ಬೆಂಗಳೂರು: ದೆಹಲಿಗೆ (Delhi) ತೆರಳಿರುವ ಡಿಸಿಎಂ ಡಿಕೆಶಿ (D.K Shivakumar) ಪರವಾಗಿ ನಾವಿದ್ದೇವೆ. ಅವರು ನಾಳೆನೇ ಬರಲಿ ತೊಂದರೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಸಿಎಂ ಡಿಕೆಶಿ ದೆಹಲಿಯಲ್ಲೇ ಉಳಿದಿರುವ ವಿಚಾರವಾಗಿ ಪ್ರತಿಕ್ರಿಸಿದರು. ಡಿಸಿಎಂ ಪರವಾಗಿ ನಾವಿದ್ದೇವೆ. ನಾವು ಇಲ್ಲಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಜಿಬಿಎ 5 ನಗರ ಪಾಲಿಕೆಯ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ
ಆರ್‍ಎಸ್‍ಎಸ್ ಬಗ್ಗೆ ಮಾಜಿ ಸಂಸದ ಅನಂತ ಕುಮಾರ್ ಹೆಗ್ಡೆ ಹೇಳಿಕೆ ವಿಚಾರವಾಗಿ, ಆರ್‍ಎಸ್‍ಎಸ್ ಬ್ಯಾನ್ ಮಾಡ್ತೀವಿ ಅಂತ ಯಾರೂ ಹೇಳಿಲ್ಲ. ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಚಟುವಟಿಕೆಗಳ ನಿಷೇಧ ಬೇರೆ, ಇದು ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ (ಮಾ.8) ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಡಿ.ಕೆ ಶಿವಕುಮಾರ್ ತೆರಳಿದ್ದರು. ಇಂದು (ಮಾ.9) ಬೆಳಗ್ಗೆ ದೆಹಲಿಯಿಂದ ಅವರು ವಾಪಸ್ ಆಗಬೇಕಿತ್ತು. ಇಂದು ಕೂಡಾ ದೆಹಲಿಯಲ್ಲಿರಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದಲಿತರಿಗೆ ಅನ್ಯಾಯವೆಸಗಿರುವ ಸಚಿವ ಮಹದೇವಪ್ಪ ಸಿಕ್ಕರೆ ಕಪಾಳಮೋಕ್ಷ ಮಾಡುವಾಸೆ: ಶಿವನಗೌಡ

