ಕ್ಯೂಟ್ ಕಪಲ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಇದೀಗ ಸತಿಪತಿಯಾಗಿದ್ದಾರೆ.
ಮದ್ವೆ ಬಳಿಕ 1 ತಿಂಗಳು ಕೆಲಸಕ್ಕೆ ಬಿಡುವು ತೆಗೆದುಕೊಂಡಿದ್ದ ಈ ಜೋಡಿ ಮತ್ತೆ ಕೆಲಸಕ್ಕೆ ಮರಳಿದೆ. ವಿಶೇಷ ಅಂದ್ರೆ ಒಟ್ಟಿಗೆ ಚಿತ್ರೀಕರಣದ ಸ್ಥಳಕ್ಕೆ ಬಂದಿಳಿದಿದ್ದಾರೆ. ಇಬ್ಬರೂ ಜೊತೆಯಾಗಿ ನಟಿಸುತ್ತಿರುವ 3ನೇ ಚಿತ್ರದ ಚಿತ್ರೀಕರಣಕ್ಕೆ ಒಟ್ಟಿಗೆ ಸಿನಿಮಾ ಸೆಟ್‌ಗೆ ಬಂದು ವಿರೋಶ್ ಜೋಡಿ ಗಮನ ಸೆಳೆದಿದೆ. ಇದನ್ನೂ ಓದಿ: ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್

`ರಣಬಾಲಿ’ (Ranabaali) ಚಿತ್ರಕ್ಕಾಗಿ ಆಂಧ್ರದ ಅನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಫಸ್ಟ್ ಶೆಡ್ಯೂಲ್ ಚಿತ್ರೀಕರಣಕ್ಕೆ ಇಬ್ಬರೂ ಮದುವೆ ಬಳಿಕ ಪ್ರಥಮವಾಗಿ ಎಂಟ್ರಿ ಕೊಟ್ರು. ತಾರಾಜೋಡಿ ಎಂಟ್ರಿ ಕೊಡುತ್ತಿದ್ದಂತೆ ಇಬ್ಬರಿಗೂ ಆರತಿ ಮಾಡಿ, ತಿಲಕವಿಟ್ಟು ಸೆಟ್‌ಗೆ ಕರೆಸಿಕೊಳ್ಳಲಾಯಿತು. ಇದನ್ನೂ ಓದಿ: ಸೆಟ್ಟೇರುತ್ತಿದೆ ʻಆಪರೇಷನ್ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ

ಚಿತ್ರತಂಡ ಹೊಸ ದಂಪತಿಗೆ ಅದ್ಧೂರಿ ಸ್ವಾಗತ ಕೋರಿದೆ. ಸಾಂಪ್ರದಾಯಿಕ ರೀತಿಯಲ್ಲಿ ಇಬ್ಬರನ್ನೂ ಸೆಟ್‌ನ ಒಳಗೆ ಕರೆಸಿಕೊಂಡಿದ್ದಾರೆ. ರಣಬಾಲಿ ಇದು ರಿಯಲ್ ಸ್ಟೋರಿಯ ಸ್ಫೂರ್ತಿಯಿಂದ ತಯಾರಾಗ್ತಿರೋ ಚಿತ್ರವಾಗಿದ್ದು ಇಲ್ಲಿ ರಶ್ಮಿಕಾ ಹಾಗೂ ವಿಜಯ್ ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಳ್ತಾರೆ.
ಇದೀಗ ತೆರೆಯ ಹಿಟ್ ಪೇರ್ ರಿಯಲ್ ಲೈಫ್‌ನಲ್ಲೂ ಜೊತೆಯಾಗಿರೋದ್ರಿಂದ ಒಟ್ಟಿಗೆ ಸೆಟ್‌ಗೆ ಆಗಮಿಸಿದ್ದಾರೆ. ಈ ಮಧುರ ಗಳಿಗೆಯನ್ನ ಚಿತ್ರತಂಡ ಇನ್ನಷ್ಟು ವಿಶೇಷವಾಗಿಸಿದೆ. ಇದನ್ನೂ ಓದಿ: ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್

