ಬೆಂಗಳೂರು: ಐಪಿಎಲ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ವಿರಾಟ್ ಕೊಹ್ಲಿ (Virat Kohli) ಮುರಿದಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ದಾಖಲೆಯ 1,159 ರನ್ ಗಳಿಸಿರುವ ಕೊಹ್ಲಿ, ಈ ದಾಖಲೆಯನ್ನು ಮೀರಲು ಸಿಎಸ್‌ಕೆ ವಿರುದ್ಧ ಕೇವಲ 14 ರನ್‌ಗಳ ಅಗತ್ಯವಿತ್ತು. ಇಂದು ಬೆಂಗಳೂರಲ್ಲಿ ನಡೆಯುತ್ತಿರುವ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್, ಕೊನೆಯ ಓವರ್‌ನಲ್ಲಿ ಪಂತ್ 3 ಬೌಂಡರಿ – ಲಕ್ನೋಗೆ ರೋಚಕ ಜಯ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದೆ.
ಆರ್‌ಸಿಬಿ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಆಡುತ್ತಿದೆ. ವಿರಾಟ್ ಕೊಹ್ಲಿ 18 ಬಾಲ್‌ಗೆ 28 ರನ್ ಗಳಿಸಿ ಔಟಾಗಿದ್ದಾರೆ. ಇದನ್ನೂ ಓದಿ: ಐಪಿಎಲ್ ಅನ್ನು ಪಿಎಸ್‌ಎಲ್ ಹಿಂದಿಕ್ಕಿ ವಿಶ್ವದ ನಂ.1 ಲೀಗ್ ಆಗುತ್ತೆ: ಮೊಹ್ಸಿನ್ ನಖ್ವಿ

