ಶ್ರೀ ವಿಶ್ವಾವಸುನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ,
ದಶಮಿ, ಗುರುವಾರ,
ಮೃಗಶಿರ ನಕ್ಷತ್ರ (ಹಗಲು12:11) ನಂತರ ಆರಿದ್ರ ನಕ್ಷತ್ರ.
ರಾಹುಕಾಲ: 02:05 ರಿಂದ 03:34
ಗುಳಿಕಕಾಲ: 09:38 ರಿಂದ 11:07
ಯಮಗಂಡಕಾಲ: 06:40 ರಿಂದ 08:09
ಮೇಷ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ. ಆರ್ಥಿಕ ಪ್ರಗತಿ. ಯಂತ್ರೋಪಕರಣಗಳಿಂದ ಮತ್ತು ವಾಹನದಿಂದ ಪೆಟ್ಟು. ಕೋರ್ಟ್ ಕೇಸುಗಳ ಚಿಂತೆ. ಮಾತಿನಿಂದ ಸಮಸ್ಯೆ .ಸ್ಥಿರಾಸ್ತಿ ಮತ್ತು ವಾಹನ ಖರೀದಿ ಆಲೋಚನೆ. ಪ್ರಯಾಣದಲ್ಲಿ ವಿಘ್ನ. ಆತುರದ ಪ್ರವೃತ್ತಿ.
ವೃಷಭ: ಪ್ರಯಾಣದಲ್ಲಿ ಅನುಕೂಲ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳು. ಬಂಧು ಬಾಂಧವರ ಸಹಕಾರದಲ್ಲಿ ಹಿನ್ನಡೆ. ಆದಾಯಕ್ಕಿಂತ ಅಧಿಕ ಖರ್ಚು. ಸಂಗಾತಿಯೊಂದಿಗೆ ಮನಸ್ತಾಪ. ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಕೆಲಸ ಕಾರ್ಯಗಳಲ್ಲಿ ಕಿರಿಕಿರಿ.
ಮಿಥುನ: ಆರೋಗ್ಯಕ್ಕೆ ಸಂಬಂಧಪಟ್ಟಂತೆ ಎಚ್ಚರ, ನಿದ್ರಾಭಂಗ, ಉದ್ಯೋಗದಲ್ಲಿ ಅನಾನುಕೂಲ. ನೆರೆಹೊರೆಯವರಿಂದ ಬಂಧುಗಳಿಂದ ಅಸಮಾಧಾನ. ಅಧಿಕ ಶತ್ರು ಕಾಟ, ಅನಗತ್ಯ ಖರ್ಚು. ಸ್ನೇಹಿತರೊಂದಿಗೆ ವಿರೋಧ.
ಕಟಕ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಶತ್ರುಗಳಿಂದ ಅನುಕೂಲ. ಉದ್ಯೋಗ ಲಾಭ. ಆರ್ಥಿಕವಾಗಿ ಬೆಳವಣಿಗೆ. ಮಕ್ಕಳಿಂದ ಸಹಕಾರ .ವಿದ್ಯಾಭ್ಯಾಸದಲ್ಲಿ ಪ್ರಗತಿ. ಬಡ್ತಿ ಮತ್ತು ವರ್ಗಾವಣೆಗೆ ಅನುಕೂಲಕರ. ಮಾಟ ಮಂತ್ರ ತಂತ್ರದ ಆತಂಕ.
ಸಿಂಹ: ತಂದೆಯಿಂದ ಅನುಕೂಲ. ಉದ್ಯೋಗ ಸ್ಥಳದಲ್ಲಿ ಅನುಕೂಲ. ವಿದ್ಯಾಭ್ಯಾಸದಲ್ಲಿ ಬೆಳವಣಿಗೆ. ಸ್ಥಿರಾಸ್ತಿ ಮತ್ತು ವಾಹನ ಸಂಬಂಧಿಸಿದ ತೀರ್ಮಾನಕ್ಕೆ ಒಳ್ಳೆ ಸಮಯ. ಅಧಿಕ ಖರ್ಚು . ಯಂತ್ರೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತು ಖರೀದಿ.
ಕನ್ಯಾ: ಆಕಸ್ಮಿಕ ಲಾಭ ಮತ್ತು ಬೆಳವಣಿಗೆ. ಕುಟುಂಬ ಸಮಸ್ಯೆಯಿಂದ ಆತಂಕ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ಅನಾನುಕೂಲ.
ತುಲಾ: ದಾಂಪತ್ಯ ಕಲಹ. ಉದ್ಯೋಗ ಒತ್ತಡ ಮತ್ತು ಕಿರಿಕಿರಿ. ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ. ಪಾಲುದಾರರೊಂದಿಗೆ ಮನಸ್ತಾಪ. ಆಕಸ್ಮಿಕ ಧನಾಗಮನ. ಬಂಧುಗಳಿಂದ ನೆರೆಹೊರೆಯವರಿಂದ ಸಹಕಾರ. ಪ್ರಯಾಣದಲ್ಲಿ ಅನಾನುಕೂಲ. ಬೇಸರ ಮತ್ತು ಆಲಸ್ಯ.
ವೃಶ್ಚಿಕ: ಉತ್ತಮ ಅವಕಾಶ ಮತ್ತು ಬೆಳವಣಿಗೆ. ಭವಿಷ್ಯದ ಬಗ್ಗೆ ಮುಖ್ಯ ತೀರ್ಮಾನ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ. ಉದ್ಯೋಗ ಲಾಭ. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶ. ತಂದೆಯಿಂದ ಸಹಕಾರ. ಪ್ರಯಾಣದಲ್ಲಿ ಅನುಕೂಲ. ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಧನಸ್ಸು: ಶತ್ರು ದಮನ. ಮಾನಸಿಕ ಒತ್ತಡ ಮತ್ತು ಕಿರಿಕಿರಿ. ಸ್ವಯಂಕೃತ ಅಪರಾಧದಿಂದ ಅವಕಾಶ ವಂಚಿತ. ಆಕಸ್ಮಿಕ ಖರ್ಚು. ದೀರ್ಘಾವಧಿ ಸಾಲ ಬಾಧೆ. ಮಾನಸಿಕ ಅಸಮತೋಲನ.
ಮಕರ: ಪಾಲುದಾರಿಕೆಯಲ್ಲಿ ಲಾಭ . ಪ್ರೀತಿ ಪ್ರೇಮದಲ್ಲಿ ಯಶಸ್ಸು. ಅಧಿಕ ಖರ್ಚು ಉದ್ಯೋಗ . ಸ್ಥಳದಲ್ಲಿ ಕಿರಿಕಿರಿ .ಗೌರವಕ್ಕೆ ಧಕ್ಕೆ .ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಕುಂಭ: ಸ್ಥಿರಾಸ್ತಿಯಲ್ಲಿ ಸಮಸ್ಯೆ. ಸಾಲ ಮಾಡುವ ಪರಿಸ್ಥಿತಿ. ಮಾನಸಿಕ ವೇದನೆ. ಶತ್ರು ಕಾಟ .ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಸೇವಾ ವೃತ್ತಿ, ಉದ್ಯೋಗ ಲಾಭ
ಮೀನ: ಆರ್ಥಿಕ ಬೆಳವಣಿಗೆ. ಮಕ್ಕಳಿಂದ ಅನುಕೂಲ. ಪ್ರೀತಿ ಪ್ರೇಮದಲ್ಲಿ ಜಯ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಕೌಟುಂಬಿಕ ಸಹಕಾರ. ತಂದೆಯಿಂದ ಸಹಕಾರ .ಪ್ರಯಾಣದಿಂದ ಅನುಕೂಲ .ಕೋರ್ಟ್ ಕೇಸ್ ವಿಷಯದಲ್ಲಿ ಸಮಸ್ಯೆ .ದುಡುಕಿನ ಮಾತು.

