ಬೆಂಗಳೂರು: ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ 5 ಜನರಿಗಾದರೂ ಸಚಿವ ಸ್ಥಾನ ಕೊಡಬೇಕು. ಹೀಗಾಗಿ ನಾವೆಲ್ಲರು ಸೇರಿ ಹೈಕಮಾಂಡ್‌ಗೆ ಪತ್ರ ಬರೆದಿದ್ದೇವೆ ಎಂದು ಕಾಂಗ್ರೆಸ್ (Congress) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕ ಸಹಿ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೌದು ಆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ಬೆಳಗಾವಿ (Belagavi) ಅಧಿವೇಶನದಲ್ಲಿ ಸಹಿ ಸಂಗ್ರಹ ನಡೆಯುತ್ತೆ. ನನ್ನ ಸಹಮತವೂ ಇದಕ್ಕೆ ಇದೆ. 31 ಜನ ಆಕಾಂಕ್ಷಿಗಳು ಇದ್ದೇವೆ. ನನಗೆ ಕೊಡಿ ಅಂತ ಕೇಳಿಲ್ಲ. ಯಾರಿಗಾದರೂ ಕೊಡಿ ಅಂತ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಅಂಗಡಿ ಮಾಲೀಕನಿಗೆ ಚಾಕು ಇರಿತ – ಚಿತ್ರದುರ್ಗದಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ನಮ್ಮಲ್ಲಿ ಒಗ್ಗಟ್ಟು ಇದೆ. ನಮ್ಮಲ್ಲಿ 5 ಜನರಿಗೆ ಕೊಡಿ. ರವಿ ಗಣಿಗ, ಪೊನ್ನಣ್ಣ, ಶಿವಗಂಗಾ, ನಯನ ಮೋಟಮ್ಮ, ಮಂಥರ್ ಗೌಡಗಾದ್ರು ಅವರಿಗಾದ್ರು ಕೊಡಿ ಎಲ್ಲರು ಡಿಸರ್ವ್ ಇದ್ದಾರೆ. 31 ಜನರ ವಾದ ಇಷ್ಟೇ. 5 ಜನರಿಗೆ ಕೊಡಿ. ನನಗೂ ಆಸೆ ಇದೆ. ನನಗೆ ಕೊಡದೇ ಹೋದ್ರು 5 ಜನರಿಗೆ ಕೊಡಿ. ಯುವಕರಿಗೆ 5 ಸ್ಥಾನ ಕೊಡಬೇಕು. ನನಗೆ ಕೊಟ್ಟರು ಸಂತೋಷ. ಯಾರಿಗಾದ್ರು ಕೊಟ್ಟರು ಸಂತೋಷ. ಕೇಳೋದು ನಮ್ಮ ಹಕ್ಕು. ಹಣೆಯಲ್ಲಿ ಬರೆದಿದ್ದರೆ ಯಾರು ತಪ್ಪಿಸುತ್ತಾರೆ ಎಂದರು. ಇದನ್ನೂ ಓದಿ: UP Election 2027 | 50% ಸ್ಥಾನಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಬಿಎಸ್‌ಪಿ ಪ್ಲ್ಯಾನ್
ಜಾತಿ ಆಧಾರ, ಪ್ರಾದೇಶಿಕ ಆಧಾರದಲ್ಲಿ ಅರ್ಹರು ಇದ್ದಾರೆ.ಈಗ ಲೀಸ್ಟ್ ನಲ್ಲಿ ಇರೋರು ದೊಡ್ಡ ದೊಡ್ಡ ವಿಕೆಟ್ ಗಳನ್ನ ಉರುಳಿಸಿರೋದು.ಚಿಕ್ಕಬಳ್ಳಾಪುರ ಒಐಂ ಪ್ರದೀಪ್ ಈಶ್ವರ್ ಕೂಡಾ ದೊಡ್ಡ ವಿಕೆಟ್ ಅನ್ನೇ ಹೊಡೆದಿರೋದು.ನನಗೂ ಆಸೆ ಇದೆ. ಮಂತ್ರಿ ಆಗೋ ಆಸೆ ಇದೆ. ತಪ್ಪಲ್ಲ. ಕೊಡೋದು ಬಿಡೋದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ಬಾರಾಮತಿ ಉಪಚುನಾವಣೆಗೆ ಸುನೇತ್ರಾ ಪವಾರ್ ಅಭ್ಯರ್ಥಿಯಾಗಿ ಆಯ್ಕೆ
ಪ್ರಿಯಾಂಕ್ ಖರ್ಗೆ ತಂದೆ ನೆರಳಿಂದ ಹೊರಗೆ ಬಂದು ಗೆದ್ದಿರೋರು.ಅವರು ಡೈನಾಮಿಕ್ ಸಚಿವರು. ಅವರಿಗೆ ಅರ್ಹತೆ ಇದೆ. ಅದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಾರೆ. ನನಗೆ ಯಾವುದೇ ಹಿನ್ನಲೆ ಇಲ್ಲ. ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದರು. ನಮ್ಮಲ್ಲಿ 5 ಜನರಿಗೆ ಕೊಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗ್ತಿದೆ: ಡಿಕೆಶಿ

