ಹಾಯ್ ಮಧುರ… ನಿನ್ನ ಹೆಸರಿಗೆ ತಕ್ಕ ಹಾಗೆಯೇ ಮಧು ನೀನು.. ಅದೆಷ್ಟು ಸ್ವೀಟು…! ಅವತ್ತು ಅದೊಂದು ಆಕಸ್ಮಿಕ… ಅಲ್ಲಿ ಯಾವುದೇ ಪ್ಲ್ಯಾನ್ ಇರಲೇ ಇಲ್ಲ.. ನಾನು ಬಂದು ತಬ್ಬಿದ್ದು.. ನೀನು ಕೈಯಿಂದ ಬಿಡಿಸಿಕೊಳ್ಳುವಂತೆ ನಟಿಸಿ.. ತುಟಿಗಳಿಗೆ ತುಟಿ ಸೇರಿಸಿದ್ದು.. ನಿನ್ನ ಕತ್ತಲ್ಲಿ ಅಚ್ಚಾಗಿ ಉಳಿದ ಆ ಲವ್ ಬೈಟ್… ನನ್ನಂಗಿಗೆ ಅಂಟಿದ ನಿನ್ನ ಲಿಫ್ಸ್ಟಿಕ್‌ನ ಗೋರಂಟಿಯ ಬಣ್ಣ ಇನ್ನೂ ಹೋಗಿಲ್ಲ.. ಅದೆಲ್ಲ ನೆನೆದರೆ ಇವತ್ತಿಗೂ ರೋಮಾಂಚನವೇ..
ಇಬ್ಬರ ಮನಸ್ಸು ಸೇರಿ ನಾವಿಬ್ರೂ ಪ್ರೇಮದ ಕರಾರಿಗೆ ಒತ್ತಿದ ಮುದ್ರೆ ಅದು.. ಆದ್ರೂ ನಮ್ಮಿಬ್ಬರ ನಡುವೆ ಇದ್ದ ಆ ಸ್ನೇಹದಲ್ಲಿ ಈ ರೀತಿಯ ಆಟವೊಂದು ಯಾಕೆ ನಡಿತೋ? ಇಷ್ಟೆಲ್ಲ ಆದ ಮೇಲೂ, ನಮ್ಮ ನಡುವೆ ಪ್ರೀತಿ ಪ್ರೇಮದ ಚರ್ಚೆಗಳೇ ಆಗಲಿಲ್ಲ.. ಇಂತಹ ನೂರಾರು ಪ್ರಶ್ನೆಗಳಿದಾವೆ.. ನಿನಗೂ ಇದಾವೆ ಅಂತ ಗೊತ್ತು..! ಅದಕ್ಕೆಲ್ಲ ಮೌನವೇ ಉತ್ತರನಾ? ಕಾಲದ ಕೈಗೆ ಎಲ್ಲದನ್ನೂ ಒಪ್ಪಿಸಿ ಕುಳಿತು ಬಿಡೋದಾ..? ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!

ಅದಾದ ಮೇಲೂ ಇಬ್ಬರೇ ಅದೆಷ್ಟೋ ದಿನ ಪಾರ್ಕ್‌ನಲ್ಲಿ ಸಾವಿರಾರು ಹೆಜ್ಜೆ ನಡೆದ್ವಿ.. ಏಕಾಂತದಲ್ಲಿ ಅದೆಷ್ಟೋ ಹುಣ್ಣಿಮೆ ಚಂದ್ರನನ್ನ ಕಣ್ತುಂಬಿಕೊಂಡ್ವಿ.. ಮತ್ತೆ ಆ ಮುತ್ತಿಗಾಗಿ ನೀನಾಗಲಿ.. ಜೇನಿಗಾಗಿ ನಾನಾಗಲಿ ಕಾಡಲೇ ಇಲ್ಲ.. ಆದ್ರೆ ನಿನ್ನ, ನನ್ನ ಕಣ್ಣಲ್ಲಿ ಆಸೆಗಳು ಉಕ್ಕುತ್ತಲೇ ಇದ್ವು.. ಅದಕ್ಕೆಲ್ಲ ಯಾವ ನಾಚಿಕೆಯೂ ಬ್ರೇಕ್ ಹಾಕಿಲ್ಲ.. ಹಾಗಂತ ಮಂದುವರೆಯಲೂ ಇಲ್ಲ.. ಪ್ರೇಮದ.. ಆ ಮುತ್ತಿನ ಮಳೆಯ ಬಗ್ಗೆ ಯಾವ ಚರ್ಚೆಯೂ ಆಗಲೇ ಇಲ್ಲ..!
ಐ ಲವ್ ಯೂ ಅಂತಾನೇ ಯಾವ ಪ್ರೇಮವೂ ಆರಂಭ ಆಗಬೇಕಿಲ್ಲ… ಹಾಗೆಲ್ಲ ಹೇಳಿ ಕೊಟ್ಟ ಮುತ್ತು ಅದಲ್ಲ… ನೀನು ಅಷ್ಟೇ, ಹಾಗೇ ಹೇಳಿ ಪಡೆದಿದ್ದಲ್ಲ.. ನನಗೆ ಆ ಒಂದು ಮುತ್ತು ಕೋಟಿಯಾಗಲಿ ಅನ್ನೋ ಆಸೆ.. ಇಲ್ಲಿ ಇದೊಂದೇ ಒಪ್ಪಂದವಾಗಲಿ. ಇದಕ್ಕೆಲ್ಲ ಅಧಿಕೃತ ಮುದ್ರೆ ಬಿದ್ರೆ ಇನ್ನೂ ಚೆಂದ.. ಇದನ್ನೂ ಓದಿ: ನಿನ್ನ ಜಡೆಯಿಂದ ಜಾರಿದ ಪ್ರೇಮ ಪುಷ್ಪದ ಕಂಪು..!
ಬಂದು ಮುತ್ತು ಕೊಟ್ಟವನಿಗೆ.. ಏನೇನೋ ಕತೆ ಹೇಳೋನಿಗೆ ಇದನ್ನೂ ಬಂದು ಹೇಳೊಕಾಗಲ್ವಾ.. ಇಷ್ಟುದ್ದ ಲೆಟರ್ ಬೇಕಾ ಅಂದ್ಕೋಬೇಡ.. ಹಾಗೆಲ್ಲ ಹೇಳೋಕೆ ಆಗಲ್ಲ.. ಭಯ… ಅವತ್ತು ಆ ಕ್ಷಣದಲ್ಲಿ ಇರಲಿಲ್ಲ ಅಷ್ಟೇ..!
ನಿನ್ನ ತುಟಿ ಚಿಪ್ಪಿನ ಅಂಚಲ್ಲಿ ಸಿಗೋ ಕೋಟಿ ಮುತ್ತಿನ ಉತ್ತರಕ್ಕಾಗಿ ಕಾಯುವ… ಪ್ರೇಮದ ಕಡಲ ಬೇಟೆಗಾರ.
– ಗೋಪಾಲಕೃಷ್ಣ

