ಕಾರವಾರ/ಶಿವಮೊಗ್ಗ: ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಜ್ಯೋತಿಷಿ ಕಮಲಾಕರ್ ಭಟ್ (Kamalakar Bhat) ವಿರುದ್ಧ ಪೋಕ್ಸೊ ಪ್ರಕರಣ (POCSO Case) ದಾಖಲಾಗಿದೆ.
ಈಗಾಗಲೇ ಸಿದ್ದಾಪುರದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಕಮಲಾಕರ್ ಭಟ್ ವಿರುದ್ಧ ಮಹೇಶ್ ನಾಯ್ಕ್ ಪುತ್ರಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಾಯ
ಮಹೇಶ್ ನಾಯ್ಕ್ ಪುತ್ರಿ ಸಿದ್ದಾಪುರ ಠಾಣೆಯಲ್ಲಿ ಕಮಲಾಕರ್ ಭಟ್ ವಿರುದ್ಧ ಲೈಂಗಿಕ ದೌರ್ಜನ್ಯ ಕುರಿತು ದೂರು ನೀಡಿದ್ದಳು. ಈ ದೂರನ್ನು ಶಿವಮೊಗ್ಗ ತುಂಗಾನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಶಿವಮೊಗ್ಗ ತುಂಗಾ ನಗರ ಠಾಣೆಯಲ್ಲಿ ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ವರ್ಕ್ ಫ್ರಮ್ ಹೋಂ ಹೆಸರಲ್ಲಿ ಸೈಬರ್ ಕಿರಾತಕರು ಆಕ್ಟೀವ್ – ಮಗನ ಮಾತು ಕೇಳಿ 40,000 ರೂ. ಕಳೆದುಕೊಂಡ ಮಹಿಳೆ
ದೂರು ನೀಡಿದ ಬಾಲಕಿ ಕಮಲಾಕರ್ ಭಟ್ ಶಿವಮೊಗ್ಗ ನಿವಾಸದಲ್ಲಿಯೇ ಇದ್ದು, ತಾಯಿ ಸುಚಿತ್ರಾ ಇಲ್ಲದ ಸಂದರ್ಭದಲ್ಲಿ ತನಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಮಾಡಿದ್ದಾಳೆ. ಇದನ್ನೂ ಓದಿ: India AI Summit: ಆಶಾ ಕಾರ್ಯಕರ್ತೆಯರು, ರೈತರಿಂದ ಹಿಡಿದು ಸರ್ಕಾರಿ ಶಾಲಾ ಮಕ್ಕಳವರೆಗೆ – ಭಾರತಕ್ಕೆ ಎಐನಿಂದ ಆಗೋ ಲಾಭಗಳೇನು?
ಸದ್ಯ ಕಮಲಾಕರ್ ಭಟ್‌ರನ್ನ ಕಾರವಾರದ ಜೈಲಿನಿಂದ ಸಿದ್ದಾಪುರ ಠಾಣೆ ಪೊಲೀಸರು ತನಿಖೆಗೆ ಕರೆತಂದಿದ್ದು, ಇದೀಗ ಪೋಕ್ಸೊ ಪ್ರಕರಣ ದಾಖಲಾದ ನಂತರ ಶಿವಮೊಗ್ಗಕ್ಕೆ ಕರೆದೊಯ್ಯುವ ಸಾಧ್ಯತೆಗಳಿವೆ. ಇದನ್ನೂ ಓದಿ: ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ

