ಇಂದು (ಮಾ.26) ಬಿಜೆಪಿ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆ ಪೈಕಿ ದೇಶವನ್ನೇ ಬೆಚ್ಚಿಬಿಳಿಸಿದ್ದ ಆರ್ಜಿ ಕರ್ ಮೆಡಿಕಲ್ ಕಾಲೇಜಿನ (RG Kar Medilal College) ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನ ದೇಬನಾಥ್ (Ratna Debnath) ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಪಾಣಿಹಟಿ (Panihati) ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನೂ ಓದಿ: ಕ್ಲಾಸ್ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್ – ಚಪ್ಪಲಿ ಏಟು ತಿಂದ ಪ್ರೊಫೆಸರ್
ಈ ಹಿಂದೆ ರತ್ನ ದೇಬನಾಥ್ ಅವರು ರಾಜಕೀಯ ಪ್ರವೇಶಿಸುತ್ತಿರುವುದಾಗಿ ಹಾಗೂ ಬಿಜೆಪಿ ಸೇರುತ್ತಿರುವುದಾಗಿ ತಿಳಿಸಿದ್ದರು. ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು, ಪಶ್ಚಿಮ ಬಂಗಾಳದ ಮಹಿಳೆಯರ ಸುರಕ್ಷತೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅದಾದ ಬಳಿಕ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಅವರು ಸ್ಪರ್ಧಿಸಲು ಒಪ್ಪಿಕೊಂಡ ನಂತರ ಟಿಕೆಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ರತೀಂದ್ರ ನಾಥ್ ಬೋಸ್ ಅವರನ್ನು ಕೂಚ್ಬೆಹರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ, ಡಾ. ಶಂಕರ್ ಗುಚ್ಚೈತ್ ಅವರನ್ನು ಮೇದಿನಿಪುರದಿಂದ ಮತ್ತು ಬಿಪ್ಲಬ್ ಮಂಡಲ್ ಅವರನ್ನು ಹೌರಾ ಮಧ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
2024 ಅಗಸ್ಟ್ನಲ್ಲಿ ಆರ್ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಮಾಡಿ, ಹತ್ಯೆ ಮಾಡಲಾಗಿತ್ತು. ಸಂತ್ರಸ್ತೆಯ ನ್ಯಾಯಕ್ಕಾಗಿ ದೇಶಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದವು.ಇದನ್ನೂ ಓದಿ: Andhra Pradesh | ಟಿಪ್ಪರ್ಗೆ ಬಸ್ ಡಿಕ್ಕಿ – 12 ಮಂದಿ ಸಜೀವ ದಹನ; ಸುಟ್ಟು ಬೂದಿಯಾದ ಬಸ್

