Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವರ್ಕ್ ಫ್ರಮ್ ಹೋಂ ಹೆಸರಲ್ಲಿ ಸೈಬರ್ ಕಿರಾತಕರು ಆಕ್ಟೀವ್ – ಮಗನ ಮಾತು ಕೇಳಿ 40,000 ರೂ. ಕಳೆದುಕೊಂಡ ಮಹಿಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವರ್ಕ್ ಫ್ರಮ್ ಹೋಂ ಹೆಸರಲ್ಲಿ ಸೈಬರ್ ಕಿರಾತಕರು ಆಕ್ಟೀವ್ – ಮಗನ ಮಾತು ಕೇಳಿ 40,000 ರೂ. ಕಳೆದುಕೊಂಡ ಮಹಿಳೆ

Bengaluru City

ವರ್ಕ್ ಫ್ರಮ್ ಹೋಂ ಹೆಸರಲ್ಲಿ ಸೈಬರ್ ಕಿರಾತಕರು ಆಕ್ಟೀವ್ – ಮಗನ ಮಾತು ಕೇಳಿ 40,000 ರೂ. ಕಳೆದುಕೊಂಡ ಮಹಿಳೆ

Public TV
Last updated: February 22, 2026 7:30 am
Public TV
Share
3 Min Read
Cyber Crime
SHARE

– ಶಾಪಿಂಗ್ ಆಪ್ ಟಾಸ್ಕ್ ಹೆಸರಲ್ಲಿ ಉಂಡೆನಾಮ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಸೈಬರ್ ಕಿರಾತಕರ (Cyber Crime) ಮತ್ತೊಂದು ರೀತಿಯ ಸ್ಕ್ಯಾಮ್ ಅಲರ್ಟ್ ಆಗಿದೆ. ವರ್ಕ್ ಫ್ರಮ್ ಹೋಂ (Work From Home) ಹೆಸರಲ್ಲಿ ಅಮಾಯಕರಿಗೆ ಗಾಳ ಹಾಕುವ ಮೂಲಕ, ಹಣ ಲೂಟಿ ಮಾಡುತ್ತಿದ್ದು, ಈ ಮಾದರಿಯ ಪ್ರಕರಣ ಒಂದು ಬಯಲಾಗಿದೆ.

ಸೈಬರ್ ಕ್ರೈಂ ಹೆಸರಲ್ಲಿ ಕಿರಾತಕರು ಇತ್ತೀಚಿನ ದಿನಗಳಲ್ಲಿ ನಾನಾ ಮಾದರಿಯಲ್ಲಿ ಜನರಿಗೆ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಇತ್ತೀಚಿಗೆ ಕೆಲ ಶಾಪಿಂಗ್ ಆಪ್, ಮತ್ತು ವರ್ಕ್ ಫ್ರಮ್ ಹೋಂ ಹೆಸರಲ್ಲಿ ಗೂಗಲ್ ರಿವ್ಯೂ, ಪ್ರಾಡೆಕ್ಟ್ ರಿವ್ಯೂ ಅನ್ನೋ ಟಾಸ್ಕ್ ಕಂಪ್ಲೀಟ್ ಮಾಡೋ ಚಾಲೆಂಜ್ ನೀಡಿ, ಅಮಾಯಕರನ್ನ ತನ್ನ ಖೆಡ್ಡಾಗೆ ಬೀಳಿಸಿಕೊಳ್ಳೋ ಮೂಲಕ ಹಣ ದೋಚುತ್ತಿದ್ದಾರೆ. ಇದನ್ನೂ ಓದಿ: ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ

ಹೌದು, ಬೆಂಗಳೂರಿನ ಬೆನ್ಸನ್ ಟೌನ್‌ನಲ್ಲಿ 55 ವರ್ಷದ ಮಹಿಳೆಯೊಬ್ಬರು ಕಳೆದ ಮೂರು ದಿನದ ಹಿಂದೆ ಈ ಸ್ಕ್ಯಾಮ್‌ನಿಂದ ಹಣ ಕಳೆದುಕೊಂಡಿದ್ದಾರೆ. ಪಿಯುಸಿ ಓದುವ ಪುತ್ರನ ಮೊಬೈಲ್‌ಗೆ ವರ್ಕ್ ಫ್ರಮ್ ಹೋಂ ಹೆಸರಲ್ಲಿ ಒಂದು ಮೆಸೇಜ್ ಬಂದಿದೆ. ಮನೆಯಲ್ಲೇ ಕುಳಿತು ನೀವು ಶಾಪಿಂಗ್ ಆಪ್ ಮೂಲಕ ಹಣ ಗಳಿಸಬಹುದು, ನಾವು ಒಂದಷ್ಟು ಟಾಸ್ಕ್ ಗಳನ್ನ ಕೊಡುತ್ತೇವೆ, ಅದನ್ನ ನೀವು ಪೂರ್ಣ ಮಾಡಿದ್ರೆ ಸಾಕು ಎಂದಿದ್ದಾರೆ. ಜೊತೆಗೆ ಟಾಸ್ಕ್ ಪೂರ್ಣಗೊಳ್ಳಲು ಇಷ್ಟು ಹಣ ಪಾವತಿ ಮಾಡಿದ್ರೆ ನಾವು ಹೆಚ್ಚು ಹಣ ಕೊಡುತ್ತೇವೆ ಎಂದು ಸುಳ್ಳು ರಿವ್ಯೂಗಳನ್ನ ತೋರಿಸಿ ನಂಬಿಸಿದ್ದಾರೆ. ಇದನ್ನ ನೋಡಿದ ಮಹಿಳೆ ಪುತ್ರ ತನ್ನ ತಾಯಿಗೆ ಈ ಬಗ್ಗೆ ಹೇಳಿ ಹಣ ಹಾಕುವಂತೆ ಹೇಳಿದ್ದಾನೆ. ಮಗನ ಮಾತು ಕೇಳಿ ತಾಯಿ ಕೂಡ ಹಣ ಹಾಕಿದ್ದಾರೆ. ಇದನ್ನೂ ಓದಿ: ಮುಂದುವರಿದ ಟ್ರಂಪ್‌ ಹುಚ್ಚಾಟ – ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕ 15% ಗೆ ಹೆಚ್ಚಿಸಿದ ಟ್ರಂಪ್‌

ಆರಂಭದಲ್ಲಿ ಕಡಿಮೆ ಮೊತ್ತದಿಂದ ಆರಂಭವಾದ ಹಣ ಮುಂದುವರೆದು ಸಾವಿರಾರು ರೂಪಾಯಿ ಬೇಡಿಕೆಗೆ ತಲುಪಿದೆ. ಒಂದು ಹಂತಕ್ಕೆ ಹಣ ಹೆಚ್ಚಾದಾಗ ಸ್ವಲ್ಪ ಅನುಮಾನಗೊಂಡ ಮಹಿಳೆ, ಹಣ ವಾಪಸ್ ಹಾಕುವಂತೆ ಸ್ಕ್ಯಾಮರ್‌ಗಳಿಗೆ ತಿಳಿಸಿದ್ದಾರೆ. ಆದರೆ ಇದಕ್ಕೊಪ್ಪದ ಕಿರಾತಕರು ಟಾಸ್ಕ್ ಕಂಪ್ಲೀಟ್ ಆದ್ರೆ ಮಾತ್ರ ಹಣ ಕೊಡೋದು ಅಂತ ಹೇಳಿ ನಂಬಿಸಿ ಮತ್ತೆ ಹಣ ಹಾಕಿಸಿಕೊಂಡಿದ್ದಾರೆ. ಒಟ್ಟು 40 ಸಾವಿರ ಹಣ ಹಾಕಿದ ಬಳಿಕ ಕೊನೆಗೆ ಅನುಮಾನಗೊಂಡ ಮಹಿಳೆ ಹಣ ಹಾಕೋದು ನಿಲ್ಲಿಸಿದ್ದಾರೆ. ಅಷ್ಟರಲ್ಲೇ ಬಹುತೇಕ ತಮ್ಮ ಕೆಲಸ ಪೂರ್ಣಗೊಳಿಸಿದ್ದ ಸ್ಕ್ಯಾಮರ್‌ಗಳು ಪೂರ್ತಿ ಹಣ ಕದ್ದು ಟೋಪಿ ಹಾಕಿದ್ದಾರೆ. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ಯುವಕನಿಂದ ಮೆಸೇಜ್‌ – ಮನನೊಂದು ನೇಣಿಗೆ ಶರಣಾದ ಪತಿ?

ಇನ್ನೂ ಹಣ ಕಳೆದುಕೊಂಡ ಮಹಿಳೆ ಠಾಣೆಗೆ ದೂರು ನೀಡಿದ್ರು, ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಪೂರ್ತಿ ಹಣವನ್ನ ಆಗಲೇ ಕಿರಾತಕರು ದೋಚಿದ್ದರು. ಕೊನೆಗೆ ಪೊಲೀಸರು ದೂರು ದಾಖಲಿಸಿ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ. ಇನ್ನೂ ಈ ಬಗ್ಗೆ ಸೈಬರ್ ತಜ್ಞರು ಮಾತನಾಡಿ, ನಗರದಲ್ಲಿ ಇತ್ತೀಚಿಗೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಯಾವುದೋ ಆಪ್ ಹೆಸರಲ್ಲಿ ಈ ರೀತಿ ಪ್ರತ್ಯೇಕ ಸಂದೇಶಗಳು ಬಂದರೆ ಅವುಗಳನ್ನ ತೆರಯಬೇಡಿ, ಅವರು ಹೇಳೋದನ್ನ ಫಾಲೋ ಮಾಡಬೇಡಿ ಅನ್ನೋ ಸಲಹೆ ಕೊಟ್ಟಿದ್ದಾರೆ. ಅಲ್ಲದೇ ಸರಳವಾಗಿ ಹಣ ಸಂಪಾದಿಸಬಹುದು ಅನ್ನೋ ಯಾವುದೇ ಸಂದೇಶಗಳ ಬಗ್ಗೆ ಎಚ್ಚರ ವಹಿಸಿದ್ರೆ ಸೂಕ್ತ ಅನ್ನೋ ಎಚ್ಚರಿಕೆ ಕೂಡ ನೀಡಿದ್ದಾರೆ.  ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಪುನಿತ್ ಕೆರೆಹಳ್ಳಿಗೆ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧ


TAGGED:bengalurucyber crimemoneyscamಬೆಂಗಳೂರುವರ್ಕ್ ಫ್ರಮ್ ಹೋಂಸೈಬರ್ ಸ್ಕ್ಯಾಮ್ಹಣ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Chikkamagaluru marriage
Chikkamagaluru

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ATMನಿಂದ ಲವ್ ಶುರು, ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

Public TV
By Public TV
3 minutes ago
Chinnaswamy Stadium RCB
Bengaluru City

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್ – ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌

Public TV
By Public TV
5 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ನಾಳೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

Public TV
By Public TV
25 minutes ago
Minister D. Sudhakars health condition is critical 2
Bengaluru City

ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ

Public TV
By Public TV
42 minutes ago
daily horoscope dina bhavishya
Astrology

ದಿನ ಭವಿಷ್ಯ 24-04-2026

Public TV
By Public TV
1 hour ago
Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
8 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?