ಲಂಡನ್: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆಗಿನ ಸಂಬಂಧ ಬಹಿರಂಗವಾದ ಬೆನ್ನಲ್ಲೇ ಬ್ರಿಟನ್ ಮಾಜಿ ರಾಜಕುಮಾರ ಮತ್ತು ರಾಜ ಚಾರ್ಲ್ಸ್ (King Charles) ಅವರ ಸಹೋದರ ಆಂಡ್ರ‍್ಯೂ ಮೌಂಟ್ ಬ್ಯಾಟನ್-ವಿಂಡ್ಸರ್(Andrew Mountbatten-Windsor) ಅವರನ್ನು ಬಂಧಿಸಲಾಗಿದೆ.
ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ, ಅವರ 66ನೇ ಹುಟ್ಟುಹಬ್ಬದಂದೇ ಅರೆಸ್ಟ್ ಮಾಡಲಾಗಿದೆ. ಬ್ರಿಟನ್ ಪೊಲೀಸ್ ಪಡೆ (UK Police) ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ತಲುಪಿ ಬಂಧಿಸಿದೆ. ಈ ಘಟನೆ ಆಂಡ್ರ‍್ಯೂ ಮತ್ತು ಎಪ್‌ಸ್ಟೀನ್ (Epstein) ನಡುವಿನ ಸಂಬಂಧದ ಬಗ್ಗೆ ಹಲವು ವರ್ಷಗಳಿಂದ ನಡೆಯುತ್ತಿರುವ ವಿವಾದಕ್ಕೆ ಹೊಸ ತಿರುವು ನೀಡಿದೆ.
ಆಂಡ್ರ್ಯೂ ಹೆಸರು ಉಲ್ಲೇಖಿಸದ ಪೊಲೀಸರು, ತಮ್ಮ ಹೇಳಿಕೆಯಲ್ಲಿ ತನಿಖೆಯ ಸಮಗ್ರತೆ ಮತ್ತು ನಿಷ್ಪಕ್ಷತೆಯನ್ನು ಕಾಪಾಡುವುದು ಮುಖ್ಯ ಎಂದು ಒತ್ತಿ ಹೇಳಿದ್ದಾರೆ. ಮಾಜಿ ರಾಜಕುಮಾರನಾದರೂ ಬಂಧನಕ್ಕೆ ನೊಟೀಸ್ ಕೊಟ್ಟಿರಲಿಲ್ಲ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ
ಈ ಬಗ್ಗೆ ಕಿಂಗ್ ಚಾರ್ಲ್ಸ್ ಪ್ರತಿಕ್ರಿಯಿಸಿ, ಕಾನೂನು ತನ್ನ ಕೆಲಸ ಮಾಡಲಿ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಮುಕ್ತ-ನ್ಯಾಯಸಮ್ಮತ ತನಿಖೆಯ ವಿಶ್ವಾಸ ಇದೆ ಎಂದಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ.
ಮಕ್ಕಳ ಲೈಂಗಿಕ ಅಪರಾಧಿ ಎಪ್‌ಸ್ಟೀನ್ ಜೊತೆಗೆ ಬ್ರಿಟನ್‌ನ ಅತ್ಯಮೂಲ್ಯ ಮಾಹಿತಿಯನ್ನು ಇ-ಮೇಲ್ ಮೂಲಕ ಹಂಚಿಕೆ ಹಾಗೂ ಹೆಣ್ಮಕ್ಕಳ ಕಳ್ಳಸಾಗಾಣಿಕೆಯಲ್ಲಿ ರಾಜವಂಶದ ಹೆಸರು ಥಳಕು ಹಾಕಿಕೊಂಡಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಆಂಡ್ರ್ಯೂಗೆ ಡ್ಯೂಕ್ ಆಫ್ ಯಾರ್ಕ್ ಬಿರುದು ಕೊಡಲಾಗಿತ್ತು. ಆದರೆ ಆರೋಪ ಕೇಳಿ ಬಂದ ಬೆನ್ನಲ್ಲೇ 2025ರ ನವೆಂಬರ್‌ನಲ್ಲಿ ವಾಪಸ್ ಪಡೆಯಲಾಗಿತ್ತು. ಮೊದಲಿನಿಂದಲೂ ಆಂಡ್ರ್ಯೂಸ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದರು.

