ಸಾಧನೆ ಎನ್ನುವುದು ಯಾರ ಆಸ್ತಿಯೂ ಅಲ್ಲ. ಸಾಧನೆ ಮಾಡುವ ಮನಸ್ಸು ಹಾಗೂ ಅದಕ್ಕೆ ಬೇಕಾದ ಪರಿಶ್ರಮವಿದ್ದರೆ ಯಾವುದೇ ವೈಕಲ್ಯ ಕೂಡ ಅಡ್ಡಿ ಆಗುವುದಿಲ್ಲ. ಮಹಿಳಾ ಕ್ರಿಕೆಟ್ ಪಟು ದೀಪಿಕಾ ಈ ಮಾತಿಗೆ ಸ್ಪಷ್ಟ ಉದಾಹರಣೆ.
ಅಂಧತ್ವ ಶಾಪವಲ್ಲ, ಅವಕಾಶ ಸಿಕ್ಕರೆ ಜಗವನ್ನೇ ಗೆಲ್ಲುವೆವು ಎನ್ನುವುದು ದೀಪಿಕಾ ಅವರ ಧ್ಯೇಯವಾಕ್ಯ. ಭಾರತೀಯ ಮಹಿಳಾ ಅಂಧ ಕ್ರಿಕೆಚ್ ತಂಡದ ಹೆಮ್ಮೆಯ ನಾಯಕಿ. ಕಳೆದ ವರ್ಷ ಕೊಲಂಬೋದಲ್ಲಿ ನಡೆದ ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದೀಪಿಕಾ (Deepika) ನಾಯಕತ್ವದ ಭಾರತೀಯ ತಂಡ ಅಜೇಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಅಪ್ರತಿಮ ಪ್ರದರ್ಶನದ ಹಿಂದೆ ದೀಪಿಕಾ ಅವರ ಸಮರ್ಥ ಸಾರಥ್ಯವಿತ್ತು. ಇದನ್ನೂ ಓದಿ: ಮಹಿಳಾ ದಿನಾಚರಣೆ: ಪಬ್ಲಿಕ್ ಟಿವಿಯಿಂದ ಸಾಧಕಿಯರಿಗೆ ‘ನಾರಿ ನಾರಾಯಣಿ’ ಪ್ರಶಸ್ತಿ ಪ್ರದಾನ

ತುಮಕೂರು ಜಿಲ್ಲೆಯ ಕೃಷಿ ಕುಟುಂಬದಿಂದ ಬಂದ ದೀಪಿಕಾ ಕಠಿಣ ಪರಿಶ್ರಮದಿಂದ ಇಂದು ಸಾಧಾನೆ ಉತ್ತುಂಗಕ್ಕೇರಿದ್ದಾರೆ. ದೀಪಿಕಾ ಐದು ತಿಂಗಳ ಮಗುವಾಗಿದ್ದಾಗ, ಸಣ್ಣ ಅಪಘಾತದಿಂದ ಕಣ್ಣುಗಳಿಗೆ ಹಾನಿಯಾಗಿ ದೃಷ್ಟಿ ಕಳೆದುಕೊಂಡರು. ಆದರೂ ಛಲ ಬಿಡದ ದೀಪಿಕಾ ತನ್ನಲ್ಲಿದ್ದ ಸಮಸ್ಯೆಯನ್ನ ಮೆಟ್ಟಿ ನಿಂತು ಇಂದು ಭಾರತ ಮಹಿಳಾ ಕ್ರಿಕೆಟ್ ಅಂಧರ ತಂಡದ ಆಟಗಾರ್ತಿಯಷ್ಟೇ ಅಲ್ಲದೇ ತಂಡದ ನಾಯಕಿಯಾಗಿ ಕೂಡ ಜವಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಯಾಳಿಕೆಗಳಿಗೆ ಸಾಧನೆಯ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ. ದೇಶದ ಹೆಮ್ಮೆಯ ಪುತ್ರಿ, ಅಸಾಧಾರಣ ಪ್ರತಿಭೆಗೆ ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ ನಾರಿ ನಾರಾಯಣಿ ಪ್ರಶಸ್ತಿ ನೀಡಿ ಗೌರವಿಸಲು ಪಬ್ಲಿಕ್ ಟಿವಿ ಹರ್ಷಿಸುತ್ತದೆ.
ಪಬ್ಲಿಕ್ ಟಿವಿ (Public TV) ಸಹಯೋಗದಲ್ಲಿ ಎಕ್ಸೆಲ್ ಅಕಾಡೆಮಿಕ್ಸ್ ಪ್ರಸ್ತುತ ಪಡಿಸುವ ‘ನಾರಿ ನಾರಾಯಣಿ-2026’ (Nari Narayani 2026 Award) ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಿತು. ಸಾಧಕಿಯರಿಗೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ, ‘ನಾರಿ ನಾರಾಯಣಿ’ ರೂಪುಗೊಂಡ ಉದ್ದೇಶವೇ ನಮ್ಮ ಮಹಿಳೆಯರ ಯಶಸ್ಸನ್ನು ಗುರುತಿಸಬೇಕೆಂದು. ಐದು ವರ್ಷದಿಂದ ಬಹಳ ಅದ್ಭುತವಾಗಿ ನಡೆದುಕೊಂಡು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: T20 World Cup final: ಭಾರತ vs ನ್ಯೂಜಿಲೆಂಡ್ ಫೈನಲ್ ಫೈಟ್ – ಟಿ20 ವಿಶ್ವಕಪ್ ಕಿರೀಟ ಯಾರ ಮುಡಿಗೆ?

