– ರಾಜ್ಯದಲ್ಲಿ ಇರೋದು ಡಿನ್ನರ್ ಪಾರ್ಟಿ ಸರ್ಕಾರ: ವಿಪಕ್ಷ ನಾಯಕ ವಾಗ್ದಾಳಿ
ಬೆಂಗಳೂರು: ತಮ್ಮ ಮಗನನ್ನು ಬೆಳೆಸಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಯತೀಂದ್ರ ಬೆಂಬಲಿಸುವಂತೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ನಾನು ಸಮಾಜವಾದಿ ಅಲ್ಲ. ಜಾತಿವಾದಿ ಅಲ್ಲ. ಕುಟುಂಬವಾದಿ ಅಲ್ಲ ಅಂತಿದ್ರು. ನಿನ್ನೆ ಇವರ ಮಗನನ್ನ ನೋಡಿಕೊಳ್ಳಿ ಅಂತ ಹೇಳಿದ್ದಾರೆ. ಮುಂದೆ ಮೊಮ್ಮಗನನ್ನೂ ನೋಡಿಕೊಳ್ಳಿ ಅಂತ ಹೇಳ್ತಾರೆ. ಇದೇನು ರಾಜರ ಮನೆ ಆಡಳಿತನಾ? ಈ ರಾಜ ಆದ ಮೇಲೆ ಅವರ ಮಗ ರಾಜ ಆಗಬೇಕು ಅನ್ನೋದಕ್ಕೆ ಅಂತ ಕಿಡಿಕಾರಿದರು.
ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ರು, ರಾಜರ ಆಡಳಿತ ಹೋಗಿ ಪ್ರಜಾಪ್ರಭುತ್ವ ಬರಬೇಕು ಅಂತ. ಆದರೆ, ಸಿದ್ದರಾಮಯ್ಯ ಅಂಬೇಡ್ಕರ್ ಅವರ ಸಂವಿಧಾನಕ್ಕೆ ತಿಲಾಂಜಲಿ ಹಾಕಿದ್ದಾರೆ. ಯಾರೇ ಆದರೂ ಬ್ಯಾಲೆಟ್‌ನಿಂದ ಗೆದ್ದು ಬರಬೇಕು. ಇಲ್ಲದೆ ಹೋದರೆ ಮಗನನ್ನ, ಮೊಮ್ಮಗನನ್ನ ಗೆಲ್ಲಿಸಿ ಅಂತ ಕೂರ್ತಾರೆ. ಸಿದ್ದರಾಮಯ್ಯ ಹೇಳಿಕೆ ನನಗೆ ಆಶ್ಚರ್ಯ ಎನ್ನಿಸಿದೆ ಅಂತ ತಿಳಿಸಿದರು. ಇದನ್ನೂ ಓದಿ: ಯುದ್ಧದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡಬಾರದು: ಆರ್.ಅಶೋಕ್
ರಾಜ್ಯದಲ್ಲಿ ಇರೋದು ಡಿನ್ನರ್ ಪಾರ್ಟಿ ಸರ್ಕಾರ. ಡಿ.ಕೆ.ಶಿವಕುಮಾರ್ ಡಿನ್ನರ್ ಪಾರ್ಟಿ ಆದ ಮೇಲೆ ಈಗ ಸಿದ್ದರಾಮಯ್ಯ ಟೀಂ ಪಾರ್ಟಿ ಮಾಡ್ತಿದೆ. ಸಿದ್ದರಾಮಯ್ಯ ಗ್ಯಾಂಗ್ ಪ್ರತಿದಿನ ಡಿನ್ನರ್ ಪಾಲಿಟಿಕ್ಸ್ ಮಾಡಿ ಅಂತ ಸೂಚಿಸಿದ್ದಾರೆ. ರಾಜ್ಯದ ಜನರಿಗೆ ಗೊತ್ತಿಲ್ಲ ಯಾವ ಡಿನ್ನರ್ ಮಾಡಬೇಕು ಅಂತ. ಆದರೆ, ಇವರು ಪ್ರತಿದಿನ ಡಿನ್ನರ್ ಮಾಡ್ತಿದ್ದಾರೆ. ಆದರೆ, ಯಾರು ಸಿಎಂ ಅನ್ನೋ ಚರ್ಚೆ ವಿನಃ ಬೇರೆ ಯಾವುದೇ ಅಭಿವೃದ್ಧಿ ವಿಚಾರ ಚರ್ಚೆಯನ್ನ ಮಾಡ್ತಿಲ್ಲ. ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾರ್ಟಿ ಜಾಸ್ತಿ ಆಗಿದೆ. ಇದು ಡಿನ್ನರ್ ಪಾರ್ಟಿ ಸರ್ಕಾರ ಆಗಿದೆ ಅಂತ ಕಿಡಿಕಾರಿದರು.
ಬಜೆಟ್ ಸರಿಯಿಲ್ಲ ಎಂಬ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನ ಎಲ್ಲಾ ಶಾಸಕರು ಹೇಳಿದ್ದಾರೆ ಬಜೆಟ್ ಸರಿ ಇಲ್ಲ ಅಂತ. ಬಜೆಟ್ ಸರಿ ಇಲ್ಲ ಅಂತ ಬಹುತೇಕ ಕಾಂಗ್ರೆಸ್ ಶಾಸಕರು ಬೈಕೊಂಡು ಆಚೆ ಬಂದು ಕುಳಿತಿದ್ರು. ಕಾಂಗ್ರೆಸ್‌ನ ಎಲ್ಲಾ ಶಾಸಕರ ಪರವಾಗಿ ಇಕ್ಬಾಲ್ ಹುಸೇನ್ ಮಾತಾಡಿದ್ದಾರೆ. ಈ ಬಜೆಟ್ ಸರಿ ಇಲ್ಲ ಅಂತ ಹೇಳಿರೋ ಇಕ್ಬಾಲ್ ಹುಸೇನ್‌ಗೆ ಧನ್ಯವಾದಗಳನ್ನ ಹೇಳ್ತೀನಿ ಎಂದರು. ಇದನ್ನೂ ಓದಿ: ಯುದ್ಧದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡಬಾರದು: ಆರ್.ಅಶೋಕ್

