತ್ತಿಉರಿದಿದೆ.
WATCH: Another angle shows the private jet crash during an attempted emergency landing at La Romana International Airport in the Dominican Republic. Two crew members were killed. pic.twitter.com/9lWZms7ynF
— Breaking911 (@Breaking911) June 8, 2026
ವಿಮಾನ ನಿಲ್ದಾಣದ ರಕ್ಷಣಾ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾದರೂ ಕೂಡ ಪೈಲಟ್‌ಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ವಿಮಾನ ಅಪಘಾತಕ್ಕೀಡಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಮಾನ ನಿಲ್ದಾಣದ ಮೇಲೆ ದಟ್ಟವಾದ ಕಪ್ಪು ಹೊಗೆ ಆವರಿಸಿರುವ ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಘಟನೆಯ ಬೆನ್ನಲ್ಲೇ ಡೊಮಿನಿಕನ್ ವಾಯುಯಾನ ಅಧಿಕಾರಿಗಳು ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಿದ್ದಾರೆ. ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿರುವ ಲಾ ರೊಮಾನಾ ವಿಮಾನ ನಿಲ್ದಾಣದಲ್ಲಿ 2021ರಲ್ಲೂ ಇಂತಹದ್ದೇ ಒಂದು ಖಾಸಗಿ ವಿಮಾನ ಅಪಘಾತ ಸಂಭವಿಸಿತ್ತು.ಇದನ್ನೂ ಓದಿ:ದಕ್ಷಿಣ ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪ – ನೆಲಕ್ಕುರುಳಿದ ಕಟ್ಟಡ, ಸುನಾಮಿ ಎಚ್ಚರಿಕೆ
ಟೇಕ್ ಆಫ್ ಕೆಲವೇ ಹೊತ್ತಲ್ಲಿ ಹೊತ್ತಿಯುರಿದ ಖಾಸಗಿ ಜೆಟ್:
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್ ವೈಫಲ್ಯ ಅಥವಾ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದೆ. ಅಪಘಾತಕ್ಕೀಡಾಗುವ ಮುನ್ನ ವಿಮಾನ ನಿಲ್ದಾಣದಿಂದ ಸುಮಾರು 16 ನಾಟಿಕಲ್ ಮೈಲಿ (29.6 ಕಿ.ಮೀ) ದೂರಕ್ಕೆ ತಲುಪಿದ್ದಾಗ ವಿಮಾನ ನಿಯಂತ್ರಣ ತಪ್ಪುತ್ತಿರುವುದನ್ನು ಗಮನಿಸಿದ್ದ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ತುರ್ತು ಪರಿಸ್ಥಿತಿಯ ಸಂದೇಶ ರವಾನಿಸಿದ್ದರು ಎಂದು ತಿಳಿದುಬಂದಿದೆ.
ಬದುಕುಳಿದ ಬೇಸ್‌ಬಾಲ್ ತಾರೆ:
ಮಾಜಿ ಮೇಜರ್ ಲೀಗ್ ಬೇಸ್‌ಬಾಲ್ ತಾರೆ ಯಾಡಿಯರ್ ಮೋಲಿನಾ ಅವರು ಈ ಕುರಿತು ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅಪಘಾತಕ್ಕೀಡಾದ ಈ ವಿಮಾನವು ತಮ್ಮನ್ನು, ತಮ್ಮ ಕುಟುಂಬಸ್ಥರನ್ನು ಮತ್ತು ಸ್ನೇಹಿತರನ್ನು ಪಿಕ್-ಅಪ್ ಮಾಡಲು ಬರಬೇಕಿತ್ತು ಎಂದು ಖಚಿತಪಡಿಸಿದ್ದಾರೆ. ನಿಗದಿಯಾಗಿದ್ದ ಸ್ಥಳಕ್ಕೆ ತಲುಪುವ ಮುನ್ನವೇ ವಿಮಾನ ಅಪಘಾತಕ್ಕೀಡಾಗಿದೆ.ಇದನ್ನೂ ಓದಿ: ಕದನ ವಿರಾಮದ ಬಳಿಕ ಫಸ್ಟ್ ಟೈಮ್ ಇಸ್ರೇಲ್ ಮೇಲೆ ಇರಾನ್ ಮಿಸೈಲ್ ದಾಳಿ
