ಮುಂಬೈ: ಮುಲುಂಡ್ (Mulund) ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ನ (Metro Pillar) ಒಂದು ಭಾಗ ಕುಸಿದು ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಶನಿವಾರ ಮಧ್ಯಾಹ್ನ ಮುಲುಂಡ್ ಪ್ರದೇಶದ ಜಾನ್ಸನ್ & ಜಾನ್ಸನ್ ಕಂಪನಿಯ ಬಳಿ ಘಟನೆ ನಡೆದಿದೆ. ಎಲ್‌ಬಿಎಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬದ ಸಿಮೆಂಟ್ ಭಾಗವು ಏಕಾಏಕಿ ಕುಸಿದು ಕೆಳಗೆ ಹಾದುಹೋಗುತ್ತಿದ್ದ ಆಟೋರೀಕ್ಷಾ (Auto) ಹಾಗೂ ಕಾರಿನ (Car) ಮೇಲೆ ಬಿದ್ದಿದೆ. ಸಿಮೆಂಟ್ ವಾಲ್ ಬಿದ್ದ ರಭಸಕ್ಕೆ ಕಾರು, ಆಟೋ ಅಪ್ಪಚ್ಚಿಯಾಗಿವೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಕುಸಿದು ದುರಂತ – ಆಟೋ, ಕಾರು ಅಪ್ಪಚ್ಚಿ!
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮಧ್ಯಾಹ್ನ 12:20ರ ಸುಮಾರಿಗೆ ಈ ಘಟನೆ ನಡೆದಿದೆ. ಸಿಮೆಂಟ್ ವಾಲ್ ಬಿದ್ದ ಪರಿಣಾಮ ಆಟೋರೀಕ್ಷಾದಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಮ್ಮ ಸರ್ಕಾರದ ಸಾಧನೆ ಹೇಳೋಕೆ ಒಂದು ದಿನ ಸಾಲೋದಿಲ್ಲ: ಸಿದ್ದರಾಮಯ್ಯ
ಮಾಹಿತಿ ಪಡೆದ ನಂತರ, ಮುಂಬೈ ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು, ಮೆಟ್ರೋ ಪ್ರಾಧಿಕಾರದ ಸಿಬ್ಬಂದಿ, ವಾರ್ಡ್ ಸಿಬ್ಬಂದಿ ಹಾಗೂ 108 ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಕಾರ್ಯಪ್ರವೃತ್ತರಾದ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಸ್ಥಳದಿಂದ ಮೆಟ್ರೋ ಪಿಲ್ಲರ್ ಅವಶೇಷಗಳನ್ನ ತೆರವುಗೊಳಿಸಲಾಯಿತು. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 7 ವರ್ಷ – ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ
ಸದ್ಯ ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಲ್ಲದೇ ನಿರ್ಮಾಣ ಕಾರ್ಯದ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನ ಅನುಸರಿಸಲಾಗುತ್ತಿದೆಯೇ ಅನ್ನೋದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ದುರಂತದ ಕುರಿತು ತನಿಖೆಗೆ ಎಂಎಂಆರ್‌ಡಿಎ ನಿರ್ದೇಶಕ ಬಸವರಾಜ್ ಎಂ ಭದ್ರಗೊಂಡ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಘಟ್ಟದಲ್ಲಿ ಹೊಸ ಪ್ರಭೇದ ಸಿಹಿನೀರಿನ ಏಡಿ ಪತ್ತೆ

