ಬಾಲಿವುಡ್‌ನ ಸ್ಟೈಲಿಶ್ ನಟಿ ಸೋನಂ ಕಪೂರ್(Sonam Kapoor) ಮತ್ತು ಉದ್ಯಮಿ ಆನಂದ್ ಅಹುಜಾ(Anand Ahuja) ದಂಪತಿ ತಮ್ಮ ಎರಡನೇ ಗಂಡು ಮಗುವಿನ ಹೆಸರನ್ನು ಅಧಿಕೃತವಾಗಿ ಹಂಚಿಕೊAಡಿದ್ದಾರೆ.
ಕಳೆದ ಮಾರ್ಚ್ 29 ರಂದು ಎರಡನೇ ಬಾರಿಗೆ ಪೋಷಕರಾದ ಈ ಜೋಡಿ, ಈಗ ತಮ್ಮ ಪುಟ್ಟ ಕಂದನಿಗೆ ‘ರುದ್ರಲೋಖ್ ಕಪೂರ್ ಅಹುಜಾ’ ಎಂದು ನಾಮಕರಣ ಮಾಡಿದ್ದಾರೆ. ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಇರುವ ಸುಂದರವಾದ ಫೋಟೋಗಳನ್ನು ಹಂಚಿಕೊAಡಿರುವ ಸೋನಂ, ಮಗನ ಹೆಸರಿನಲ್ಲಿರುವ ದೈವಿಕ ಅರ್ಥವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
View this post on Instagram
ಸೋನಂ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ವಿಷ್ಣುವಿನ ಕೃಪೆಯಿಂದ ಪವಿತ್ರ ಏಕಾದಶಿಯ ದಿನದಂದು ಜನಿಸಿದ ನಮ್ಮ ಎರಡನೇ ಮಗ ನಮಗೆ ಸಿಕ್ಕ ಆಶೀರ್ವಾದ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ತಮ್ಮ ಮೊದಲ ಮಗ ವಾಯು ಹೆಸರಿಗೂ ಮತ್ತು ಈಗಿನ ರುದ್ರಲೋಖ್(Rudralokh) ಹೆಸರಿಗೂ ಇರುವ ನಂಟನ್ನು ವಿವರಿಸಿರುವ ಅವರು, ವೇದಗಳ ಪ್ರಕಾರ ರುದ್ರ ಎಂದರೆ ಅತ್ಯಂತ ಬಲಶಾಲಿ ಮತ್ತು ದುಃಖವನ್ನು ಮೂಲದಿಂದಲೇ ನಿರ್ಮೂಲನೆ ಮಾಡುವವನು ಎಂದರ್ಥ. ವಾಯು ಜೀವವನ್ನು ಪೋಷಿಸಿದರೆ, ರುದ್ರ ಶಕ್ತಿ ಮತ್ತು ರೂಪಾಂತರದ ಸಂಕೇತ ಎಂದು ಅವರು ತಿಳಿಸಿದ್ದಾರೆ.
2018 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿಗೆ 2022 ರಲ್ಲಿ ಮೊದಲ ಮಗ ವಾಯು ಜನಿಸಿದ್ದು, ಇದೀಗ ರುದ್ರಲೋಖ್‌ನ ಆಗಮನದಿಂದ ಕಪೂರ್ ಮತ್ತು ಅಹುಜಾ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಸೋನಂ ಹಂಚಿಕೊಂಡಿರುವ ಈ ಕ್ಯೂಟ್ ಫೋಟೋಗಳಿಗೆ ಬಾಲಿವುಡ್ ತಾರೆಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

