ಬೆಂಗಳೂರು: ರಾಜ್ಯದ ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೂತನ ಸಿಎಂ ಡಿಕೆ ಶಿವಕುಮಾರ್ (DK Shivakumar) ಸಿಹಿ ಸುದ್ದಿ ಕೊಟ್ಟಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿಂದು ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಹೆಗಲ ಮೇಲಿರೋದು ಸಿಎಂ ಜವಾಬ್ದಾರಿಯಲ್ಲ, ಕನ್ನಡಿಗರ ಕನಸು ನನಸು ಮಾಡುವ ಕರ್ತವ್ಯ: ನೂತನ ಸಿಎಂ ಡಿಕೆಶಿ

ಇಷ್ಟು ದಿನ ವಿದ್ಯಾರ್ಥಿನಿಯರಿಗೆ ಮಾತ್ರ ನೀಡುತ್ತಿದ್ದ ಬಸ್ ಪಾಸ್‌ಗಳನ್ನ ಶಾಲಾ ಬಾಲಕರು, ಕಾಲೇಜು ಯುವಕರಿಗೂ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. ಆದ್ರೆ ಅವರು ವಿದ್ಯಾರ್ಥಿಗಳು ಅಂತ ತಿಳಿಯೋಕೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಷ್ಟು ಸಾವಿರ ಕೋಟಿ ಕೋಟಿಯಾದ್ರೂ ನಾವು ಇದನ್ನೂ ಮಾಡುತ್ತೇವೆ. ವಿದ್ಯಾರ್ಥಿಗಳಿಗೂ ಯಾರೇ ಇರಲಿ ಅವರಿಗೆ ಉಚಿತ ಬಸ್ ಪಾಸ್ ಕೊಡಬೇಕು ಅಂತ ತೀರ್ಮಾನಿಸಿರುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಆಗಿರೋದು ಖುಷಿ ತಂದಿದೆ, ತಂದೆ ಅವಧಿ ಪೂರೈಸದ್ದಕ್ಕೆ ದುಃಖವಿದೆ: ಯತೀಂದ್ರ
