ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ನಾನಾ ಕ್ಷೇತ್ರಗಳಿಗೆ ವಿವಿಧ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಔಷಧಿಗಳು ಸೇರಿದಂತೆ ಹಲವಾರು ವಸ್ತುಗಳ ದರ ಇಳಿಕೆ ಮಾಡಿದ್ದು, ಜನಸಾಮಾನ್ಯರಿಗೆ ಸಂತಸ ತಂದಿದೆ. ಅಲ್ಲದೇ ಕೆಲವೊಂದಿಷ್ಟು ವಸ್ತುಗಳ ದರ ಏರಿಕೆ ಮಾಡಲಾಗಿದೆ.
ಯಾವೆಲ್ಲಾ ವಸ್ತುಗಳ ದರ ಇಳಿಕೆ?
– ಚರ್ಮ ಉತ್ಪನ್ನಗಳು
– ಮೊಬಿಲಿಟಿ ಫೋನ್
– ಇವಿ ಬ್ಯಾಟರಿ
– ಶುಗರ್, ಕ್ಯಾನ್ಸರ್ ಔಷಧಿ
– 17 ಕ್ಯಾನ್ಸರ್ ಔಷಧ ದರ
– ಸೋಲಾರ್ ಉತ್ಪನ್ನ
– ಜವಳಿ
– ಬೀಡಿ
– ವಿದೇಶಿ ಯಾತ್ರೆ
– ಬಯೋಗ್ಯಾಸ್ ಮಿಶ್ರಿತ ಸಿಎನ್ಜಿ
– ಮೈಕ್ರೋ ವೇವ್ ಒವೆನ್
– ಕಸ್ಟಮ್ಸ್ ಸುಂಕ
– ಸೆಣಬು ಉತ್ಪನ್ನ ಅಗ್ಗ
– 7 ಗಂಭೀರ ರೋಗಗಳ ಔಷಧಿ ದರ ಇಳಿಕೆ
ಯಾವುದು ಏರಿಕೆ?
-ಸಿಗರೇಟ್
-ಮದ್ಯ
-ತಂಬಾಕು
-ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳು
-ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು
-ಅನಗತ್ಯ ಆಮದು ವಸ್ತುಗಳು
-ವಿದೇಶದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳು
-ನಿರ್ದಿಷ್ಟ ಟೆಲಿಕಾಂ ಉಪಕರಣಗಳು
ಒಂದು ಗಂಟೆ 26 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಿದ್ದಾರೆ. ಇನ್ನು, ದೇಶದ ಇತಿಹಾಸದಲ್ಲಿ 2ನೇ ಬಾರಿ ಭಾನುವಾರ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, 12 ವರ್ಷಗಳಲ್ಲಿ ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಗುರುತಿಸಲ್ಪಟ್ಟಿದೆ. ನಮ್ಮ ಸರ್ಕಾರವೂ ವಾಕ್ಚಾತುರ್ಯಕ್ಕಿಂತ ಸುಧಾರಣೆಗೆ ಆದ್ಯತೆ ನೀಡಿದೆ. 2026ರ ಬಜೆಟ್ ಅನ್ನು ಯುವಶಕ್ತಿ ಮುನ್ನಡೆಸಲಿದೆ ಅಂದರು.

