ಕೊಲಂಬೋ: ಟಿ20 ವಿಶ್ವಕಪ್‌ನಲ್ಲಿ ಭಾರತದ (Team India) ವಿರುದ್ಧ ಹೀನಾಯವಾಗಿ ಸೋತಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಪಾಕಿಸ್ತಾನ(Pakistan) ಈಗ ಇಬ್ಬರು ಸ್ಟಾರ್ ಆಟಗಾರರನ್ನು ಕೈಬಿಡಲು ಮುಂದಾಗಿದೆ.
ಬುಧವಾರ ಕೊಲಂಬೋದಲ್ಲಿ ನಮೀಬಿಯಾ(Namibia) ವಿರುದ್ಧ ಕೊನೆಯ ಪಂದ್ಯವನ್ನು ಆಡಲಿದೆ. ಈ ಪಂದ್ಯವನ್ನು ಗೆದ್ದರಷ್ಟೇ ಪಾಕ್ ಸೂಪರ್ 8 ಪ್ರವೇಶಿಸಲಿದೆ. ಈ ಪಂದ್ಯಕ್ಕೆ ಬ್ಯಾಟರ್ ಬಾಬರ್ ಅಜಂ (Babar Azam) ಮತ್ತು ವೇಗಿ ಶಾಹಿನ್ ಶಾ ಅಫ್ರಿದಿ(Shaheen Shah Afridi) ಅವರನ್ನು ಕೈಬಿಡಲು ಪಾಕ್ ತಂಡ ಮುಂದಾಗಿದೆ.
ಭಾರತ ವಿರುದ್ಧದ 61 ರನ್‌ಗಳ ಸೋಲಿನ ಬಳಿಕ ತಂಡದ ಪ್ರದರ್ಶನದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ತಂಡದ ವ್ಯವಸ್ಥಾಪಕ ನವೇದ್ ಅಕ್ರಮ್ ಚೀಮಾ ಅವರಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರೀ ಮುಖಭಂಗ – ಪಾಕ್ ಸೋಲೋದು ಗೊತ್ತಾಗ್ತಿದ್ದಂತೆ ಮೈದಾನದಿಂದ ಪೇರಿಕಿತ್ತ ಪಿಸಿಬಿ ಅಧ್ಯಕ್ಷ

ನಮೀಬಿಯಾ ವಿರುದ್ಧ ಬಾಬರ್ ಮತ್ತು ಶಾಹೀನ್ ಅವರ ಜಾಗದಲ್ಲಿ ಸಲ್ಮಾನ್ ಮಿರ್ಜಾ/ನಸೀಮ್ ಶಾ ಮತ್ತು ಫಖರ್ ಜಮಾನ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಎ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಸೂಪರ್ 8 ಪ್ರವೇಶಿಸಿದೆ. ಇನ್ನೊಂದು ಕಡೆ 2 ಪಂದ್ಯ ಗೆದ್ದಿರುವ ಅಮೆರಿಕ ನೆಟ್ ರನ್ ರೇಟ್ ಆಧಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಒಂದೇ ದಿನ ಪಾಕ್ ವಿರುದ್ಧ ಎರಡು ಪಂದ್ಯ ಗೆದ್ದ ಭಾರತ

