ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ (UAE) ವಿಶ್ವದ ಎರಡನೇ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣದ (Dubai Airport) ಮೇಲೆಯೇ ಇರಾನ್ ಡ್ರೋನ್ ದಾಳಿ ನಡೆಸಿದೆ.
ಡ್ರೋನ್ ದಾಳಿಯ ಬೆನ್ನಲ್ಲೇ ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಡ್ರೋನ್ ಬಿದ್ದ ಜಾಗದಲ್ಲಿ ದಟ್ಟವಾದ ಹೊಗೆ ಕಾಣಿಸಿದ್ದು ಸಾವು, ನೋವಿನ ಬಗ್ಗೆ ಯಾವುದೇ ವರದಿ ಲಭ್ಯವಾಗಿಲ್ಲ.
ದುಬೈಗೆ ಆಗಮಿಸುವ ಮತ್ತು ನಿರ್ಗಮಿಸುವ ಎಲ್ಲಾ ವಿಮಾನಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಎಮಿರೇಟ್ಸ್ ಸರ್ಕಾರ ಹೇಳಿದೆ.
BREAKING: Dubai International Airport hit by Iranian drone attack pic.twitter.com/TmtrLpiyaB
— Sulaiman Ahmed (@ShaykhSulaiman) March 7, 2026
ಫೆಬ್ರವರಿ 28 ರಿಂದ ಮಾರ್ಚ್ 31 ರವರೆಗೆ ಪ್ರಯಾಣಿಸಲು ಬುಕ್ ಮಾಡಿದ ಗ್ರಾಹಕರಿಗೆ ಮರು ಬುಕ್ ಮಾಡಲು ಅಥವಾ ಮರುಪಾವತಿಗಾಗಿ ವಿನಂತಿಸಲು ಆಯ್ಕೆಗಳನ್ನು ನೀಡಲಾಗಿದೆ.
ದುಬೈ ಮೇಲೆ ಯಾಕೆ ದಾಳಿ?
ಇರಾನಿಗೆ ಅಮೆರಿಕದ ಮೇಲೆ ನೇರವಾಗಿ ದಾಳಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳಿರುವ ದೇಶಗಳ ಮೇಲೆ ಇರಾನ್ ದಾಳಿ ನಡೆಸುತ್ತಿದೆ. ನಿಮ್ಮ ನೆಲೆಗಳನ್ನು ಬಳಸಿ ನಮ್ಮ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ. ಆ ನೆಲೆಗಳನ್ನು ಬಳಸಲು ಅವಕಾಶ ನೀಡಿದರೆ ನಿಮ್ಮ ಮೇಲೆ ದಾಳಿ ನಡೆಸುತ್ತೇವೆ ಎಂಬ ಸಂದೇಶಕ್ಕಾಗಿ ಈಗ ಡ್ರೋನ್, ಕ್ಷಿಪಣಿ ದಾಳಿ ನಡೆಸುತ್ತಿದೆ.

