Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೆರೆಗಳ ಪುನರುಜ್ಜೀವನದ ಜೊತೆಯಲ್ಲಿ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧ: ಎನ್‌ಎಸ್ ಬೋಸರಾಜು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೆರೆಗಳ ಪುನರುಜ್ಜೀವನದ ಜೊತೆಯಲ್ಲಿ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧ: ಎನ್‌ಎಸ್ ಬೋಸರಾಜು

Bengaluru City

ಕೆರೆಗಳ ಪುನರುಜ್ಜೀವನದ ಜೊತೆಯಲ್ಲಿ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧ: ಎನ್‌ಎಸ್ ಬೋಸರಾಜು

Public TV
Last updated: March 23, 2026 3:38 pm
Public TV
Share
3 Min Read
NS Boseraju World Water Day 2026
SHARE

ಬೆಂಗಳೂರು: ಕೆರೆಗಳ (Lake) ಪುನರುಜ್ಜೀವನದ ಜೊತೆಯಲ್ಲೇ ಅಂತರ್ಜಲ (Groundwater) ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ಎಸ್ ಬೋಸರಾಜು (NS Boseraju) ತಿಳಿಸಿದರು.

ಇಂದು ವಿಶ್ವ ಜಲ ದಿನದ ಅಂಗವಾಗಿ 𝗪𝗵𝗲𝗿𝗲 𝗪𝗮𝘁𝗲𝗿 𝗙𝗹𝗼𝘄𝘀 – 𝗘𝗾𝘂𝗮𝗹𝗶𝘁𝘆 𝗚𝗿𝗼𝘄𝘀 ಎಂಬ ವಿಷಯದಡಿ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕರ್ನಾಟಕ ರಾಜ್ಯ ಘಟಕ, ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹಾಗೂ ಡಾನ್ ಬಾಸ್ಕೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಬೀದರ್‌ನ ಸರ್ಕಾರಿ ಶಾಲೆಯ 6 ಸಿಲಿಂಡರ್ ಕಳ್ಳತನ

NS Boseraju World Water Day 2026 1

ಕರ್ನಾಟಕ ಸರ್ಕಾರ ಕೆಸಿ ವ್ಯಾಲಿ, ಹೆಚ್‌ಎನ್ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಜಲ ಸುಸ್ಥಿರತೆಯಲ್ಲಿ ವಿನೂತನ ಹೆಜ್ಜೆ ಇಡುತ್ತಿದೆ. ಈಗಾಗಲೇ ಕೆಸಿ ವ್ಯಾಲಿ ಯೋಜನೆ ಅಡಿಯಲ್ಲಿ 143 ಕೆರೆಗಳು ಹಾಗೂ ಹೆಚ್‌ಎನ್ ವ್ಯಾಲಿ ಅಡಿಯಲ್ಲಿ 65 ಕೆರೆಗಳಿಗೆ ಮರುಜೀವ ನೀಡಲಾಗಿದ್ದು, ಬಯಲು ಸೀಮೆಯ ಒಟ್ಟು 700 ಕೆರೆಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ. ಈ ಯಶಸ್ಸಿನ ಪ್ರೇರಣೆಯಿಂದ, ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಿಸಲು 1,081 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾದ ವೃಷಭಾವತಿ ವ್ಯಾಲಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಈಗ 41 ದೇಶಗಳಿಂದ ಇಂಧನ ಅಮದು, ಗಲ್ಫ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆ ನಮಗೆ ಮುಖ್ಯ: ಮೋದಿ

NS Boseraju World Water Day 2026 3

ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ 472 ಏತ ನೀರಾವರಿ (𝗟𝗶𝗳𝘁 𝗜𝗿𝗿𝗶𝗴𝗮𝘁𝗶𝗼𝗻) ಯೋಜನೆಗಳ ಮೂಲಕ 1,318 ಕೆರೆಗಳನ್ನು ತುಂಬಿಸಲಾಗುತ್ತಿದೆ. ಜೊತೆಗೆ, 8,000ಕ್ಕೂ ಹೆಚ್ಚು ಚೆಕ್ ಡ್ಯಾಂಗಳು, ಬ್ರಿಡ್ಜ್-ಕಂ-ಬ್ಯಾರೇಜ್‌ಗಳು ಮತ್ತು ವೆಂಟೆಡ್ ಡ್ಯಾಂಗಳ ನಿರ್ಮಾಣದ ಮೂಲಕ ರಾಜ್ಯವು ಸುಸ್ಥಿರ ಜಲ ಸಂಗ್ರಹಣಾ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ಯೋಜನೆಗಳಿಂದಾಗಿ ನಮ್ಮ ರಾಜ್ಯದ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ

 

ಡೇಟಾ ಅನಾಲಿಟಿಕ್ಸ್, ರಿಯಲ್-ಟೈಮ್ ಮಾನಿಟರಿಂಗ್ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ರಾಜ್ಯವು ಅಂತರ್ಜಲ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿದೆ. ಇದರಿಂದ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿದೆ. ಇದಲ್ಲದೆ, ಕೋಲಾರದ ಎಸ್. ಅಗ್ರಹಾರದಲ್ಲಿ 100𝗠𝗪 ಸಾಮರ್ಥ್ಯದ ತೇಲುವ ಸೌರ ಯೋಜನೆಯನ್ನು (𝗙𝗹𝗼𝗮𝘁𝗶𝗻𝗴 𝗦𝗼𝗹𝗮𝗿 𝗣𝗿𝗼𝗷𝗲𝗰𝘁) ಪ್ರಸ್ತಾಪಿಸಲಾಗಿದ್ದು, ನವೀಕರಿಸಬಹುದಾದ ವಿದ್ಯುತ್ ಶಕ್ತಿಯನ್ನು ಇಲ್ಲಿ ಉತ್ಪಾದಿಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ – ರಿಕ್ಕಿ ರೈಗೆ ನೋಟಿಸ್

NS Boseraju World Water Day 2026 4

ನಮ್ಮ ದೇಶ ಹಾಗೂ ರಾಜ್ಯದ ಅಭಿವೃದ್ದಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದಾಗಿದೆ. ಅವರ ತಾಂತ್ರಿಕ ಪರಿಣಿತಿಯಿಂದ ರಾಜ್ಯದಲ್ಲಿ ನೀರಿನ ಸದ್ಬಳಕೆ ಸಾಧ್ಯವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ದೇಶದಲ್ಲಿ ಪರಿಸ್ಥಿತಿ ನಿಭಾಯಿಸಲು ಮೋದಿ ನೇತೃತ್ವದ ಸಭೆ – ಹಿರಿಯ ಸಚಿವರ ತಂಡ ರಚನೆ

ಈ ವಿಚಾರಸಂಕಿರಣದಲ್ಲಿ ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರಾದ ಶ್ರೀ ಕೆ. ಜಯಪ್ರಕಾಶ್, 𝗜𝗘𝗜, 𝗞𝗦𝗖 ಅಧ್ಯಕ್ಷರಾದ ಡಾ. ಹೆಚ್.ಕೆ. ರಾಮರಾಜು, 𝗜𝗪𝗪𝗔 ಮತ್ತು 𝗜𝗪𝗘𝗞 ಅಧ್ಯಕ್ಷರಾದ ಇಂಜಿನಿಯರ್ ಬಿ. ಶ್ರೀನಿವಾಸ ರೆಡ್ಡಿ, 𝗜𝗜𝗦𝗰 ಪ್ರಾಧ್ಯಾಪಕರಾದ ಡಾ. ಲಕ್ಷ್ಮೀನಾರಾಯಣ ರಾವ್, 𝗗𝗦𝗜 ಕಾರ್ಯದರ್ಶಿ ಶ್ರೀ ಗಾಳಿಸ್ವಾಮಿ, 𝗗𝗕𝗜𝗧 ಉಪಾಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಮಂಜುನಾಥ್, 𝗗𝗕𝗜𝗧 ಪ್ರಾಂಶುಪಾಲರಾದ ಡಾ. ಬಿ.ಎಸ್. ನಾಗಭೂಷಣ ಮತ್ತು 𝗜𝗘𝗜 ಕೌನ್ಸಿಲ್ ಸದಸ್ಯರಾದ ಇಂಜಿನಿಯರ್ ಎಂ. ನಾಗರಾಜ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: LPG ಬಿಕ್ಕಟ್ಟು: 14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆಗೆ ಕೇಂದ್ರ ಚಿಂತನೆ

TAGGED:bengalurucongressgroundwaterlakeNS BoserajuWorld Water Day 2026ಅಂತರ್ಜಲಎನ್‌ಎಸ್ ಬೋಸರಾಜುಕಾಂಗ್ರೆಸ್ಕೆರೆಬೆಂಗಳೂರು
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

Ramnavami in raichuru
Districts

ರಾಮನವಮಿ ಸಡಗರ – ರಾಯಚೂರಿನ ದೇವಾಲಯಗಳಲ್ಲಿ ನಿರಂತರ ಪೂಜೆ, ಭಕ್ತರಿಗೆ ಅನ್ನಸಂತರ್ಪಣೆ

Public TV
By Public TV
19 minutes ago
Ricky Rai 4
Bengaluru City

ಡ್ರಿಫ್ಟಿಂಗ್ ಬಳಿಕ ರಿಕ್ಕಿ ರೈ ವಿರುದ್ಧ ಮತ್ತೊಂದು FIR – ಕಾರು ರಿಜಿಸ್ಟರ್ ಮಾಡದೇ ಟ್ಯಾಕ್ಟ್ ಕಟ್ಟದೇ ಸರ್ಕಾರಕ್ಕೆ ವಂಚನೆ

Public TV
By Public TV
42 minutes ago
Petrol Lockdown
Latest

ತೈಲ ಬಿಕ್ಕಟ್ಟಿನ ಮಧ್ಯೆ ಲಾಕ್‌ಡೌನ್ ಭೀತಿ – ವದಂತಿ ಅಲ್ಲಗಳೆದ ಕೇಂದ್ರ

Public TV
By Public TV
55 minutes ago
Ayodhya Ram
Latest

ರಾಮನವಮಿ | ಅಯೋಧ್ಯೆ ಬಾಲರಾಮನ ಹಣೆಯ ಮೇಲೆ ಮೂಡಿದ ʻಸೂರ್ಯ ತಿಲಕʼ

Public TV
By Public TV
1 hour ago
ಸಾಂದರ್ಭಿಕ ಚಿತ್ರ
Chikkaballapur

ಗ್ಯಾಸ್ ಅಭಾವದ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ 247 ಸಿಲಿಂಡರ್ ಜಪ್ತಿ

Public TV
By Public TV
1 hour ago
Iran Israel
Latest

`ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?