ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ಬಜೆಟ್ ಮಂಡನೆಗೆ ಸಿದ್ಧತೆ, ಸಿಎಂ ಗಾದಿಗಾಗಿ ಡಿಕೆ ಶಿವಕುಮಾರ್ (DK Shivakumar) ಸರ್ಕಸ್ ಮಧ್ಯೆ ಕಾಂಗ್ರೆಸ್‌ನಲ್ಲಿ (Congress) ವಿದೇಶಿ ಪ್ರವಾಸ ರಾಜಕೀಯ ಜೋರಾಗಿ ನಡೆಯುತ್ತಿದೆ. ಸುಮಾರು 10ಕ್ಕೂ ಹೆಚ್ಚು ಎಂಎಲ್‌ಎಗಳು, ಎಂಎಲ್‌ಸಿಗಳು ಇವತ್ತು ರಾತ್ರಿ ವಿಮಾನ ಹತ್ತಲು ಸಿದ್ದರಾಗಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗೆ (Australia, New Zealand) ತೆರಳಲಿದ್ದು ಮಾರ್ಚ್ ಮೊದಲ ವಾರ ವಾಪಸ್ ಬರಲಿದ್ದಾರೆ. ಮೂಲಗಳ ಪ್ರಕಾರ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಈ ಟೂರ್ ಪ್ಲಾನ್ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ವೆಂಕಟೇಶ್ ಈ ಪ್ರವಾಸದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಮಹದೇವಪ್ಪ ದೊಡ್ಡವರು, ಈಗ ಅವ್ರೂ ನಮ್ಮ ಹೈಕಮಾಂಡ್‌ನ ಭಾಗ: ಡಿಕೆಶಿ ಸೈಲೆಂಟ್ ಪಂಚ್
ಪಕ್ಷದ ಶಾಸಕರ ಪ್ರವಾಸ ಲೋಕಲ್ ವಿಚಾರ. ಸಿಎಂ-ಡಿಸಿಎಂ ಮಾತನಾಡುತ್ತಾರೆ ಎಂಧು ಎಐಸಿಸಿ ಅಧ್ಯಕ್ಷ ಖರ್ಗೆ ಹೇಳಿದರೆ ನನಗೆ ಯಾವುದೇ ಮಾಹಿತಿ ಇಲ್ಲ. ವೈಯುಕ್ತಿಕ ವಿಚಾರ ಇದ್ಯೋ ಅಥವಾ ಯಾರಾದರೂ ಕಳಿಸುತ್ತಿದ್ದಾರೋ.? ಯಾರಾದರೂ ಸ್ಪಾನ್ಸರ್ ಮಾಡ್ತಿದ್ದಾರೋ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿರುವುದು ಅಚ್ಚರಿ ಮೂಡಿಸಿದೆ.
ಇದು ವೈಯಕ್ತಿಕ ಪ್ರವಾಸ. ಕುಟುಂಬ ಸಮೇತ ಹೋಗುತ್ತಿದ್ದೇವೆ ಎಂದು ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಮ್ಮಯ್ಯ, ದೇವೇಂದ್ರಪ್ಪ ಹೇಳಿದ್ದಾರೆ. ಇದನ್ನೂ ಓದಿ: ನಾನು ರೈತನ ಮಗ, ಕೃಷಿ ಅಧ್ಯಯನಕ್ಕೆ ವಿದೇಶ ಪ್ರವಾಸಕ್ಕೆ ಹೋಗ್ತಿದ್ದೇನೆ: ತಮ್ಮಯ್ಯ
ವಿದೇಶ ಪ್ರವಾಸಕ್ಕೆ ಶಾಸಕರು:
* ಪುಟ್ಟರಂಗಶೆಟ್ಟಿ, ಚಾಮರಾಜನಗರ
* ಎ.ಆರ್ ಕೃಷ್ಣಮೂರ್ತಿ, ಕೊಳ್ಳೇಗಾಲ (ಚಾಮರಾಜನಗರ)
* ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು
* ದೇವೇಂದ್ರಪ್ಪ, ಜಗಳೂರು ಶಾಸಕ (ದಾವಣಗೆರೆ)
* ಬಿ.ಎಂ ನಾಗರಾಜ್, ಸಿರಗುಪ್ಪ (ಬಳ್ಳಾರಿ)
* ಹಂಪನಗೌಡ ಬಾದರ್ಲಿ, ಸಿಂಧನೂರು (ರಾಯಚೂರು)
* ಬಸನಗೌಡ ದದ್ದಲ್, ರಾಯಚೂರು ಗ್ರಾಮೀಣ
* ಯಶವಂತರಾಯಗೌಡ ಪಾಟೀಲ್, ಇಂಡಿ (ವಿಜಯಪುರ)
* ಅಲ್ಲಮಪ್ರಭು ಪಾಟೀಲ್, ಕಲಬುರಗಿ ದಕ್ಷಿಣ (ಕಲಬುರಗಿ)
ವಿದೇಶ ಪ್ರವಾಸದಲ್ಲಿ ಕಾಂಗ್ರೆಸ್ ಎಂಎಲ್‌ಸಿಗಳು
* ವಸಂತಕುಮಾರ್
* ಶರಣಗೌಡ ಬಯ್ಯಾಪೂರ
* ಡಿ. ತಿಮ್ಮಯ್ಯ

