ಬೆಂಗಳೂರು: ಬಳ್ಳಾರಿಯಲ್ಲಿ ಏರ್ಪೋರ್ಟ್ (Ballari Airport) ನಿರ್ಮಾಣದ ಬಗ್ಗೆ ಸಿಎಂ ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ನಿರ್ಧಾರ ಮಾಡುವುದಾಗಿ ಸಚಿವ ಎಂ.ಬಿ.ಪಾಟೀಲ್ (M.B.Patil) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸತೀಶ್ ಪ್ರಶ್ನೆ ಕೇಳಿದ್ರು. ಬಳ್ಳಾರಿ ಏರ್ಪೋರ್ಟ್ ಕಾಮಗಾರಿ ಪೂರ್ಣ ಆಗಿಲ್ಲ. ಏರ್ಪೋರ್ಟ್‌ಗೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದ್ರು ಕೆಲಸ ಶುರುವಾಗಿಲ್ಲ. ಅಲ್ಲಿನ ಅಧಿಕಾರಿಗಳಿಗೆ ಪ್ರಶಸ್ತಿ ಕೊಡಬೇಕು. ಬಳ್ಳಾರಿಯಲ್ಲಿ ಏರ್ಪೋರ್ಟ್ ಬರುತ್ತಾ? ಬರೊಲ್ಲವಾ? ಸರ್ಕಾರ ಹೇಳಬೇಕು. ಏರ್ಪೋರ್ಟ್ ಮಾಡಲು ಆಗಿಲ್ಲ ಅಂದರೆ ರೈತರಿಗೆ ಜಮೀನು ವಾಪಸ್ ಕೊಡಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ: ಬೈರತಿ ಸುರೇಶ್
ಇದಕ್ಕೆ ಸಚಿವ ಎಂಬಿ ಪಾಟೀಲ್ ಉತ್ತರ ನೀಡಿ, ಬಳ್ಳಾರಿಯಲ್ಲಿ 8-9 ವರ್ಷಗಳಿಂದ ಏರ್ಪೋರ್ಟ್ ಆಗಿಲ್ಲ. ಈಗಾಗಲೇ ಭೂಮಿ ಸ್ವಾಧೀನ ಆಗಿದೆ. ಈಗಾಗಲೇ DPRಗೆ ಕ್ರಮ ಮಾಡಲಾಗಿದೆ. ಉಡಾನ್ ಯೋಜನೆ ಇತ್ತು. ಈಗ ಅದು ಇಲ್ಲ ಸಮಸ್ಯೆ ಆಗಿದೆ. ಸಿಎಂ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ದೇಶದಲ್ಲಿ ಏರ್ಪೋರ್ಟ್‌ಗಳ ಸಮಸ್ಯೆ ಗಂಭೀರವಾಗಿದೆ. ಉಡಾನ್ ಇದ್ದಾಗ ನಡೆಯುತ್ತವೆ. ಆದು ಮುಗಿದ ಮೇಲೆ ಹೋಗುತ್ತದೆ. ಬಳ್ಳಾರಿಯಲ್ಲಿ ಏರ್ಪೋರ್ಟ್ ಮಾಡಲ್ಲ ಅಂತ ಹೇಳಲ್ಲ. ಸಿಎಂ ನೇತೃತ್ವದ ಮೀಟಿಂಗ್‌ನಲ್ಲಿ ನಿರ್ಧಾರ ಮಾಡ್ತೀವಿ. ರೈತರಿಂದ ಜಮೀನು ಪಡೆದು ಪರಿಹಾರ ಕೊಟ್ಟರೆ ಮತ್ತೆ ವಾಪಸ್ ಕೊಡೊದಿಲ್ಲ ಅಂತ ಸ್ಪಷ್ಟಪಡಿಸಿದರು.

