ರಾಯಚೂರು: ಬೈಕ್‌ಗೆ ಟ್ರಕ್ ಡಿಕ್ಕಿ (Truck hits Bike) ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಿನ (Raichur) ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೊಹಮದ್ ಅಲಿ ಪಾಶಾ (24), ನೂರ ಮೊಹಮದ್ (19), ಫಯಾಜ್( 26) ಮೃತ ದುರ್ದೈವಿಗಳು. ಮೃತರೆಲ್ಲಾ ನಗರದ ಸುಖಾಣಿ ಕಾಲೋನಿ ನಿವಾಸಿಗಳು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಚಾಕುವಿನಿಂದ ಇರಿದು ವಿವಾಹಿತ ಪ್ರಿಯತಮೆ ಕೊಂದ ಪ್ರಿಯಕರ – ಪುಟ್ಟ ಮಕ್ಕಳಿಬ್ಬರು ಅನಾಥ!

ಗಂಜ್ ವೃತ್ತದಿಂದ ಬರುತ್ತಿದ್ದ ಟ್ರಕ್ ಲಿಂಗಸುಗೂರು ರಸ್ತೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸವಾರರು ಸಾವನ್ನಪ್ಪಿದ್ದಾರೆ.
ಪ್ರಕರಣ ಸಂಬಂಧ ರಾಯಚೂರು ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ (Raichur City Traffic Police) ಎಫ್‌ಐಆರ್ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಇದನ್ನೂ ಓದಿ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದ್ವಿಗುಣ: ಶರಣಪ್ರಕಾಶ ಪಾಟೀಲ್

