ಡೆಹ್ರಾಡೂನ್: ಚೀನಾದ ಜೊತೆಗೆ ಭಾರತ (India) ಸಂಬಂಧ ಚೆನ್ನಾಗಿರಲು ಟಿಬೆಟ್ ಚೀನಾದ ಭಾಗ ಎಂದು ಭಾವಿಸಿ ನೆಹರು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ್ದರು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ (Chief of Defence Staff General Anil Chauhan) ಹೇಳಿಕೆ ನೀಡಿದ್ದಾರೆ. ನಿವೃತ್ತ ಸೇನಾಧಿಕಾರಿ ಜನರಲ್ ಎಂಎಂ ನರವಾಣೆ ಪುಸ್ತಕ ವಿವಾದ ಎಬ್ಬಿಸಿದ ಸಮಯದಲ್ಲಿಯೇ ಈ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮ್ಯಾಕ್‌ಮಹೋನ್ ರೇಖೆಗೆ ಸಂಬಂಧಿಸಿದಂತೆ ಲಡಾಖ್‌ನ ಹಲವು ಭಾಗಗಳ ಮೇಲೆ ಭಾರತಕ್ಕೆ ಅಧಿಕಾರ ಇರುವ ಬಗ್ಗೆ ಭಾರತದ ಮೊದಲ ಪ್ರಧಾನಿ ನೆಹರುಗೆ ಗೊತ್ತಿತ್ತು. ಬಹುಶಃ ಅದಕ್ಕಾಗಿ ನೆಹರು ಪಂಚಶೀಲ ಒಪ್ಪಂದವನ್ನು ಮಾಡಿಕೊಂಡರು ಅನಿಸುತ್ತೆ. ಹಿಮಾಲಯನ್ ಬಫರ್ ಭಾರತ ಮತ್ತು ಟಿಬೆಟ್ ನಡುವಿನ ಗಡಿರೇಖೆಯಾಗಿತ್ತು. ಮುಂದೆ ಅದು ಭಾರತ ಮತ್ತು ಚೀನಾದ ಗಡಿಯಾಗಿ ಬದಲಾಯ್ತು. ಭಾರತ-ಚೀನಾ ರಾಜತಾಂತ್ರಿಕ ಸಂಬಂಧ ಸುಧಾರಿಸುತ್ತಿದ್ದರೂ ಕೂಡ ಗಡಿಯಲ್ಲಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ಅವಘಡ: ಸಿಎಂ ಪೂಜೆ ಸಲ್ಲಿಸುವಾಗ ಬೆಂಕಿ, ತಪ್ಪಿತು ಅನಾಹುತ
890 ಕಿ.ಮೀ ಮೆಕ್‌ಮಹಾನ್ ರೇಖೆಯು ಭಾರತ ಮತ್ತು ಚೀನಾ ನಡುವಿನ ಗಡಿಯಾಗಿದ್ದು, ಇದು ನಿರ್ದಿಷ್ಟವಾಗಿ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ನಡುವಿನ ಗಡಿಯನ್ನು ಗುರುತಿಸುತ್ತದೆ. ಈ ಬಗ್ಗೆ 1913ರ ಶಿಮ್ಲಾ ಸಮಾವೇಶದ ಸಮಯದಲ್ಲಿ ಮಾತುಕತೆ ನಡೆಸಲಾಯಿತು. ಆ ಬಳಿಕ 1954ರಲ್ಲಿ ಭಾರತ ಟಿಬೆಟ್‌ನ್ನ ಚೀನಾದ ಭಾಗ ಎಂದು ಒಪ್ಪಿಕೊಂಡು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಚೀನಾ ಇದನ್ನು ಕೇವಲ ವ್ಯಾಪಾರ ಒಪ್ಪಂದ ಅಂತ ಪರಿಗಣಿಸಿತ್ತೆ ಹೊರತು, ಇದಕ್ಕೂ ಗಡಿ ವಿವಾದಕ್ಕೂ ಯಾವುದೇ ಸಂಬಂಧ ಕಲ್ಪಿಸಲಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಮ್ಯಾಕ್‌ಮಹೋನ್ ರೇಖೆಯ ವಿವಾದವನ್ನು ಬಿಟ್ಟು ಹೋದರು ಎಂದು ತಿಳಿಸಿದ್ದಾರೆ.
ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸುವುದರಿಂದ ಗಡಿ ಸಮಸ್ಯೆ ಶಾಂತಿಯುತವಾಗಿ ಇತ್ಯರ್ಥವಾಗುತ್ತದೆ ಎಂದು ಭಾರತ ಭಾವಿಸಿದೆ. ಸ್ವತಂತ್ರ ಭಾರತವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಉತ್ಸುಕವಾಗಿದೆ. ಹೀಗಾಗಿ ಭಾರತ ಪಂಚಶೀಲ ಒಪ್ಪಂದವನ್ನು ಮುಂದುವರೆಸಿತು. ಬಳಿಕ ಎರಡೂ ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು. ಪಂಚಶೀಲ ಒಪ್ಪಂದವು ಭಾರತ ಮತ್ತು ಚೀನಾ ಪರಸ್ಪರ ಗೌರವ ಮತ್ತು ಶಾಂತಿ, ಸಹಬಾಳ್ವೆಗಾಗಿ ಒಪ್ಪಿಕೊಂಡ ಚೌಕಟ್ಟಾಗಿದೆ. ಜೊತೆಗೆ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆಯೂ ತಿಳಿಸುತ್ತದೆ. ಆದರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೀನಾ ಈ ಒಪ್ಪಂದವನ್ನು ತುಂಬಾ ವಿಭಿನ್ನವಾಗಿ ನೋಡಿದೆ. ಆದರೆ ಈ ಒಪ್ಪಂದವನ್ನು ವ್ಯಾಪಾರಕ್ಕಾಗಿ ಮಾತ್ರ ಮಾತುಕತೆ ನಡೆಸಲಾಗಿದೆ. ಅದು ಯಾವುದೇ ರೀತಿ ಗಡಿಯಲ್ಲಿ ತನ್ನ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಚೀನಾದ ನಿಲುವಾಗಿತ್ತು ಎಂದು ಒತ್ತಿ ಹೇಳಿದ್ದಾರೆ.
ಇನ್ನೂ ಕಳೆದ ವರ್ಷ ಪ್ರಧಾನಿ ಮೋದಿ ಬೀಜಿಂಗ್‌ನಲ್ಲಿ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದಾಗ ಚೀನಾದ ಅಧ್ಯಕ್ಷರು ಪಂಚಶೀಲ ಒಪ್ಪಂದವನ್ನು ಎರಡೂ ದೇಶಗಳು ಪಾಲಿಸಬೇಕು ಹಾಗೂ ಉತ್ತೇಜಿಸಬೇಕು ಎಂದಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಬಿಎನ್‌ಪಿ ಕ್ಲೀನ್ ಸ್ವೀಪ್| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ

