ಮಂಡ್ಯ: 2026 ವರ್ಷದ ಮೊದಲ ಹಬ್ಬ ಸಂಕ್ರಾತಿಯಾದ (Makara Sankranti) ಇಂದು ಸೂರ್ಯ ತನ್ನ ಪಥವನ್ನು ಉತ್ತರಾಯಣಕ್ಕೆ ಬದಲಿಸಿದ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಕಾಶಿ ಚಂದ್ರಮೌಳೇಶ್ವರ (Kashi Chandramouleshwara Temple) ಸ್ವಾಮಿಯ ಗರ್ಭ ಗುಡಿಯ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ.
ಪ್ರತಿ ವರ್ಷ ಸಂಕ್ರಾಂತಿ ದಿನದಂದು ಸೂರ್ಯ ರಶ್ಮಿ ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಪ್ರತೀತಿ ಇದೆ. ಅದೇ ರೀತಿ ಇಂದು ಬೆಳಗ್ಗೆ 7:50ರ ವೇಳೆಯಲ್ಲಿ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬಿದ್ದಿದೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?
ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳುತ್ತಿದ್ದಂತೆ ಕಾಶಿ ಚಂದ್ರಮೌಳೇಶ್ವರಸ್ಚಾಮಿಗೆ ವಿವಿಧ ಅಭಿಷೇಕ ಮಾಡಿ ವಿಶೇಷ ಪೂಜೆಯನ್ನು ಚಂದ್ರನ ಆಶ್ರಮದ ಪೀಠಾಧ್ಯಕ್ಷ ಮಹಾಂತ ಶಿವಯೋಗಿ ಸ್ವಾಮೀಜಿ ನೆರವೇರಿಸಿದರು. ಈ ವಿಶೇಷ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ. ಇದನ್ನೂ ಓದಿ: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

