ಬೆಂಗಳೂರು: ಶಕ್ತಿ ಯೋಜನೆ ದುರ್ಬಳಕೆಯಾಗುತ್ತಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಮಗಳ ಆಧಾರ್ ಬಳಸಿ ಅಮ್ಮ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.
ಮಗಳ ಆಧಾರ್ ಕಾರ್ಡ್ ಬಳಸಿ ಅಮ್ಮ ಬಸ್‌ನಲ್ಲಿ ಪ್ರಯಾಣಿಸಿದ್ದು, ಕಂಡಕ್ಟರ್ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಕಿರಿಕ್ ಮಾಡಿದ್ದಾರೆ. ನಾನು ವಯಸ್ಸಾದವಳು, ಯಾರೂ ನನ್ನ ಕೇಳಿಲ್ಲ, ನೀನ್ಯಾರು ಕೇಳೋಕೆ? ಎಂದು ವಾಗ್ವಾದ ಮಾಡಿದ್ದಾರೆ. ಇದನ್ನೂ ಓದಿ: ಅಂದು ಅಭಿಷೇಕ್ ಇಂದು ಇಶಾನ್ ಕಿಶನ್ – ಅಫ್ರಿದಿಗೆ ಬಿಸಿ ಮುಟ್ಟಿಸಿದ ಓಪನರ್ಸ್
ಶಕ್ತಿ ಯೋಜನೆ ಜಾರಿಯಾದಾಗಿಂದ ಮಗಳ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸಿದ್ದೇನೆ. ಎಲ್ಲಿವರೆಗೂ ಫ್ರೀ ಕೊಡ್ತಾರೋ ಅಲ್ಲಿವರೆಗೂ ಓಡಾಡುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

