– ಲಾಸ್ ಏಂಜಲೀಸ್‌ನಲ್ಲಿ 3.50 ಲಕ್ಷ ಜನರಿಂದ ಸಂಭ್ರಮ
ಶ್ರೀನಗರ/ಇಸ್ಲಾಮಾಬಾದ್: ಇರಾನ್ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ (Ayatollah Khamenei) ಸಾವನ್ನಪ್ಪಿದ್ದಾರೆ. ಇಸ್ರೇಲ್ ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಹಸುನೀಗಿದ್ದಾರೆ. ಖಮೇನಿ ಸಾವಿನ ಸುದ್ದಿ ಹೊರ ಬರುತ್ತಿದ್ದಂತೆ ಇರಾನ್ (Iran) ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪರ ವಿರೋಧ ಚರ್ಚೆಗಳು, ಪ್ರತಿಭಟನೆಗಳ ಶುರುವಾಗಿದೆ. ಒಂದೆಜ್ಜೆ ಮುಂದೋಗಿರುವ ಇರಾನ್ ಮಹಿಳೆಯರು ಭರ್ಜರಿ ಸೆಲಬ್ರೇಷನ್ ಮಾಡ್ತಿದ್ದಾರೆ.
ಸಂಭ್ರಮ ಏಕೆ?
ಖಮೇನಿ ಹತ್ಯೆ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇರಾನ್ ಮಹಿಳೆಯರು (Iranian Womens) ಖಮೇನಿ ಸಾವಿಗೆ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರ ಹಕ್ಕುಗಳಿಗೆ ನಿರ್ಬಂಧ ಹೇರಿದ್ದ ಹಿನ್ನೆಲೆ ಅವರ ಸಾವಿನ ಬೆನ್ನಲೆ ಟೆಹ್ರಾನ್, ಶಿರಾಜ್, ನೂರಾಬಾದ್, ಕಯೆಮ್ ಶಹರ್, ಇಸ್ಫಹಾನ್, ಮಮಸಾನಿ, ಲೆಪೊಯ್, ಗಲೆಹ್ದಾರ್, ಅಬ್ದಾನನ್ ಮುಂತಾದ ನಗರಗಳಲ್ಲಿ ಸಾಮಾನ್ಯ ಜನರು ಬೀದಿಗಿಳಿದು ನೃತ್ಯ ಮಾಡುತ್ತಾ, ಪಟಾಕಿ ಸಿಡಿಸುತ್ತಾ, ಕಾರ್ ಹಾರ್ನ್‌ಗಳನ್ನು ಮೊಳಗಿಸುತ್ತಾ ಸಂಭ್ರಮಿಸಿದ್ದಾರೆ. ಕೆಲವರು “ಸ್ವಾತಂತ್ರ್ಯ, ಸ್ವಾತಂತ್ರ್ಯ” ಎಂದು ಘೋಷಣೆ ಕೂಗಿದ್ದಾರೆ.

ಇರಾನ್ ಮಾತ್ರವಲ್ಲದೇ ಇರಾನ್ ಬಿಟ್ಟು ಹೊರ ದೇಶಗಳಲ್ಲಿರುವ ಇರಾನಿಗರು ಸಂಭ್ರಮಿಸಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್, ವೆಸ್ಟ್‌ವುಡ್, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್, ಕೆನಡಾದ ಟೊರೊಂಟೊ, ಜರ್ಮನಿಯ ಮ್ಯೂನಿಚ್, ಲಂಡನ್‌ನಲ್ಲಿ ಸಾವಿರಾರು ಇರಾನೀಯರು ಬೀದಿಗಿಳಿದು ನೃತ್ಯ ಮಾಡುತ್ತಾ, ಇರಾನ್, ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಬೀಸುತ್ತಾ ಸಂಭ್ರಮಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಸುಮಾರು 350,000 ಜನರು ಭಾಗವಹಿಸಿದ್ದಾರೆ.
ಖಮೇನಿ ಹತ್ಯೆಗೆ ಆಕ್ರೋಶ ಏಕೆ?
ಖಮೇನಿ ಸಾವಿಗೆ ಇರಾನ್‌ನ ಕೆಲವು ಪ್ರದೇಶಗಳಲ್ಲಿ ಶೋಕಾಚರಣೆಗಳು ನಡೆದಿವೆ. ಟೆಹ್ರಾನ್‌ನ ಎಂಗೆಲಾಬ್ ಸ್ಕ್ವೇರ್‌ನಲ್ಲಿ ಸಾವಿರಾರು ಜನರು ಖಮೇನಿ ಚಿತ್ರಗಳನ್ನು ಹಿಡಿದು ಶೋಕ ವ್ಯಕ್ತಪಡಿಸಿದ್ದಾರೆ. ಇರಾಕ್‌ನ ಬಾಗ್ದಾದ್‌ನಲ್ಲಿ ಸಾವಿರಾರು ಜನರು ಅಮೆರಿಕ ರಾಯಭಾರ ಕಚೇರಿ ಇರುವ ಗ್ರೀನ್ ಝೋನ್‌ಗೆ ನುಗ್ಗಲು ಪ್ರಯತ್ನಿಸಿ ಪ್ರತಿಭಟನೆ ನಡೆಸಿದ್ದಾರೆ. ಕಲ್ಲುಗಳನ್ನು ಎಸೆದು ಭದ್ರತಾ ಪಡೆಗಳೊಂದಿಗೆ ಘರ್ಷಣೆಯಾಗಿದೆ.

ಇನ್ನೂ ಪಾಕಿಸ್ತಾನದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿಯೂ ಕಲ್ಲು ತೂರಾಟ ನಡೆದಿದೆ. ಇದಲ್ಲದೇ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಮತ್ತು ಲಾಸ್ ಏಂಜಲೀಸ್‌ನಲ್ಲಿ ಕೆಲವು ಗುಂಪುಗಳು ಅಮೆರಿಕ-ಇಸ್ರೇಲ್ ದಾಳಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಲಂಡನ್‌ನಲ್ಲಿ ಕೆಲವು ಪ್ರತಿಭಟನೆಗಳು ದಾಖಲಾಗಿವೆ.
ಕಾಶ್ಮೀರದಲ್ಲಿ ಖಮೇನಿ ಹತ್ಯೆಗೆ ಪ್ರತಿಭಟನೆ
ಶ್ರೀನಗರ ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ಖಮೇನಿಗೆ ಹತ್ಯೆ ಖಂಡಿಸಜ ಪ್ರತಿಭಟನೆಗಳು ನಡೆದಿವೆ. ಜನರು ಖಮೇನಿ ಮರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ್ದಾರೆ.

