ಹಾಸನ: ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಬೇಲೂರು (Belur) ಪೊಲೀಸ್ ಠಾಣೆಗೆ ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ದಿಢೀರ್ ಭೇಟಿ ನೀಡಿದರು.
ಠಾಣೆಯ ಇನ್ಸ್‌ಪೆಕ್ಟರ್ ರೇವಣ್ಣ ಅವರ ಬಳಿ, ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ? ನಿಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಎಷ್ಟು ಅಪರಾಧ ಪ್ರಕರಣಗಳು ನಡೆದಿವೆ? ನೀವು ಎಸ್ಪಿ ಅವರಿಗೆ ಏನು ವರದಿ ಕೊಟ್ಟಿದ್ದೀರಾ ಕೊಡಿ ಎಂದು ಪ್ರಶ್ನಿಸಿ ಪ್ರಿಂಟ್‌ಔಟ್ ತೆಗೆಸಿಕೊಂಡರು. ಇದನ್ನೂ ಓದಿ: ಪ್ರೇಮಿಗಳ ದಿನ ವಿಶ್ವವಿಖ್ಯಾತ ನಂದಿ ಗಿರಿಧಾಮ ಬಂದ್
ನಿಮ್ಮ ಸ್ಟೇಷನ್ ವ್ಯಾಪ್ತಿಯಲ್ಲಿ ಎಷ್ಟು ಕಾಫಿ ಎಸ್ಟೇಟ್‌ಗಳಿವೆ? ಕಾಫಿ ತೋಟಗಳಲ್ಲಿ ಎಷ್ಟು ಜನ ಕಾರ್ಮಿಕರಿದ್ದಾರೆ? ಈ ಕಾರ್ಮಿಕರೆಲ್ಲಾ ಎಲ್ಲಿಯವರು? ಹೊರ ದೇಶದಿಂದ ಬಂದವರನ್ನು ಹೇಗೆ ಕಂಡು ಹಿಡಿಯುತ್ತೀರಿ? ಯಾರೋ ಒಬ್ಬ ಪಾಕಿಸ್ತಾನ, ಆಫ್ಘಾನಿಸ್ತಾನದಿಂದ ಬಂದವರನ್ನು ಹೇಗೆ ಕಂಡು ಹಿಡಿಯುತ್ತೀರಾ? ನಿಮ್ಮ ಎಸ್‌ಬಿ ಡ್ಯೂಟಿಯವನ್ನು ಕರೆಯಿರಿ, ಅವರು ಏನು ರಿಪೋರ್ಟ್ ಕೊಟ್ಟಿದ್ದಾನಾ ನೋಡೋಣ ಎಂದು ಪ್ರಶ್ನಿಸಿದರು.
ಬೇಲೂರು ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ ಉತ್ತರಿಸಿ ನಮ್ಮ ಬಳಿ ಲಿಸ್ಟ್ ಇದೆ. ಹೊರಗಿನಿಂದ ಬಂದರೆ ಗೊತ್ತಾಗುತ್ತೆ. ಎಸ್‌ಬಿ ಡ್ಯೂಟಿಯವರು ಅಪಘಾತವಾಗಿ ರಜೆ ಇದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: 5 ವರ್ಷ ಸಿದ್ದರಾಮಯ್ಯ ಯಾಕೆ ಸಿಎಂ ಆಗಿರಬಾರದು: ಪರಮೇಶ್ವರ್

