ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ (Bengal Polls) 284 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ (Congress) ಬಿಡುಗಡೆ ಮಾಡಿದೆ. ರಾಜ್ಯದ 294 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್, ಒಂದೇ ಹಂತದಲ್ಲಿ 284 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಬಹರಂಪುರದಿಂದ ಮಾಜಿ ರಾಜ್ಯ ಘಟಕದ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮತ್ತು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಟಿಎಂಸಿ ಸಂಸದ ಮೌಸಮ್ ನೂರ್ ಅವರನ್ನು ಮಾಲತಿಪುರನಿಂದ ಕಣಕ್ಕಿಳಿಸಿದೆ. ಡಾರ್ಜಿಲಿಂಗ್ನಿಂದ ಮಾಧಪ್ ರೈ, ಸುಜಾಪುರದಿಂದ ಅಬ್ದುಲ್ ಹನ್ನನ್, ಡಮ್ ಡಮ್ನಿಂದ ಸುಸ್ಮಿತಾ ಬಿಸ್ವಾಸ್, ಡೈಮಂಡ್ ಹಾರ್ಬರ್ನಿಂದ ಗೌತಮ್ ಭಟ್ಟಾಚಾರ್ಯ, ಅಸನ್ಸೋಲ್ ದಕ್ಷಿಣದಿಂದ ಸೌವಿಕ್ ಮುಖರ್ಜಿ ಮತ್ತು ಅಸನ್ಸೋಲ್ ಉತ್ತರದಿಂದ ಪ್ರಸೇನ್ಜಿತ್ ಪುಯಿತಾಂಡಿ ಅವರನ್ನು ಪಕ್ಷವು ಕಣಕ್ಕಿಳಿಸುತ್ತಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಗಳು ವಿಶ್ವಾಸದಿಂದ ಹೆಜ್ಜೆ ಇಡಬೇಕು – ತೈಲ ಅಭಾವ ವದಂತಿಗೆ ಜನ ಕಿವಿಗೊಡಂತೆ ಮೋದಿ ಕರೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಕಾಂಗ್ರೆಸ್ನ ಉನ್ನತ ನಾಯಕರು ಶನಿವಾರ (ಮಾ.28) ಚರ್ಚಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಘಟನಾ, ಕೆ ಸಿ ವೇಣುಗೋಪಾಲ್ ಮತ್ತು ಪಶ್ಚಿಮ ಬಂಗಾಳದ ನಾಯಕರು ಭಾಗವಹಿಸಿದ್ದರು. ಸಭೆಯ ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯುತ್ತಿದೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ: ಪ್ರಧಾನಿ ಮೋದಿ

