ರಾಯಚೂರು: ಇಲ್ಲಿಂದ ಬೆಂಗಳೂರಿಗೆ (Bengaluru) ಹೊರಟಿದ್ದ ಗ್ರೀನ್ ಲೈನ್ ಖಾಸಗಿ ಬಸ್ (GreenLine Private Bus) ಆಂಧ್ರದ ಕರ್ನೂಲ್ ಜಿಲ್ಲೆಯ ಆಲೂರು ಬಳಿ ಭೀಕರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ (Head-on collision) ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೆಂಕಿ ಕೂಡ ಹೊತ್ತಿಕೊಂಡಿದೆ. ಈ ವೇಳೆ ಬೆಂಕಿ ಹಾರಿಸಿದ ಬಸ್‌ನ ಪ್ರಯಾಣಿಕರು ಗಾಯಗೊಂಡ ಕಾರು ಚಾಲಕನನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಸುಮಾರು 2 ಗಂಟೆ ಚಳಿಯಲ್ಲಿ ಒದ್ದಾಡಿದ್ದಾರೆ. ಇದನ್ನೂ ಓದಿ: ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್‌ಗೆ ಕರೆ – 9 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊಟೆಸ್ಟ್


