ಮಂಡ್ಯ: ಕರ್ನಾಟಕ (Karnataka) ಶೇಕಡ 60ರಷ್ಟು ಕೃಷಿಯಾಧಾರಿತ ರಾಜ್ಯವಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಒತ್ತು ನೀಡಿಲ್ಲ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಕೇಂದ್ರ ಬಜೆಟ್ (Union Budget 2026) ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದ ಈ ಬಜೆಟ್ ರಾಜ್ಯಕ್ಕೆ ನಿರಾಶದಾಯಕ ಬಜೆಟ್ ಆಗಿದೆ. ರಾಜ್ಯದ 19 ಸಂಸದರಿದ್ದು, ಮೂವರು ಮಂತ್ರಿಗಳಿದ್ದಾರೆ. ಬಿಜೆಪಿ ಸಂಸದರು, ಮಂತ್ರಿಗಳು ಒತ್ತಡ ಹಾಕಿ ರಾಜ್ಯಕ್ಕೆ ಯೋಜನೆ ತರಲು ಮುಂದಾಗಬೇಕಿತ್ತು, ಅದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ 2.78 ಲಕ್ಷ ಕೋಟಿ ಮೀಸಲು: ಅಶ್ವಿನಿ ವೈಷ್ಣವ್
ಇದು ರೈತ, ಜನರ ವಿರೋಧಿ ಬಜೆಟ್ ಆಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿ ತನ್ನದೇ ಬೆನ್ನು ತಟ್ಟಿಕೊಳ್ಳುತ್ತಿದೆ. ಇದರಲ್ಲಿ ಜನರಿಗೆ ಅನುಕೂಲವಾಗುವಂಥ ಯಾವುದೇ ಯೋಜನೆಗಳಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ದೇಶದ ಬಡವರು, ರೈತರು ಸೇರಿದಂತೆ ಎಲ್ಲರ ಹಿತದೃಷ್ಟಿಯ ಬಜೆಟ್ ಮಂಡನೆಯಾಗಿದೆ: ಬಿವೈವಿ

