ಕಾರವಾರ: ವಿದೇಶಿ ಪ್ರವಾಸಿಗರು ಹೋಂ ಸ್ಟೇನಲ್ಲಿ (Homestay) ತಂಗಿರುವ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಅಪರಾಧದ ಮೇಲೆ ಗೋಕರ್ಣದಲ್ಲಿ ಪೋಲಿಸರು ಹೋಂ ಸ್ಟೇ ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣದ (Gokarna) ಭೀಮಕೊಂಡದ ವೈಲ್ಡ್ ವಿಲೇಜ್ ಹೋಮ್ ಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: Video Viral | ನಂಜನಗೂಡು ದೇವಸ್ಥಾನದ ದಾಸೋಹ ಭವನದ ಬಳಿ ಮಾಂಸಹಾರ ಸೇವನೆ
ಈ ಆಪಾದಿತರ ವೈಲ್ಡ್ ವಿಲೇಜ್ ಹೋಮ್ ಸ್ಟೇನಲ್ಲಿ ಅರ್ಜೆಂಟೈನಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಈತನ ತಾಯಿ ಕಳೆದ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.
ಈ ಇಬ್ಬರು ಹೋಂ ಸ್ಟೇ ಮಾಲೀಕರು, ವಿದೇಶಿ ಪ್ರಜೆಗಳು ತಂಗಿದ ಬಗ್ಗೆ, ‘ಸಿ’ ಫಾರ್ಮಾ ಭರ್ತಿ ಮಾಡಿದ ಮಾಹಿತಿಯನ್ನು ಪೋಲಿಸ್ ಠಾಣೆಗೆ ಸಲ್ಲಿಸಬೇಕಾಗಿತ್ತು. ಆದರೆ, ನಿಯಮ ಮೀರಿ ವಿದೇಶಿ ಪ್ರಜೆಗಳಿಗೆ ತಂಗಲು ಅವಕಾಶ ನೀಡಿದ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ Immigration and Foreigners Act 2025 ಅಡಿ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣ ಠಾಣೆಯ PSI ಬಿ.ಎಮ್.ಅನಿಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಿ ರಿಪೋರ್ಟ್ ಸಲ್ಲಿಕೆಗೆ 70,000 ರೂಪಾಯಿ ಲಂಚ – ಲೋಕಾಯುಕ್ತ ವಶಕ್ಕೆ ಪಿಎಸ್‌ಐ & ಎಎಸ್‌ಐ

