ನವದೆಹಲಿ: ಗಣರಾಜ್ಯೋತ್ಸವದ (Republic Day 2026) ಅಂಗವಾಗಿ ದೆಹಲಿಯ ಕರ್ತವ್ಯಪಥ್ ನಲ್ಲಿ ನಡೆಯುವ ಪರೇಡ್ ನಲ್ಲಿ (Republic Day Parade) ಹೆಜ್ಜೆ ಹಾಕಲು ರಾಜ್ಯದ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ವಿವಿಧ ಜಿಲ್ಲೆಗಳ 6 ಮಂದಿ ವಿದ್ಯಾರ್ಥಿನಿಯರು (Students) ಹಾಗೂ 6 ಮಂದಿ ವಿದ್ಯಾರ್ಥಿಗಳು ಕರ್ನಾಟವನ್ನ ಪ್ರತಿನಿಧಿಸಲಿದ್ದಾರೆ. ಎನ್‌ಸಿಸಿ ಭಾಗವಾಗಿ ಆಯ್ಕೆಯಾಗಿರುವ ಇವರು ಎನ್‌ಸಿಸಿ 200 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗಾಗಲೇ ಕರ್ತವ್ಯಪಥ್ ನಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ, ಹಾಗೂ ಪ್ರಧಾನಿ ನರೇಂದ್ರ ಮುಂದೇ ಪರೇಡ್ ನಡೆಸಲು ಕಾತುರದಿಂದ ಕಾಯುತ್ತಿದ್ದಾರೆ.
ಕರ್ನಾಟಕದ ಸ್ತಬ್ಧಚಿತ್ರ ʻಮಿಲ್ಲೆಟ್ ಟು ಮೈಕ್ರೋಚಿಪ್ʼ
ಇನ್ನೂ 77ನೇ ಗಣರಾಜ್ಯೋತ್ಸವ ಹಿನ್ನೆಲೆ ಕರ್ನಾಟಕದ ಸ್ತಬ್ಧಚಿತ್ರ ಸಿದ್ಧವಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಪಯಣವನ್ನು ಸಂಕೇತಿಸುವ ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ (ಮಿಲ್ಲೆಟ್ ಟು ಮೈಕ್ರೋಚಿಪ್) ವಿಷಯದ ಮೇಲೆ ಈ ಬಾರಿ ಟ್ಯಾಬ್ಲೊ ಸಿದ್ಧಪಡಿಸಲಾಗಿದೆ. ಆದ್ರೆ ಈ ಸ್ತಬ್ಧಚಿತ್ರ ಕರ್ತವ್ಯಪಥ್‌ನಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗಿಯಾಗಲ್ಲ, ಬದಲಿಗೆ ಕೆಂಪು ಕೋಟೆಯಲ್ಲಿ ಆಯೋಜಿಸುವ ಭಾರತ ಪರ್ವದಲ್ಲಿ ಪ್ರದರ್ಶಿಸಲಾಗುತ್ತಿದೆ. ಇತರೆ ರಾಜ್ಯಗಳಿಗೂ ಅವಕಾಶ ನೀಡುವ ದೃಷ್ಠಿಯಿಂದ ಕರ್ನಾಟಕದ ಟ್ಯಾಬ್ಲೋ ಅನ್ನು ಈ ಬಾರಿ ಪರೇಡ್ ನಿಂದ ಹೊರಗಿಡಲಾಗಿದೆ.
ರಾಜ್ಯೋತ್ಸವಕ್ಕೆ ರಾಜಧಾನಿ ಸಿದ್ಧ
77ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯ ಕರ್ತವ್ಯ ಪಥ್‌ನಲ್ಲಿ ನಡೆಯಲಿರುವ ಪರೇಡ್‌ಗೆ ಕ್ಷಣಗಣನೆ ಶುರುವಾಗಿದೆ. ವಂದೇ ಭಾರತ್ ಗೀತೆಗೆ 150 ವರ್ಷ ಹಾಗೂ ಆಪರೇಷನ್ ಸಿಂಧೂರ ವಿಷಯಗಳನ್ನುಟ್ಟುಕೊಂಡು ಈ ಬಾರಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಹದ್ದಿನ ಕಣ್ಣಿಡಲಾಗಿದೆ.



