ಚಿಕ್ಕೋಡಿ: ದ್ವಿತೀಯ ಪಿಯುಸಿ ಪರೀಕ್ಷೆ-1 (2nd PUC Exam) ಇಂದಿನಿಂದ ಶುರುವಾಗುತ್ತಿದ್ದು, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಎಲ್ಲರೂ ಬೆಳಗ್ಗೆಯೇ ಸಂತಸದಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಆದ್ರೆ ಚಿಕ್ಕೋಡಿಯ ಬಂಬಲವಾಡ ಗ್ರಾಮದಲ್ಲಿ ನಡೆದಿದ್ದೇ ಬೇರೆ.
ಸಕಲ ತಯಾರಿ ಮಾಡಿಕೊಂಡು, ಭವಿಷ್ಯದ ನೂರಾರು ಕನಸು ಕಟ್ಟಿಕೊಂಡು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಬಂಬಲವಾಡ ಗ್ರಾಮದಲ್ಲಿ ಭೂಮಿಕಾ ಮಾಳಂಗಿ (17) ಮೃತ ದುರ್ದೈವಿ. ಇದನ್ನೂ ಓದಿ: ಮದ್ವೆ ಹೆಸರಲ್ಲಿ ಪ್ರಿಯಕರನಿಂದ್ಲೇ ರೇಪ್ – ಇತ್ತ ಸಹಾಯಕ್ಕಾಗಿ ಬಂದವನು ಅತ್ಯಾಚಾರಗೈದು, ಕಟ್ಟಡದಿಂದ ಎಸೆದು ಕೊಲೆ

ಪರೀಕ್ಷೆಗೆ (Exam) ಸಕಲ ತಯಾರಿ ಮಾಡಿಕೊಂಡಿದ್ದ ಭೂಮಿಕಾ ಇಂದು ಉತ್ಸಾಹದಿಂದಲೇ ಪರೀಕ್ಷೆಗೆ ಹೊರಡಲು ತಯಾರಾಗಿದ್ದರು. ಆದ್ರೆ ವಿಧಿಯ ಆಟ ಬೇರೆಯೇ ಆಗಿತ್ತು. ಸ್ನಾನ ಮುಗಿಸಿ ಮನೆಯಿಂದ ಹೊರಬರುತ್ತಿದ್ದಾಗಲೇ ಹಠಾತ್ತನೇ ಹೃದಯಾಘಾತ ಸಂಭವಿಸಿದೆ. ಕೂಡಲೇ ಪೋಷಕರು ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು, ಆದಾಗ್ಯೂ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ.
ದುರ್ಘಟನೆಯಿಂದ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಹೊರೆ ಆಗುತ್ತೆ ಅಂದ್ರೆ ಗ್ಯಾರಂಟಿ ಕೊಡೋ ಮುಂಚೆನೇ ಚಿಂತನೆ ಮಾಡಬೇಕಾಗಿತ್ತು: ಡಿಕೆ ಸುರೇಶ್

