Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: UPI ಮೂಲಕ ಪಿಎಫ್‌ ಹಣ ಬ್ಯಾಂಕ್‌ ಖಾತೆಗೆ – ಯಾವಾಗಿಂದ? ವರ್ಗಾವಣೆ ಮಾಡೋದು ಹೇಗೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | UPI ಮೂಲಕ ಪಿಎಫ್‌ ಹಣ ಬ್ಯಾಂಕ್‌ ಖಾತೆಗೆ – ಯಾವಾಗಿಂದ? ವರ್ಗಾವಣೆ ಮಾಡೋದು ಹೇಗೆ?

Districts

UPI ಮೂಲಕ ಪಿಎಫ್‌ ಹಣ ಬ್ಯಾಂಕ್‌ ಖಾತೆಗೆ – ಯಾವಾಗಿಂದ? ವರ್ಗಾವಣೆ ಮಾಡೋದು ಹೇಗೆ?

Public TV
Last updated: January 31, 2026 3:49 pm
Public TV
Share
4 Min Read
PF
SHARE

ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿನ ಮಹತ್ವದ ಉಳಿತಾಯ ಯೋಜನೆಯೆಂದರೆ ಅದು ನೌಕರರ ಭವಿಷ್ಯ ನಿಧಿ. ನೌಕರರಿಗೆ ಪ್ರಮುಖವಾಗಿ ಉಳಿತಾಯದ ದೃಷ್ಟಿಯಿಂದ ಸಹಕಾರಿಯಾಗುವ ಈ ನಿಧಿಯಲ್ಲಿ ಒಂದಿಲ್ಲೊಂದು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅದರಂತೆ ಇದೀಗ ಇಲಾಖೆಯು ಕೆಲವು ಬದಲಾವಣೆಗಳನ್ನು ತರಲು ಮುಂದಾಗಿದೆ. ಪಿಎಫ್ ಹಣವನ್ನು UPI  ಮೂಲಕ ವರ್ಗಾವಣೆ ಮಾಡುವುದು ಹೇಗೆ? ಈ ಬದಲಾವಣೆ ಯಾವಾಗಿಂದ ಜಾರಿ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಮೊದಲು ಪಿಎಫ್ ಹಣ ಪಡೆಯಲು ಉದ್ಯೋಗಿಗಳು, ನಿವೃತ್ತ ಉದ್ಯೋಗಿಗಳು ಆಫೀಸಿಗೆ ಅಲೆದಾಡಬೇಕಿತ್ತು. ಇಲ್ಲದಿದ್ದರೆ ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಿಬೇಕಾಗಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್‌ ಹಣವಿತ್ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಕಾರ್ಮಿಕ ಸಚಿವಾಲಯ ಅದಕ್ಕೆ ಅನುಮೋದನೆ ನೀಡಿತ್ತು. 

PF 3

ಕೇಂದ್ರ ಸರ್ಕಾರವು EPFO ಮೂಲಕ ಪಿಎಫ್‌ ಹಣ ಪಡೆಯುವ ನಿಯಮಗಳನ್ನು ಸಡಿಲಗೊಳಿಸಿದೆ. ಈ ಮೂಲಕ ಮುಂಗಡ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ ಇದ್ದ 1 ಲಕ್ಷದ ಮಿತಿಯನ್ನು ಈಗ 5 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.

ತುರ್ತು ಹಣಕಾಸು ಅಗತ್ಯ ಇರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕೋವಿಡ್ 19 ಸಂದರ್ಭದಲ್ಲಿ ಇಪಿಎಫ್‌ಒ ಮೊದಲ ಬಾರಿಗೆ ಆನ್‌ಲೈನ್ ಆಟೋ ಕ್ಲೈಮ್ ಸೆಟಲ್‌ಮೆಂಟ್ ಆಯ್ಕೆಯನ್ನು ಪರಿಚಯಿಸಿತ್ತು. ಈ ಮೂಲಕ ಪ್ರತಿವರ್ಷ ಸುಮಾರು 5 ಲಕ್ಷದಷ್ಟು ಇಪಿಎಫ್ ಕ್ಷೇಮ್‌ಗಳನ್ನು ಇಪಿಎಫ್‌ಒ ಇತ್ಯರ್ಥಪಡಿಸುತ್ತದೆ. ಆಗ ಕೇವಲ 50,000 ರೂ. ವರೆಗಿನ ಹಣವನ್ನು ಪಡೆಯಲು ಅವಕಾಶವಿತ್ತು. ಮೇ 2024ರಲ್ಲಿ ಈ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಮೊದಲು ಕೇವಲ ಅನಾರೋಗ್ಯ ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಾತ್ರ ಪಿಎಫ್ ಹಣವನ್ನು ಪಡೆಯಲು ಸಾಧ್ಯವಿತ್ತು. ಆದರೆ ಈಗ ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೂ ಮುಂಗಡ ಹಣ ಪಡೆಯುವ ಸೌಲಭ್ಯವನ್ನು ವಿಸ್ತರಿಸಲಾಗಿದೆ.

PF 5

ದೇಶದಲ್ಲಿ ಸುಮಾರು ಎಂಟು ಕೋಟಿ ಅಷ್ಟು ಸಕ್ರಿಯ ಸದಸ್ಯರನ್ನು ಇಪಿಎಫ್ಓ ಹೊಂದಿದೆ. ಇದರಲ್ಲಿ ಸುಮಾರು 28 ಲಕ್ಷ ಕೋಟಿ ರೂ.ಯಷ್ಟು ನಿಧಿ ಇದೆ. ಮುಂಬರುವ ಏಪ್ರಿಲ್ ನಿಂದ ನೌಕರರು ಅಥವಾ ಇಪಿಎಫ್ಓ ಸದಸ್ಯರು ತಮ್ಮ ಪಿಎಫ್  ಹಣವನ್ನು ಭೀಮ್ ಅಪ್ಲಿಕೇಶನ್ ಮೂಲಕ ಯುಪಿಐ ಬಳಸಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳಬಹುದಾಗಿದೆ.

ಈ ಪಿಎಫ್ ನಲ್ಲಿರುವ ನಿಮ್ಮ ಉಳಿತಾಯ ಹಣವನ್ನ ಸಂಪೂರ್ಣವಾಗಿ ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಿಗೆ ಅದರ ಒಂದು ಭಾಗವನ್ನು ಹೊರತುಪಡಿಸಿ ಇನ್ನುಳಿದ ಮೊತ್ತವನ್ನು ನೌಕರರು ತಮ್ಮ ಖಾತೆಗೆ ಯುಪಿಐ ಮೂಲಕ ವರ್ಗಾಯಿಸಿಕೊಳ್ಳಬಹುದು. ಸದ್ಯ ನೌಕರರು ತಮ್ಮ ಪಿಎಫ್ ಹಣವನ್ನು ಪಡೆಯಲು ಅರ್ಜಿ ಅಥವಾ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಆದರೆ ಒಮ್ಮೆ ಈ ಬದಲಾವಣೆ ಜಾರಿಯಾದರೆ ತ್ವರಿತವಾಗಿ ತಮ್ಮ ಪಿಎಫ್ ಹಣವನ್ನು ಖಾತೆಗೆ ವರ್ಗಾಯಿಸಿಕೊಳ್ಳಬಹುದು.

PF 4

ಪಿಎಫ್‌ ಹಿಂಪಡೆಯುವುದು ಹೇಗೆ?
ಯುಪಿಐ ಮುಖಾಂತರ:

  • EPFO ಪೋರ್ಟಲ್ ಅಥವಾ ಮೊಬೈಲ್ ಆಪ್‌ಗೆ ಲಾಗಿನ್ ಆಗಿ.
  • Withdraw PFʼ ಆಯ್ಕೆ ಮಾಡಿ.
  • ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಯುಪಿಐ ಐಡಿ ಎಂಟರ್ ಮಾಡಿ.
  • ಒಟಿಪಿ ದೃಢೀಕರಣದ ನಂತರ, ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ವರ್ಗಾವಣೆ ಹೇಗೆ? 

  • ಭವಿಷ್ಯನಿಧಿಯನ್ನು ಹಿಂತೆಗೆದುಕೊಳ್ಳುವುದು ಮಾತ್ರವಲ್ಲ, ಬಾಕಿ ಉಳಿದಿರುವ ಮೊತ್ತವನ್ನೂ ಯುಪಿಐ ಮೂಲಕ ಪರಿಶೀಲಿಸಿಕೊಳ್ಳಬಹುದು.
  • ಇಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣವು ಸುರಕ್ಷಿತವಾಗಿ ವರ್ಗಾವಣೆಯಾಗಲು, ಚಂದಾದಾರರು ತಮ್ಮ ಲಿಂಕ್ ಮಾಡಲಾದ ಯುಪಿಐ ಪಿನ್ ಬಳಸಬೇಕು. 
  • ಒಮ್ಮೆ ಹಣವು ಬ್ಯಾಂಕ್ ಖಾತೆಗೆ ಜಮಾಗೊಂಡ ನಂತರ, ಆ ಮೊತ್ತವನ್ನು ಇನ್ನೊಂದು ಖಾತೆಗೆ ವರ್ಗಾಯಿಸಿಕೊಳ್ಳಲು ಅಥವಾ ಎಟಿಎಂ ಮೂಲಕ ತೆಗೆದುಕೊಳ್ಳಲು ಚಂದಾದಾರರಿಗೆ ಅವಕಾಶವಿರುತ್ತದೆ.
  • ಸದ್ಯ ಯುಪಿಐ ಮೂಲಕ ಪಾವತಿ ವ್ಯವಸ್ಥೆಯಲ್ಲಿನ ಸಾಫ್ಟ್‌ವೇರ್ ಲೋಪಗಳನ್ನು ಇಪಿಎಫ್‌ಒ ಸರಿಪಡಿಸುತ್ತಿದೆ. 

PF 1

ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ಇತರ ಉದ್ದೇಶಗಳಿಗಾಗಿ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಹಣವನ್ನ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು. ಸದಸ್ಯರ ಜೊತೆಗೆ ಇಲಾಖೆಗೂ ಕೂಡ ಇದರಿಂದ ಲಾಭವಾಗುತ್ತದೆ. ಈ ಯೋಜನೆ ಜಾರಿಗೆ ಬಂದರೆ ಸುಮಾರು 8 ಕೋಟಿಯಷ್ಟು ಚಂದಾದಾರರಿಗೆ ಅನುಕೂಲವಾಗಲಿದೆ.

ಇನ್ನು ಈ ಪಿಎಫ್ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಿಕೊಳ್ಳುವುದು ಜಾರಿ ತರುವುದರಿಂದ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಆರಂಭಿಕ ಮಿತಿಯನ್ನು 25,000 ರೂ.ಗೆ ನಿರ್ಧರಿಸಲಾಗಿದೆ. ಅಂದರೆ ಪ್ರತಿ ಬಾರಿ ನೀವು ಹಣವನ್ನ ವರ್ಗಾವಣೆ ಮಾಡಲು ಬಯಸಿದರೆ ಅದು 25000 ರೂ.ಗೆ ಸಮನಾಗಿರಬೇಕು.

ಇದರ ಜೊತೆಗೆ ಇಪಿಎಫ್ಓ 3.0 ಎಂದು ಕರೆಯಲ್ಪಡುವ ಈ ಹೊಸ ಬದಲಾವಣೆ ನೌಕರರಿಗೆ ಇನ್ನಷ್ಟು ಸುಲಭವಾಗಲಿದೆ. ಮೂಲಗಳ ಪ್ರಕಾರ, ವೆಬ್ಸೈಟ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಭಿವೃದ್ಧಿಪಡಿಸಿದ ಭಾಷಾ ಅನುವಾದದ ಕೆಲವು ಪರಿಕರಗಳು ಸಿದ್ಧಗೊಳ್ಳಲಿವೆ. ನೌಕರರು ತಮ್ಮ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ತಿಳಿಯಬೇಕು ಎಂಬ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗುತ್ತಿದೆ. 

Money

ಆನ್ ಲೈನ್‌ನಲ್ಲೇ ಸ್ವಯಂ ತಿದ್ದುಪಡಿಗೆ ಅವಕಾಶ:
ನಿಮ್ಮ ಪಿಎಫ್ ಖಾತೆಗೆ ಯುಎಎನ್ ನಂಬರ್ ಇದ್ದರೆ, ಆ ನಂಬರ್ ಆಧಾರ್ ನಂಬರ್‌ಗೆ ಲಿಂಕ್ ಆಗಿದ್ದರೆ, ಅಂಥ ಖಾತೆಗಳನ್ನು ಓಪನ್ ಮಾಡಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತಿದ್ದುಪಡಿ ಮಾಡುವುದು ಹಾಗೂ ಕಾಲಕ್ಕೆ ತಕ್ಕಂತೆ ಹೊಸ ಮಾಹಿತಿಗಳನ್ನು ನೀವೇ ಮಾಡಿಕೊಳ್ಳಬಹುದು. ಅದಕ್ಕಾಗಿ ಪಿಎಫ್ ಕಚೇರಿಗೆ ಹೋಗುವ ಅಗತ್ಯವಿಲ್ಲ. 

ಈ ಮೊದಲು ನೌಕರರ ಭವಿಷ್ಯ ನಿಧಿ ಯೋಜನೆಯಲ್ಲಿ ಉಳಿತಾಯವಾದ ಹಣವನ್ನು ಡ್ರಾ ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಿತ್ತು. ಆದರೆ ಇದೀಗ ಇಲಾಖೆಯು ಕೆಲವು ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಅದರಂತೆ ಇದೀಗ UPI  ಮೂಲಕ ನೌಕರರು ಸುಲಭವಾಗಿ ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು.

ನೌಕರರು ಸುಲಭವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಮೊದಲು ಇಲಾಖೆಯು ಪಿಎಫ್ ಹಣವನ್ನು ಎಟಿಎಂ ಮೂಲಕ ಸುಲಭವಾಗಿ ಡ್ರಾ ಮಾಡಿಕೊಳ್ಳುವ ಬದಲಾವಣೆಯನ್ನು ಜಾರಿಗೊಳಿಸಿತ್ತು. ಅದರಂತೆ ಕೇವಲ ಮೂರು ದಿನಗಳಲ್ಲಿ ಪಿಎಫ್ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಲು ತಿಳಿಸಿತ್ತು. ಇದೀಗ ಹೊಸ ಬದಲಾವಣೆಯೊಂದಿಗೆ ನೌಕರರಿಗೆ ಇನ್ನಷ್ಟು ಸುಲಭೀಕರಿಸಲು ಯೋಚಿಸಿದೆ.

TAGGED:Central govtEPFOPFPF Moneyಇಪಿಎಫ್‌ಒಕೇಂದ್ರ ಸರ್ಕಾರಪಿಎಫ್ಪಿಎಫ್‌ ಹಣ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories
Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories

You Might Also Like

Body of boy who went missing 3 days ago found in Bengaluru water board sump 2
Bengaluru City

3 ದಿನದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಜಲಮಂಡಳಿಯ ಸಂಪ್‌ನಲ್ಲಿ ಶವವಾಗಿ ಪತ್ತೆ

Public TV
By Public TV
5 minutes ago
Budget 2026 1 1
Latest

ವಿಕಸಿತ ಭಾರತಕ್ಕೆ ಕೇಂದ್ರದ ಯುವಶಕ್ತಿ ಬಜೆಟ್ – ಜೀರಾಮ್‌ಜೀ ಯೋಜನೆಗೆ 95,692 ಕೋಟಿ ಮೀಸಲು; ಹಿಂದಿಗಿಂತಲೂ ಹೆಚ್ಚು!

Public TV
By Public TV
8 hours ago
Hassan Car Accident
Crime

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಓರ್ವ ಸಾವು, ಇಬ್ಬರು ಗಂಭೀರ

Public TV
By Public TV
9 hours ago
Ind vs Pak U19 1
Cricket

U19 World Cup | ಭಾರತಕ್ಕೆ 58 ರನ್‌ಗಳ ಭರ್ಜರಿ ಜಯ – ಮೈದಾನದಲ್ಲೇ ಕಣ್ಣೀರಿಟ್ಟ ಪಾಕ್‌ ಕ್ರಿಕೆಟಿಗ

Public TV
By Public TV
9 hours ago
India vs Pakistan 1
Cricket

Boycott | ವಿಶ್ವಕಪ್‌ ಟೂರ್ನಿ ಆಡ್ತೀವಿ, ಭಾರತದ ವಿರುದ್ಧ ಆಡಲ್ಲ – ಪಾಕಿಸ್ತಾನ ಅಚ್ಚರಿ ನಿರ್ಧಾರ

Public TV
By Public TV
10 hours ago
Chaluvarayaswamy
Districts

ಕೃಷಿಯಾಧಾರಿತ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿಲ್ಲ ಒತ್ತು: ಚಲುವರಾಯಸ್ವಾಮಿ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?