ಲಂಡನ್: ಇಲ್ಲಿನ (London) ರಸ್ತೆಯಲ್ಲಿ ಪಾನ್ ಉಗುಳಿದ ಭಾರತ (India) ಮೂಲದ ಇಬ್ಬರು ವ್ಯಕ್ತಿಗಳಿಗೆ ತಲಾ 1.7 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮೊದಲ ಪ್ರಕರಣದಲ್ಲಿ, ಎಡ್ಗ್ವೇರ್ ನಿವಾಸಿ ಅಕ್ಷಿತ್ಕುಮಾರ್ ಭದ್ರೆ ಪಟೇಲ್ (31) ಅವರಿಗೆ ಈ ತಿಂಗಳ ಆರಂಭದಲ್ಲಿ ವಾಯುವ್ಯ ಲಂಡನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 1,391 ಯೂರೋ ದಂಡ ವಿಧಿಸಿತ್ತು. ಜೂನ್ 11, 2025 ರಂದು ಅವರು ಕಿಂಗ್ಸ್ಬರಿಯ ರಸ್ತೆಯಲ್ಲಿ ಪಾನ್ ಉಗುಳಿದ್ದರು. ಅವರಿಗೆ 100 ಯುರೋ ದಂಡ ವಿಧಿಸಲಾಗಿತ್ತು. ಅವರು ದಂಡ ಪಾವತಿಸದೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ನ್ಯಾಯಾಲಯಕ್ಕೂ ಅವರು ಹಾಜರಾಗಿರಲಿಲ್ಲ. ಬಳಿಕ ನ್ಯಾಯಾಲಯ ಅವರಿಗೆ 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ
ಇದೇ ರೀತಿಯ ಪ್ರತ್ಯೇಕ ಪ್ರಕರಣದಲ್ಲಿ, ರುಯಿಸ್ಲಿಪ್ನಲ್ಲಿ ವಾಸಿ ಹಿತೇಶ್ ಪಟೇಲ್ (32) ಅವರಿಗೂ ನ್ಯಾಯಾಲಯವು (Court) 1,391 ಯುರೋ (1.7 ಲಕ್ಷ ರೂ.) ದಂಡ ವಿಧಿಸಿದೆ. ಜೂನ್ 12, 2025 ರಂದು ವೆಂಬ್ಲಿ ಹಿಲ್ನ ರಸ್ತೆಯೊಂದರಲ್ಲಿ ಪಾನ್ ಉಗುಳಿದ್ದರು. ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯ ದಂಡ ವಿಧಿಸಿದೆ.
ಪಾನ್ ಉಗುಳುವುದರಿಂದ ಉಂಟಾಗುವ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರತಿ ವರ್ಷ 30,000 ಯೂರೋಗಳಿಗಿಂತ (32,08,920 ರೂ.) ಹೆಚ್ಚು ಖರ್ಚು ಮಾಡಲಾಗುತ್ತದೆ. ಯಂತ್ರಗಳು ಸಹ ಆ ಕಲೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ರಸ್ತೆಯಲ್ಲಿ ಪಾನ್ ಉಗುಳುವುದನ್ನು ತಡೆಗಟ್ಟಲು ಕೌನ್ಸಿಲ್ ನಿಯಮಿತ ಮೇಲ್ವಿಚಾರಣೆ ಸಹ ಜಾರಿಗೆ ತರಲಾಗಿದೆ. ಮೇಲ್ವಿಚಾರಣೆಗಾಗಿ ಅಧಿಕಾರಿಗಳು ಪ್ರತಿದಿನ ಗಸ್ತು ತಿರುಗುತ್ತಾರೆ ಮತ್ತು ಪಾನ್ ಉಗುಳುವುದು ಕಂಡುಬಂದರೆ 100 ಯುರೋ ದಂಡ ವಿಧಿಸುತ್ತಾರೆ. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ LNG ಸ್ಥಾವರದ ಮೇಲೆ ಇರಾನ್ ದಾಳಿ- ಭಾರತದ ಮೇಲೆ ಪರಿಣಾಮ ಏನು?

